ಬಿಜೆಪಿ ಟಿಕೆಟ್‌ ಡೀಲ್‌ ಕೇಸ್‌: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು

By Girish Goudar  |  First Published Sep 15, 2023, 9:28 AM IST

ಚೈತ್ರಾ ಕುಂದಾಪುರ ಅವರಿಗೆ ಅನಾರೋಗ್ಯವಾದ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ ಸಿಸಿಬಿ ಪೊಲೀಸರು 


ಬೆಂಗಳೂರು(ಸೆ.15):  ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೌದು,  ಚೈತ್ರಾ ಕುಂದಾಪುರ ಅವರಿಗೆ ಅನಾರೋಗ್ಯವಾದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದಾರೆ. 

ಸ್ಟ್ರೆಚರ್ ತಂದು ಚೈತ್ರಾ ಕುಂದಾಪುರ ಅವರನ್ನ ಆಸ್ಪತ್ರೆ ಸಿಬ್ಬಂದಿ ಕರೆದೊಯ್ದಿದ್ದಾರೆ. ಚೈತ್ರಾ ಕುಂದಾಪುರ ಅವರ ಬಾಯಿಯಲ್ಲಿ ನೊರೆ ಬಂದಿದೆ ಅಂತ ತಿಳಿದು ಬಂದಿದೆ. 

Tap to resize

Latest Videos

undefined

ಬಿಜೆಪಿ ಟಿಕೆಟ್ ಡೀಲ್‌': ದೊಡ್ಡವರ ಹೆಸರು ಬರಲಿದೆ, ಚೈತ್ರಾ ಬಾಂಬ್‌

ಚೈತ್ರಾ ಕುಂದಾಪುರ ಅವರಿಗೆ ಫಿಡ್ಸ್ ಬಂದು ಬಾಯಿಯಲ್ಲಿ ನೊರೆ ಬಂದಿದೆ. ಹೀಗಾಗಿ ಸಿಸಿಬಿ ಪೊಲೀಸರು ತಕ್ಷಣ ಚೈತ್ರಾ ಅವರನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. 

ಶೌಚಾಲಯದಲ್ಲಿ ಕುಸಿದುಬಿದ್ದ ಚೈತ್ರಾ

ಚೈತ್ರಾ ಕುಂದಾಪುರ ಅವರು ಇಂದು(ಶುಕ್ರವಾರ) ಏಕಾಏಕಿ ಸಿಸಿಬಿಯ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದಾರೆ. ಚೈತ್ರಾ  ಬಟ್ಟೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ. ಅತಿಯಾದ ಟೆನ್ಷನ್‌ನಿಂದ ತಲೆಸುತ್ತು ಬಂದಿದೆ. ಹೀಗಾಗಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಚೈತ್ರಾ ಕುಂದಾಪುರ ಅವರಿಗೆ ಬಟ್ಟೆ ಬದಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೈತ್ರಾಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಮೇಲ್ನೋಟಕ್ಕೆ ತಲೆನೋವು ಬಂದು ಮೂರ್ಛೆ ಹೋಗಿದ್ದಾರೆ. ಸದ್ಯಕ್ಕೆ ಅಗತ್ಯ ಚಿಕಿತ್ಸೆ ನೀಡಲಾಗ್ತಿದೆ ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಆಸ್ಪತ್ರೆಯ ಮೂಲಗಳ ಮಾಹಿತಿ ನೀಡಿವೆ. 

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಚೈತ್ರಾಗೆ ಇದು ಎರಡನೇ ಬಾರಿ ಪಿಡ್ಸ್

ಚೈತ್ರಾ ಕುಂದಾಪುರಗೆ ಇದು ಎರಡನೇ ಬಾರಿ ಪಿಡ್ಸ್ ಬಂದಿದೆ. ಈ ಹಿಂದೆ ಮಹಾಬಲೇಶ್ವರದಲ್ಲಿ ಒಮ್ಮೆ ಪಿಡ್ಸ್ ಕಾಣಿಸಿಕೊಂಡಿತ್ತು. ಕೆಲ ವರ್ಷಗಳ ಹಿಂದೆ ಪಿಡ್ಸ್ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಪಿಡ್ಸ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಆಸ್ಪತ್ರೆ ನುರಿತ ವೈದ್ಯರರಿಂದ ಚಿಕಿತ್ಸೆ ನೀಡಲಾಗ್ತಿದೆ.

