ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ

By Kannadaprabha NewsFirst Published Jan 28, 2021, 7:37 AM IST
Highlights

ಮೋದಿ ಸರ್ಕಾರದಿಂದ ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ಗ್ರಾಮ ಪಂಚಾಯತ್ ಚುನಾವಣೆಗಳು ನಡೆದ ಬೆನ್ನಲ್ಲೇ ಅನುದಾನ ಬಿಡುಗಡೆ ಮಾಡಲಾಗಿದೆ. 

ನವದೆಹಲಿ (ಜ.28): ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ 2020-21 ಹಣಕಾಸು ವರ್ಷದ ಎರಡನೇ ಕಂತಿನ ಅನುದಾನವಾಗಿ 2412 ಕೋಟಿ ಬಿಡುಗಡೆ ಮಾಡಿದೆ. 

ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯದ ಶಿಫಾರಸಿನ ಮೇರೆ ಕೇಂದ್ರ ಹಣಕಾಸು ಸಚಿವಾಲಯ 18 ರಾಜ್ಯಗಳಿಗೆ ಒಟ್ಟು 12,351 ಕೋಟಿ ರು.ಬಿಡುಗಡೆ ಮಾಡಿದೆ. 

ಒಟ್ಟಾರೆ ಈ ಹಣ ಬಿಡುಗಡೆಯಾದ ಹತ್ತು ದಿನದೊಳಗೆ ರಾಜ್ಯ ಸರ್ಕಾರವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕು. 10 ದಿನ ಮೀರಿದಲ್ಲಿ ಅನುದಾನ ಬಡ್ಡಿ ಸಮೇತ ನೀಡಬೇಕು ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. 

'ಮೋದಿ ಜೀ ಜತೆ ಗೇಮ್‌ ಆಡುವಾಸೆ: ನನಗೆ ಪ್ರಧಾನಿಯೇ ಸ್ಪೂರ್ತಿ' ...

ಈ ಅನುದಾನವು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಂಚಲ್ಪಡಲಿದೆ. ಮೊದಲನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆ ಮಾಡಿತ್ತು.

click me!