ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕಾಂಗ್ರೆಸ್ ನಾಯಕಿ ಅಕ್ಷತಾಗೆ ಮಿಡಲ್ ಫಿಂಗರ್ ತೋರಿಸಿದ ಯುವಕ!

Published : Feb 27, 2025, 03:59 PM ISTUpdated : Feb 27, 2025, 05:20 PM IST
ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕಾಂಗ್ರೆಸ್ ನಾಯಕಿ ಅಕ್ಷತಾಗೆ ಮಿಡಲ್ ಫಿಂಗರ್ ತೋರಿಸಿದ ಯುವಕ!

ಸಾರಾಂಶ

ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ ತೋರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದಿದ್ದು, ಯುವತಿ ದೂರಿನ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು (ಫೆ.27): ಅತಿ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿದ ನಗರವೆಂಬ ಅಪಖ್ಯಾತಿಗೆ ಒಳಾಗಾದ ನಮ್ಮ ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಪ್ರಶ್ನೆ ಮಾಡಿದ ಕಾಂಗ್ರೆಸ್ ನಾಯಕಿಗೆ ಕಾರಿನಲ್ಲಿದ್ದ ವ್ಯಕ್ತಿ ಅಶ್ಲೀಲ ರೂಪದಲ್ಲಿ ಮಿಡಲ್ ಫಿಂಗರ್ ತೋರಿಸಿ ಪರಾರಿ ಆಗಿದ್ದಾನೆ. ಇದೀಗ ದುರ್ವರ್ತನೆ ತೋರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಬೆಂಗಳೂರು-ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ನಿನ್ನೆ ಸಂಜೆ ವೇಳೆ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದ ಯುವತಿಗೆ ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿ ಅಶ್ಲೀಲ ಸಿಂಬಲ್ ತೋರಿಸಿ ಕಿರಿಕ್ ಮಾಡಿಕೊಂಡಿದ್ದಾರೆ. ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷತಾ ರವಿಕುಮಾರ್ ಅವರಿಗೆ ಅಶ್ಲೀಲ ಸಿಂಬಲ್ ತೋರಿಸಿದ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ಆಧರಿಸಿ ದೂರು ದಾಖಲಿಸಿಕೊಂಡ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ನಂತರ, ಟ್ರಾಫಿಕ್ ರೂಲ್ಸ್ ಫಾಲೋ ಮಾಡದೆ ಡ್ರೈವಿಂಗ್ ಮಾಡ್ತಿದ್ದ ಕಾರು ಚಾಲಕ (ಕಾರಿನ ಸಂಖ್ಯೆ KA 41 M 4191) ಹರ್ಷ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಬೆಂಗಳೂರು ಪೊಲೀಸರು ವಿಚಾರಣೆಗಾಗಿ ಠಾಣೆಯಲ್ಲಿ ಕೂರಿಸಿದ್ದು, ದೂರು ಕೊಟ್ಟಿರುವ ಯುವತಿಯನ್ನು ಸಂಪರ್ಕಿಸಿ ಠಾಣೆಗೆ ಬಂದು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನು ಯುವತಿ ಹೇಳಿಕೆಯನ್ನು ಪಡೆದು ಅಶ್ಲೀಲವಾಗಿ ಬೆರಳು ತೋರಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಹೋರಾಟಕ್ಕೆ ಬೆಂಬಲ ಕೇಳಿದ ಕನ್ನಡ ಪರ ಹೋರಾಟಗಾರನ ಮೈಬಣ್ಣ ಲೇವಡಿ ಮಾಡಿದ್ರಾ ಉಡಾಳ್‌ ಪಾವ್ಯಾ!

