ಪ್ರಧಾನಿ ಮೋದಿ ನನಗೆ ಬಂಡವಾಳ ಏನೂ ಕೊಟ್ಟಿಲ್ಲ, ಪ್ರಚಾರ ಮಾಡಲು ಅವಕಾಶ ಕೊಟ್ಟಿದ್ದಾರೆ: ಚಕ್ರವರ್ತಿ ಸೂಲಿಬೆಲೆ

By Ravi Janekal  |  First Published May 28, 2024, 8:31 PM IST

ಸಾವರ್ಕರರ 114ನೇ ಜನ್ಮದಿನ ಪ್ರಯುಕ್ತ ನಗರದ ವೀರ್ ಸಾವರ್ಕರ್ ಪ್ರತಿಷ್ಠಾನದಿಂದ ಇಂದು (ಮೇ.28) ರಂದು ಇಲ್ಲಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಮೈಸೂರು (ಮೇ.28):  ಸಾವರ್ಕರರ 114ನೇ ಜನ್ಮದಿನ ಪ್ರಯುಕ್ತ ನಗರದ ವೀರ್ ಸಾವರ್ಕರ್ ಪ್ರತಿಷ್ಠಾನದಿಂದ ಇಂದು (ಮೇ.28) ರಂದು ಇಲ್ಲಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಈ ಪ್ರಶಸ್ತಿ ಸ್ವೀಕರಿಸುವ ಯೋಗ್ಯರು ಬಹಳಷ್ಟು ಮಂದಿ ಇದ್ದಾರೆ. ಸಾವರ್ಕರ ನನಗೆ ಕೊಡಬೇಕಾಗಿದ್ದು ಕೊಟ್ಟಿದ್ದಾರೆ. ಚಕ್ರವರ್ತಿಗೆ ಮೋದಿಯೇ ಬಂಡವಾಳ ಎಂದು ಒಬ್ಬ ಎಂಪಿ ಪ್ರಶ್ನೆ ಮಾಡಿದ್ದರು. ಪ್ರಧಾನಿ ಮೋದಿಯವರು ನನಗೆ ಏನೂ ಬಂಡವಾಳ ಕೊಟ್ಟಿಲ್ಲ. ಆದರೆ ಮೋದಿ ನನಗೆ ಅವರ ಪರವಾಗಿ ಪ್ರಚಾರ ಮಾಡುವ ಅವಕಾಶ ಕೊಟ್ಟಿದ್ದಾರೆ ಎಂದರು.

Latest Videos

undefined

ಮಣಿಶಂಕರ್ ಐಯ್ಯರ್ ಸಾರ್ವಕರ್ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಆ ವಿರೋಧ ಇದ್ದವರಿಗೆ ಸರಿಯಾಗಿ ಉತ್ತರಿಸಲು ದೊಡ್ಡ ಆಲೋಚನೆ ಮಾಡಿದೆವು. ಈ ಮೂಲಕ ಸಾವರ್ಕರ್ ಜಯಂತಿ ಆಚರಿಸಲಾಗುತ್ತದೆ. ಇವತ್ತು ಚೈನಾ ಅಧಿಕೃತವಾಗಿ ದಾಳಿ ಮಾಡುತ್ತಿದೆ ಎಂದು ಅಂದುಕೊಳ್ಳಬೇಡಿ. ಚೀನಾ ಏನಾದರೂ ದಾಳಿ ಮಾಡಿದರೆ ಅದಕ್ಕೆ ಪ್ರತ್ಯುತ್ತರವಾಗಿ ಸರಿಯಾದ ದಾಳಿ ಭಾರತ ಮಾಡುತ್ತದೆ.ಇನ್ನು ಪಾಕಿಸ್ತಾನದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಇವರು ನಮ್ಮ ಮೇಲೆ ನೇರವಾಗಿ ಯುದ್ದ ಮಾಡಲಾರದ ಸ್ಥಿತಿಯನ್ನು ತಲುಪಿದೆ. ನಾವು ಚೀನಾ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಏಕೆಂದರೆ ಇತ್ತೀಚಿನ ವಿದ್ಯಮಾನಗಳಲ್ಲಿ ನಾವು ಪ್ರಾಪಗೆಂಡಲಾ ಯುದ್ದ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಅಂದರೆ ಅಪಪ್ರಚಾರದ ಸಂಗತಿಗಳು. ಒಂದು ಸುಳ್ಳನ್ಮು ಪದೇ ಪದೇ ಹೇಳಿ ಅದನ್ನು ನಂಬಿಸುವ ಪ್ರಕ್ರಿಯೆ. ‌ಮೊದಲನೇ ಹಂತದ ಎಲೆಕ್ಷನ್ ಮುಗಿದ ಮೇಲೆ ಮೋದಿ ಸೋತೆ ಬಿಟ್ರು ಎನ್ನುವಂತೆ ಬಿಂಬಿಸಿದರು, ಅಪಪ್ರಚಾರ ಮಾಡಿದರು. ಆದರೆ ಆದರೆ ಐದನೇ ಹಂತದ ಎಲೆಕ್ಷನ್ ಮುಗಿದ ನಂತರ ಮಾತನಾಡುವುದನ್ಮು ನಿಲ್ಲಿಸಿದ್ದಾರೆ. ಸೋಲುವುದು ಖಾತ್ರಿಯಾದಾಗ ಮಲ್ಲಿಕಾರ್ಜುನ ಖರ್ಗೆ(Mallikarjun kharge) ರವರಿಂದ 300 ಸ್ಥಾನ ಪಡೆಯುವುದಾಗಿ ಹೇಳಿಸ್ತಾರೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಕಾಂಗ್ರೆಸ್‌ಗೆ ಖಚಿತವಾಗಿದೆ ಎಂದರು.

ನಾಳೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

ಬ್ರಿಟಿಷ್‌ರು ಕೊನೆಯಲ್ಲಿ ಭಾರತಕ್ಕೆ ಏನು ಬಿಟ್ಟುಕೊಟ್ಟರು ಎಂದರೆ ಜವಹರಲಾಲ್ ನೆಹರೂರನ್ನು. ಈ ದೇಶದ ಲಾಸ್ಟ್ ವೈಸ್‌ರಾಯ್ ಆಫ್ ಇಂಡಿಯಾ ಎಂದರೆ ನೆಹರೂ. ಮೊದಲ ಪ್ರಧಾನಿ ಎಂದರೆ ಮೌಂಟ್ ಬ್ಯಾಟನ್ ಎಂದು ಕರೆಯಬೇಕು. ಪಂಡಿತ ರಾಮಾಭಾಯಿ ಮಹಾರಾಷ್ಟ್ರದವರು ಈಕೆ ಕ್ರೈಸ್ತ ಧರ್ಮದವರು, ಇವರನ್ನು ಕಲ್ಕತ್ತಾ ಗೆ ಕರೆದುಕೊಂಡು ಹೋಗಿ ಒಂದಿಷ್ಟು ಸಂಸ್ಕೃತ ಕಲಿಸಿ ಪಂಡಿತ ಬಿರುದು ಕೊಟ್ಟು ವಿದೇಶದಲ್ಲಿ ಭಾರತ ಕನಿಷ್ಠ ಎಂದು ಭಾಷಣ ಮಾಡಿಸಿದರು. ಅರುನ್‌ದತಿ ರಾಯ್ ಗೆ ಬೂಕರ್ ಪ್ರಶಸ್ತಿಯನ್ನು ಕೊಟ್ಟು ಜರ್ಮನ್ ಟಿವಿಯಲ್ಲಿ ಇಂಟರ್ವೀವ್ ಮಾಡಿಸುತ್ತಾರೆ ಕೋವಿಡ್ ಬಳಸಿಕೊಂಡು ಭಾರತಸರ್ಕಾರ ಹಿಂದು ಮುಸ್ಲಿಮ್ ರವರನ್ನು ಮೋದಿ ಡಿವೈಡ್ ಮಾಡಿಸ್ತಾ ಇದ್ದಾರೆ ಎಂದು ಹೇಳಿಸಿದರು. ಮರ್ಕಜ್ ಮಸೀದಿ ಉದಾಹರಣೆಗೆ ತೆಗೆದುಕೊಂಡರು. ಜಗತ್ತಿನ ಅತ್ಯಂತ ಹಸಿವಿನ ರಾಷ್ಟ್ರದಲ್ಲಿ ನಮಗಿಂತ ಮೇಲೆ ಪಾಕಿಸ್ತಾನ ಮತ್ತು ಶ್ರೀಲಂಕಾ ಇದೆ. ಬಡತನ ರೇಖೆ ಮತ್ತು ರಿಲೀಜಿಯನ್ಸ್ ಫ್ರೀಡಂ ನಲ್ಲಿ ಭಾರತ ಕೊನೆಯ ಸ್ಥಾನದಲ್ಲಿ ಇದೆ ಎಂದು ಹೇಳಿದರು ಈ ಮೂಲಕ ಭಾರತ ಹಾಳಾಗೋಗಿದೆ ಎಂದು ಪತ್ರಿಕೆಗಳಲ್ಲಿ ಬರೆದರು, ಬರೆಸಿದರು. ಇದನ್ನು ಓದಿದವರಿಗೆ, ಕೇಳಿದವರಿಗೆ ಭಾರತದಲ್ಲಿ ನಿಜವಾಗಲೂ ಕಷ್ಟ ಇರಬೇಕು ಎಂದೆನಿಸಬೇಕು. ನೀವೇ ಯೋಚನೆ ಮಾಡಿ ಭಾರತದ ಬಗ್ಗೆ ಅಸಹ್ಯ ಮೂಡಿಸುತ್ತಿರುವವರು ಯಾರು? ಭಾರತದಲ್ಲಿ ಜಗತ್ತಿನ ಅತ್ಯಂತ ವೇಗೆವಾಗಿ ಬೆಳೆಯುತ್ತಿರುವ ಜಿಡಿಪಿ. ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಐದನೇ ಬಲಿಷ್ಠ ಎಕಾನಾಮಿ ರಾಷ್ಟ್ರ ಭಾರತವಾಗುತ್ತದೆ ಎಂದು‌ ಮೋದಿಯವರು ಹೇಳಿದ್ದಾರೆ. ಇನ್ನು ಭಾರತದಲ್ಲಿ ಧರ್ಮವಿಲ್ಲದ ಬದುಕೇ ಇಲ್ಲ. ಈ ಬಾರಿ ಮೋದಿಗೆ ಅಷ್ಟು ಈಸೀ ಇಲ್ಲ. ಹಿಂದುತ್ವ ಸೌಥ್ ನಲ್ಲಿ ಅಷ್ಟು ವರ್ಕ್ ಆಗಿಲ್.  ಕರ್ನಾಟಕದ ಮಂತ್ರಿ ಗಳು ನಾರ್ಥ್ ಮತ್ತು ಸೌಥ್ ಆಗಿ ಡಿವೈಡ್ ಮಾಡುವ ಬಗ್ಗೆ ಮಾತನಾಡುತ್ತಾರೆ. ಇದೊಂದು ಪ್ರಾಪಗಂಡ ವಾರ್. ಈ ದೇಶದಲ್ಲಿ ಹಳ್ಳಿಯಲ್ಲಿ ನಕ್ಸಲ್ ಇಲ್ಲ, ಆದ್ದರಿಂದ ಅರ್ಬನ್ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ. ಮೈಸೂರಿನ ಕಾಲೇಜುಗಳಲ್ಲಿ ಅರ್ಬನ್  ನಕ್ಸಲಿಜಂ ಅನ್ನು ವ್ಯವಸ್ಥಿತವಾಗಿ ಒಂದು ಥಾಟ್ ಅನ್ನು ಇನ್ಬಿಲ್ಟ್ ಮಾಡ್ತಾ ಇದ್ದಾರೆ. ಇದೇ ತರಹ ಮಂಗಳೂರು ಇತ್ಯಾದಿ ಕಡೆ ವ್ಯವಸ್ಥಿತವಾಗಿ ನಡೆದಿದೆ. ಇಲ್ಲಿ ನೋಡುವುದಾದರೆ ಯುವಕರನ್ನು ಟಾರ್ಗೆಟ್ ಮಾಡಲಾಗಿದೆ ಎಂದರು.

