ರಾಜ್ಯಕ್ಕೆ ಕೇಂದ್ರದ ತಂಡ ಆಗಮನ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ

By Suvarna NewsFirst Published Dec 13, 2020, 8:03 PM IST
Highlights

ನೆರೆ ಅಧ್ಯಯನ ಮಾಡಲು ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿದ್ದು, ಮೂರು ದಿನಗಳ ಕಾಲ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದೆ.

ಬೆಂಗಳೂರು, (ಡಿ.13):  ರಾಜ್ಯದಲ್ಲಿ ಪ್ರವಾಹದಿಂದ ಹಾನಿ ಸಂಭವಿಸಿದ್ದರಿಂದ ಅದರ ಅಧ್ಯಯನ ನಡೆಸಲು ಇಂದು (ಭಾನುವಾರ) ಕೇಂದ್ರ ಅಧ್ಯಯನ ತಂಡ ಆಗಮಿಸಿದೆ.

 ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪರನವರ ಜೊತೆ ಕೇಂದ್ರ ತಂಡ ಮಾತುಕತೆ ನಡೆಸಿತು. ಈ ವೇಳೆ, ಕೇಂದ್ರ ಅಧ್ಯಯನ ತಂಡಕ್ಕೆ ಬಿಎಸ್​ವೈ ಪ್ರವಾಹದಿಂದ ಉಂಟಾದ ಹಾನಿಯ ವಿವರಣೆ ನೀಡಿದರು.

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್: ಮುಷ್ಕರ್ ವಾಪಸ್

ಸೆಪ್ಟೆಂಬರ್, ಅಕ್ಟೋಬರ್​ ತಿಂಗಳಲ್ಲಿ  ಸಂಭವಿಸಿದ್ದ ಪ್ರವಾಹ ಪ್ರದೇಶಗಳಿಗೆ 3 ದಿನಗಳ ಕಾಲ ಕೇಂದ್ರ ತಂಡ ಅಧ್ಯಯನ ನಡೆಸಲಿದ್ದು, ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್‌ ಗಂಠಿ ನೇತೃತ್ವದ 6 ಅಧಿಕಾರಿಗಳ ತಂಡ ನೆರೆಯಿಂದ ಹಾನಿಯಾದ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

* ಸೋಮವಾರ ಮೊದಲ ತಂಡ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.  2ನೇ ತಂಡ ವಿಜಯನಗರ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಿದ್ದು  3ನೇ ತಂಡ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. 

* ಮಂಗಳವಾರ ಮೂರೂ ತಂಡ ಬೆಂಗಳೂರಿಗೆ ಆಗಮಿಸಿ ಮತ್ತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿ ಕುರಿತಂತೆ ಅಧ್ಯಯನ ನಡೆಸಲು ಆಗಮಿಸಿರುವ ಅಂತರ್ ಸಚಿವಾಲಯ ಕೇಂದ್ರ ತಂಡದ (IMCT) ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಯಿತು. ರಾಜ್ಯದಲ್ಲಿ ಸಂತ್ರಸ್ತ ಜನರಿಗೆ ಪರಿಹಾರ ಮತ್ತು ಹಾನಿಗೀಡಾದ ಮೂಲಸೌಕರ್ಯಗಳ ದುರಸ್ತಿಗೆ ಕೇಂದ್ರದ ನೆರವಿಗಾಗಿ ಶಿಫಾರಸ್ಸು ಮಾಡುವಂತೆ ಕೋರಲಾಯಿತು. pic.twitter.com/ZOyBNPJhmo

— B.S. Yediyurappa (@BSYBJP)
click me!