 

ಅಭಿನವ ಹಾಲಶ್ರೀ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರ ಹುಡುಕಾಟ

ಅಭಿನವ ಹಾಲಶ್ರೀ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಮೈಸೂರಿನಲ್ಲಿ ಸಿಸಿಬಿ ತಂಡಗಳ ಹುಡುಕಾಟ ನಡೆಸಿದೆ. ಪ್ರಕರಣದಲ್ಲಿ ಅಭಿನವ ಹಾಲಶ್ರೀ ಎ 3 ಆರೋಪಿಯಾಗಿದ್ದಾರೆ. ಇಷ್ಟು ದಿನ ಆದ್ರೂ ಸಿಸಿಬಿ ಬಂಧಿಸದೇ, ನೋಟಿಸ್ ಕೂಡ ನೀಡಿಲ್ಲ. ಇದೀಗ ಅಭಿನವ ಹಾಲಶ್ರೀಗಾಗಿ 3-4 ತಂಡಗಳಾಗಿ ಮಾಡಿಕೊಂಡು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಚೈತ್ರಾ ಮೂರ್ಛೆ ಪತ್ತೆಗೆ 5 ಬಗೆಯ ಟೆಸ್ಟ್ 

ಚೈತ್ರಾ ಕುಂದಾಪುರ ಅವರು ಮೂರ್ಛೆಯಿಂದ ಏಕಾಏಕಿ ಬಿದ್ದಿದ್ದಾರೆ. ಹೀಗಾಗಿ ಚೈತ್ರಾ ಮೂರ್ಛೆ ಪತ್ತೆಗೆ ವೈದ್ಯರು 5 ಬಗೆಯ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಚೈತ್ರಾ ಕುಂದಾಪುರ ಅವರಿಗೆ 5 ಬಗೆಯ ಟೆಸ್ಟ್ ಮಾಡುತ್ತಿದ್ದಾರೆ.   

ಸದ್ಯ ಚೈತ್ರಾ ಕುಂದಾಪುರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ನೋವಿಗೆ ಸ್ಪಂದಿಸುತ್ತಾ ಇದ್ದಾರೆ ಹೊರೆತು ಮಾತಾಡುತ್ತಿಲ್ಲ. ಪಿಡ್ಸ್‌ನಿಂದ ಪ್ರಜ್ಞೆ ತಪ್ಪಿದ್ದಾರಾ? ಅಂತ ವೈದ್ಯರು ವಿವಿಧ ಬಗೆಯ ಟೆಸ್ಟ್‌ಗಳನ್ನ ಮಾಡುತ್ತಿದ್ದಾರೆ. 

ಯಾವೆಲ್ಲ ಟೆಸ್ಟ್?

1. ಹೊಟ್ಟೆ ಒಳಗಡೆ ಟ್ಯೂಬ್ ಹಾಕಿ ಹೊಟ್ಟೆ ಒಳಗಿರೋ ಕಂಟೆಂಟ್ ಅನ್ನು ಮೆಡಿಕಲ್ ಟೆಸ್ಟ್ ಗೆ ರವಾನೆ 
2. ಯೂರಿನ್ ಅನ್ನು ಟೆಸ್ಟ್ ಗೆ ರವಾನೆ 
3. ನೊರೆ ಅಂಶವನ್ನ ಟೆಸ್ಟ್ ಗೆ ರವಾನೆ 
4. ರಕ್ತ ಪರೀಕ್ಷೆ ಗೆ ರವಾನೆ
5. ವಾಮಿಟ್ ಕಂಟೆಂಟ್ ಕೂಡ ಟೆಸ್ಟ್ ಗೆ ರವಾನೆ 

ಸದ್ಯ ಚೈತ್ರಾ ಕುಂದಾಪುರ ಅವರ ಬಿಪಿ ನಾರ್ಮಲ್ ಇದೆ. ಆದರೆ ಮಾತನಾಡುತ್ತಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.   

click me!