ಮೋದಿಯವರು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದೇ ಬರುತ್ತಾರೆ. ಪಾಕಿಸ್ತಾನದ ರಾಜಕಾರಣಿ ಗಳು ಒಂದಿಬ್ಬರು ಭಾರತದ ರಾಜಕಾರಣಿಗಳನ್ನು ಬಹಳ ಬೆಂಬಲಿಸ್ತಾರಲ್ಲಾ ಯಾಕೆ? ಮಣಿಶಂಕರ್ ಐಯ್ಯರ್ ಪಿಒಕೆ ಕುರಿತು ಪಾಕಿಸ್ತಾನ ಬಳೆ ಹಾಕಿಕೊಂಡು‌ ಕೂರಲ್ಲ ಎಂಬ ಹೇಳಿಕೆಗೆ ಮೋದಿ ಬಳೆ ಹಾಕಿಸ್ತೇವೆ ಎಂದು ಉತ್ತರಕ್ಕೆ ಪಾಕಿಸ್ತಾನ ಉತ್ತರ ಕೊಡಲಿಲ್ಲ. ಸಾರ್ವಕರ್ ಕುರಿತ ನಿಂದನೆಗಳು ಅಪಮಾನಗಳು ಸಾವರ್ಕರ್ ಕುರಿತು ಕ್ಷಮಾಪಣೆ ಅರ್ಜಿಗಳನ್ನು ಬರೆದಿದ್ದಾರೆ ಎಂದು ಹೇಳುತ್ತಾರೆ. ನಿಮಗೆ ಗೊತ್ತಿರಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಿಗೆ ಅತಿಯಾದ ಪ್ರೀತಿ ಇದ್ದದ್ದು ಸಾವರ್ಕರ್ ಮೇಲೆಯೇ. ರೋಟಿ ಬಂಧಿ, ಬೇಟಿ ಬಂಧಿ, ಶುದ್ದಿ ಬಂಧಿ, ಇತ್ಯಾದಿ ಏಳು ಬಂಧಿಗಳನ್ನು ಹೇಳಿದ್ದಾರೆ. ನಾನು ಸುಮ್ಮನೆ ತಮಾಷೆ ಮಾಡ್ತಾ ಹೇಳುತ್ತೇನೆ. ಇಸ್ಲಾಂಗೆ ಇನ್ ಕಮಿಂಗ್ ಸುಲಭ ಔಟ್ ಗೋಯಿಂಗ್ ಕಷ್ಟ. ಹಿಂದೂ ಧರ್ಮದಲ್ಲಿ ಇನ್‌ಕಮಿಂಗ್ ಕಷ್ಟ ಔಟ್ ಗೋಯಿಂಗ್ ಕಷ್ಟ. ಮೇಲ್ವರ್ಗದ ಪ್ರಕಾರ ಬಂಧಿಯನ್ನು ಕಳಚಿ ಬಿಸಾಕಿದ್ದು ಸಾವರ್ಕರ್.

ಸಾವರ್ಕರ್ ಹಿಂದಿಯ ಪರವಾಗಿದ್ದು, ಅಂದರೆ ಪ್ರತಿಯೊಬ್ಬ ಭಾರತೀಯರು  ತಮ್ಮ ಮಾತೃಭಾಷೆ ಯೊಂದಿಗೆ ಇನ್ನೊಂದು ಪಕ್ಕದ ರಾಜ್ಯದ ಭಾಷೆಯನ್ನು ಕಲಿತಿರಬೇಕು. ಸಾವರ್ಕರ್ ದಕ್ಷಿಣದ ಭಾಷೆ ಕಲಿತಿರಲಿಲ್ಲ ಏಕೆಂದರೆ ದಕ್ಷಿಣದಲ್ಲಿ ಕ್ರಾಂತಿಕಾರಿಗಳು ಯಾರೂ ಕಾಣಿಸಲಿಲ್ಲ. ಇಲ್ಲದಿದ್ದರೆ ದಕ್ಷಿಣದ ಯಾವುದಾದರೂ ಒಂದು ಭಾಷೆಯನ್ನು ಕಲಿಯುತ್ತಿದ್ದರು.
ಮುರುಡೇಶ್ವರ ದಲ್ಲಿ ದೇವು ಲಾಡ್ಜ್ ಇದೆ. ಯಾರೇ ಅತಿಥಿ ಬಂದರೂ ಗೋವಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ನೋಡಿದರೆ ಸಾವಿರಾರು ಗೋವುಗಳು ಇದ್ದವು. ಗೋಶಾಲೆಗೆ ಸಾಗಿಸುತ್ತಿದ್ದ ರಕ್ಷಣಾ ಗೋವುಗಳನ್ನು ತಂದು ನಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಅವರು ಇಂದು ಇವುಗಳನ್ನು ಸಾಕಲು ಸಾದ್ಯವಾಗುತ್ತಿಲ್ಲ ಎಂದು ಹೇಳಿರುವುದು ಉಂಟು. ಆದ್ದರಿಂದ ಈ ಒಂದು ಲಕ್ಷ ರೂಪಾಯಿಗಳನ್ನು ಈ ಗೋಶಾಲೆಗೆ ಅರ್ಪಿಸುತ್ತಿದ್ದೇನೆ ಎಂದರು.

click me!