ಚಾಮರಾಜನಗರ: ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಥಳಿತ; ಶಿಕ್ಷಕಿ ಅಮಾನತು

Published : Sep 17, 2025, 05:33 PM IST
Chamarajanagar teachers beat student

ಸಾರಾಂಶ

ಚಾಮರಾಜನಗರದ ಯಳಂದೂರಿನ ಎಸ್‌ಡಿವಿಎಸ್ ಶಾಲೆಯಲ್ಲಿ, ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ ವಿದ್ಯಾರ್ಥಿಗೆ ಶಿಕ್ಷಕಿ ಭಾನುಮತಿ ಮನಸೋಇಚ್ಛೆ ಥಳಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಯ ಮೈಮೇಲೆ ಬಾಸುಂಡೆಗಳಾಗಿದ್ದು, ಪಾಲಕರ ಆಕ್ರೋಶದ ಹಿನ್ನೆಲೆಯಲ್ಲಿ ಶಾಲಾಡಳಿತ ಮಂಡಳಿ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿದೆ.

ಚಾಮರಾಜನಗರ (ಸೆ.17): ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಪ್ರಕರಣದಲ್ಲಿ ಶಿಕ್ಷಕಿಯನ್ನ ಶಾಲಾಡಳಿತ ಮಂಡಳಿ ವಜಾಗೊಳಿಸಿದೆ ಯಳಂದೂರಿನ ಎಸ್‌ಡಿವಿಎಸ್ ಶಾಲೆಯಲ್ಲಿ ಘಟನೆ ನಡೆದಿತ್ತು. ಶಿಕ್ಷಕಿ ಭಾನುಮತಿ ಎಂಬುವವರು ವಿದ್ಯಾರ್ಥಿಯೊರ್ವನ ಮೇಲೆ ಮನಸೋಇಚ್ಛೆ ಥಳಿತ ನಡೆಸಿದ್ದರು.

ಈ ಘಟನೆಯಿಂದ ಪಾಲಕರು ಆಕ್ರೋಶಗೊಂಡಿದ್ದರು. ಶಿಕ್ಷಕಿಯ ಪೈಶಾಚಿಕ ಕೃತ್ಯ ನಡೆಸಿದ ಹಿನ್ನೆಲೆ ಶಾಲಾಡಳಿತ ಮಂಡಳಿ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿದ್ದು, ಕಾನೂನು ಕ್ರಮಕ್ಕೆ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: ಬೀದರ್: ಊಟದಲ್ಲಿ ಹುಳು ಪ್ರತ್ಯಕ್ಷ, ಪ್ರಶ್ನೆ ಮಾಡಿದ ವಿದ್ಯಾರ್ಥಿಗೆ ಥಳಿತ!

ಶಿಕ್ಷಕಿಯ ರೌದ್ರಾವತಾರಕ್ಕೆ ವಿದ್ಯಾರ್ಥಿ ಮೈಮೇಲೆಲ್ಲ ಬಾಸುಂಡೆ!

ವಿದ್ಯಾರ್ಥಿ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಶಿಕ್ಷಕಿ ಭಾನುಮತಿಯವರ ಬಳಿ ಎರಡು-ಮೂರು ಬಾರಿ ಅನುಮತಿ ಕೇಳಿದ್ದಾನೆ. ಆದರೆ, ಶಿಕ್ಷಕಿಯು 'ಮೊದಲು ನೋಟ್ಸ್ ಬರೆದುಕೋ' ಎಂದು ಹೇಳಿ, ವಿದ್ಯಾರ್ಥಿಯ ಅವಸರವನ್ನು ನಿರ್ಲಕ್ಷಿಸಿದ್ದಾರೆ. ವಿದ್ಯಾರ್ಥಿಯು ಪದೇಪದೇ ಕೇಳಿಕೊಂಡಾಗ, ಶಿಕ್ಷಕಿ ದೊಣ್ಣೆಯಿಂದ ವಿದ್ಯಾರ್ಥಿಯ ಕೈ, ಭುಜ ಮತ್ತು ತಿಕದ ಭಾಗದ ಮೇಲೆ ಥಳಿಸಿದ್ದಾರೆ. ವಿದ್ಯಾರ್ಥಿಯ ಮೈಮೆಲೆಲ್ಲಾ ಬಾಸುಂಡೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!