ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬೆನ್ನಲ್ಲೇ ಚಾಮರಾಜನಗರದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಚಾಮರಾಜನಗರ (ಆ.09): ರಾಜ್ಯದಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಹೃದಯಾಘಾತದ ಸಾವಿನಿಂದ ಕಂಬನಿ ಮಿಡಿಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹೌದು ಇಡೀ ರಾಜ್ಯವೇ ಹರೆಯದ ವಯಸ್ಸಿನಲ್ಲಿಯೇ ಬ್ಯಾಂಕಾಕ್‌ನಲ್ಲಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಕಂಬನಿ ಮಿಡಿಯುತ್ತಿದೆ. ಇಂತಹ ವೇಳೆಯಲ್ಲಿ ರಾಜ್ಯದ ಗಡಿಜಿಲ್ಲೆ ಚಾಮರಾಜನಗರದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸಾಯಬಾರದ ವಯಸ್ಸಿನಲ್ಲಿ ಮಧ್ಯ ವಯಸ್ಕರು ಸಾವನ್ನಪ್ಪಿದ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು, ಈಗ ಕೇವಲ 15 ವರ್ಷ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿರುವುದು ಆತಂಕವನ್ನು ಉಂಟುಮಾಡಿದೆ.
undefined
RIP Spandana Vijay: ಕೋವಿಡ್ ಬಳಿಕ ಹೃದಯಾಘಾತದಲ್ಲಿ ದಿಢೀರ್ ಏರಿಕೆ, ಐಸಿಎಂಆರ್ ಅಧ್ಯಯನ!
ಗುಂಡ್ಲುಪೇಟೆ ನಿರ್ಮಲ ಪ್ರೌಢಶಾಲೆಯಲ್ಲಿ ದುರ್ಘಟನೆ: ಮೃತ ಬಾಲಕಿಯನ್ನು ಪೆಲಿಸಾ (15) ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಭ್ಯಾಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಶಾಲೆಗೆ ಹೋದ ನಂತರ ಶಾಲೆಯ ಆವರಣದಲ್ಲಿಯೇ ಕುಸಿದು ಬಿದ್ದಿದ್ದಾಳೆ, ಶಿಕ್ಷಕರು ಬಂದು ನೋಡುವಷ್ಟರಲ್ಲಿಯೇ ವಿದ್ಯಾರ್ಥಿನಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕೂಡಲೇ ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಾಷ್ಟರಲ್ಲಾಗಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಮ್ಮನಿಗೆ ಆಸರೆಯಾಗುವ ಕನಸು ಕಾಣುತ್ತಿದ್ದ ಬಾಲಕಿ: ಅಂದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ ಫೆಲಿಸಾಗೆ ತಂದೆ ಇಲ್ಲ ಆಕೆ ಹುಟ್ಟಿದ ಮೂರೇ ತಿಂಗಳಿಗೆ ತಂದೆ ಪೀಟರ್ ಸಾವನ್ನಪ್ಪಿದ್ದರು. ಆಕೆಯ ತಾಯಿ ಮೇರಿ ಅವರಿವರ ಮನೆಗೆಲಸ ಮಾಡಿ ಫೆಲಿಸಾಳನ್ನ ಸಾಕಿ ಸಲಹಿದ್ದರು. ಆದ್ರೆ ಆಕೆ 8 ನೇ ತರಗತಿಗೆ ಬರುತ್ತಿದ್ದಂತೆ ಶಿಕ್ಷಣ ಕೊಡಿಸಲಾಗದೆ ಗುಂಡ್ಲುಪೇಟೆಯ ನಿರ್ಮಲ ವಸತಿ ಶಾಲೆಗೆ ಸೇರಿಸಿದ್ದರು. ಕಳೆದ ಎರೆಡು ವರ್ಷಗಳ ಕಾಲ ವ್ಯಾಸಂಗ ಮಾಡಿದ್ದ ಫೆಲಿಸಾ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ದಳಾಗುತ್ತಿದ್ದಳು. ಉತ್ತಮವಾಗಿ ವ್ಯಾಸಂಗ ಮಾಡಿ ತನ್ನ ಇದ್ದೊಬ್ಬ ತಾಯಿಗೆ ನೆರವಾಗಬೇಕೆಂದು ಹೆಬ್ಬಯಕೆ ಫೆಲಿಸಾದ್ದಾಗಿತ್ತು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಇಂದು ಹೃಧಯಾಘಾತಕ್ಕೆ ವಿದ್ಯಾರ್ಥಿನಿ ಫೆಶ್ಲೀಷಾ ಸಾವನ್ನಪ್ಪಿದ್ದಾಳೆ.
ಸ್ಯಾಂಡಲ್ ವುಡ್‌ಗೆ ಸಾವಿನ ಕಂಟಕ; ಕಾರಣ ಹೇಳುತ್ತಿದೆ ಜ್ಯೋತಿಷ್ಯ..!
ಅದೇನೆ ಹೇಳಿ ಈ ಸಾವು ಯಾವಾಗ ಹೇಗೆ ಯಾವ ರೂಪದಲ್ಲಿ ಬರುತ್ತೆಂದು ಯಾರಿಗೂ ತಿಳಿದಿಲ್ಲ. ತನ್ನ ಜೀವನದಲ್ಲಿ ಏನಾದ್ರು ಸಾದನೆ ಮಾಡ್ಬೇಕು ತನ್ನ ತಾಯಿಯ ಕಷ್ಟಕ್ಕೆ ಹೆಗಲು ನೀಡಬೇಕೆಂಬ ಫೆಲಿಸಾಲ ಕನಸು ಈಗ ಕನಸಾಗಿಯೇ ಉಳಿದು ಬಿಟ್ಟಿದೆ. ಈ ಸಾವನ್ನ ಕಂಡ ಕುಟುಂಬಸ್ಥರು ಹಾಗೂ ಸಹಪಾಠಿಗಳು ಮಮ್ಮುಲ ಮರಗಿದ್ದು, ಮತ್ತೊಮ್ಮೆ ಹುಟ್ಟಿ ಬಾ ಎಂದು ಕಣ್ಣೀರಿಡುತ್ತಿದ್ದಾರೆ. ಇನ್ನು ಫೆಲಿಸಾಳ ಮರಣೋತ್ತರ ಪರೀಕ್ಷೆಯನ್ನು ಮಾಡಿ ಮೃತದೇಹವನ್ನು ಕೊಡಲಾಗಿದ್ದು, ಕುಟುಂಬ ಸದಸ್ಯರು ಕ್ರಿಶ್ಚಿಯನ್ ಸಮುದಾಯದ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.