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿಡುವ ಕಾಂಗ್ರೆಸ್ ನಾಯಕಿ ಅಕ್ಷತಾ ರವಿಕುಮಾರ್ ಅವರು, ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಗೋಪಾಲನ್ ಮಾಲ್ ಬಳಿ  ಘಟನೆ ಆಗಿದೆ. ಹಿಂದೆಯಿಂದ ಬಂದು ಹಾರ್ನ್ ಮಾಡಿದರು. ಆಗ ನನಗೆ ಜಾಗ ಬಿಡಲು ಸಾಧ್ಯವಾಗಿಲ್ಲ. ಏಕಾಏಕಿ ಬಯ್ಯೋದಕ್ಕೆ ಪ್ರಾರಂಭ ಮಾಡಿದರು. ನಾನು ಮತ್ತೆ ಪ್ರಶ್ನೇ ಮಾಡಿದ್ದಕ್ಕೆ  ಅಶ್ಲೀಲವಾಗಿ ಬೆರಳು ತೋರಿಸಿದರು. ಆ ಕಾರಣಕ್ಕೆ ನಾನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳೋಣ ಅಂತ ನಿರ್ಧಾರ ಮಾಡಿದೆ. ಅವರನ್ನು ಪ್ರಶ್ನೆ ಮಾಡೋಣ ಪ್ರಯತ್ನ ಪಟ್ಟರೂ ಅವರು ನನ್ನಿಂದ ತಪ್ಪಿಸಿಕೊಂಡು ಹೊರಟು ಹೋದರು. ಆದ್ದರಿಂದ ತುಂಬಾ ಬೇಸರವಾಯಿತು.

ಕಾರಿನಲ್ಲಿ ಹೋಗುವಾಗ ಅಶ್ಲೀಲವಾಗಿ ಬೆರಳು ತೋರಿಸಿದ ವಿಡಿಯೋವನ್ನು ನಾನು ಟ್ವಿಟ್ಟರ್‌ನಲ್ಲಿ ಹಾಕಿದ್ದೆ. ನಾನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ 30 ನಿಮಿಷಗಳಲ್ಲಿ ಚಾಮರಾಜಪೇಟೆ ಪೊಲೀಸರು ಕರೆ ಮಾಡಿ ಮಾಹಿತಿ ಪಡೆದರು. ಕೇಸ್ ದಾಖಲಿಸಿಕೊಂಡಿರೋದಾಗಿ ಹೇಳಿದರು. ಆಗ ನನಗೆ ತುಂಬಾನೇ ಖುಷಿಯಾಯ್ತು. ನಮ್ಮ ಪೊಲೀಸ್ ಇಲಾಖೆ ಇಷ್ಟು ಮುಂದುವರೆದಿದೆ ಎಂದು ಹೆಮ್ಮೆಯಾಗುತ್ತಿದೆ. ಇಷ್ಟು ಬೇಗ ಪ್ರತಿಕ್ರಿಯೆ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಈಗ ತುಂಬಾ ದೈರ್ಯ ಬಂದಿದೆ. ಟ್ರಾಫಿಕ್‌ನಲ್ಲಿ ನಾವು ಎಷ್ಟೇ ಒತ್ತಡಕ್ಕೆ  ಒಳಗಾದರೂ ಈ ರೀತಿ ಮಾತನಾಡಬಾರದು. ಅವರ ಜೊತೆಯೂ ಮಹಿಳೆ ಇದ್ದರೂ, ಇದನ್ನು ಉತ್ತೇಜನ ಮಾಡುತ್ತಿದ್ದರು. ಇದೀಗ ಆ ವ್ಯಕ್ತಿ ಬಂಧನವಾಗಿರೋ ಮಾಹಿತಿ ತಿಳಿದಿಲ್ಲ. ಪೊಲೀಸರು ಠಾಣೆಗೆ ಬರುವಂತೆ ಹೇಳಿದ್ದಾರೆ ಹೋಗುತ್ತೇನೆ ಎಂದು ಅಕ್ಷತಾ ರವಿಕುಮಾರ್ ಹೇಳಿದರು.

ಇದನ್ನೂ ಓದಿ: ಹುಷಾರಾಗಿರಿ...ಈ ರೀತಿ ಇಡ್ಲಿ ತಿಂದರೆ ಬರುತ್ತೆ ಕ್ಯಾನ್ಸರ್, ವರದಿಯಿಂದ ಬಹಿರಂಗ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್