ಸಾರಿಗೆ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವುದಕ್ಕೆ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಕಿಡಿಕಾರಿದ್ದಾರೆ.
ಬೆಂಗಳೂರು, (ಡಿ.13): ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ನೋಟಿಸ್ ಕೊಡದೆ ಅದು ಹೇಗೆ ಪ್ರತಿಭಟನೆ ಮಾಡುತ್ತಾರೆ? ಪ್ರತಿಭಟನೆ ಮಾಡುತ್ತಿರುವುದು ನಮ್ಮ ಯೂನಿಯನ್‌ನವರಲ್ಲ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಟಾಂಗ್ ಕೊಟ್ಟರು.
undefined
ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್,
ಯಾರೋ ಮೂರನೇಯವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ನೋಡೋಣ. ನಮ್ಮ ನೌಕರರ ಹಿತಕ್ಕಾಗಿ ಇಂದಿನ ಸಭೆಗೆ ಬಂದಿದ್ದೇವೆ ಎಂದು ಸುಬ್ಬರಾವ್ ಹೇಳಿದರು.
ಸಾರಿಗೆ ನೌಕರರ ಸಭೆ: ಬೇಡಿಕೆ ಪಟ್ಟಿ ಹಿಡಿದು ಸಿಎಂ ಭೇಟಿಯಾದ ಸವದಿ
60 ವರ್ಷಗಳಿಂದ ನಾನು ಯೂನಿಯನ್ಗಳನ್ನ ನೋಡಿಕೊಂಡು ಬಂದಿದ್ದೇನೆ. ಈಗ ನಾನು ಕೋಡಿಹಳ್ಳಿ ಜೊತೆ ಮಾತಾಡಿ ಎಂದು ಹೇಳಿಲ್ಲ, ಆದರೆ ಉಳಿದವರ ಅಭಿಪ್ರಾಯ ಈ ರೀತಿ ಇರಬಹುದು . ಈ ಕುರಿತು ಸಿಎಂ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದಾರೆ ಎಂದರು.
ಕೋಡಿಹಳ್ಳಿಯನ್ನು ಏನು ಮಾಡುತ್ತಿರಾ ಎಂದು ಬಿಎಸ್ವೈ ಕೇಳಿದ್ದರು. ನಾವು ಸಭೆಗೆ ಬರುತ್ತೇವೆ. ಅವರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದೇವೆ. ಸಭೆಯಲ್ಲಿ ಸರ್ಕಾರ ನಮ್ಮ ಸಾರಿಗೆ ನೌಕರರಿಗೆ ಅನುಕೂಲ ಆಗೋ ಭರವಸೆ ನೀಡಿದರೆ, ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಹೇಳುತ್ತೇವೆ ಎಂದು ತಿಳಿಸಿದರು.