ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!

By Sathish Kumar KH  |  First Published Jun 22, 2023, 2:02 PM IST

ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಕಂಡುಬಂದ ಕೂದಲು ಮಾದರಿಯ ಕಸದ (ಗಂಗೆ ಕೂದಲು) ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿದ್ದು, ರಹಸ್ಯವನ್ನು ಬಯಲು ಮಾಡಿದ್ದಾರೆ.


ವರದಿ- ಶಶಿಧರ ಮಾಸ್ತಿ ಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂ.22): ಉಡುಪಿಯ ಮಲ್ಪೆಯ ಸಮುದ್ರ ತಟದಲ್ಲಿ ಕಳೆದ ಎರಡು ಶಾವಿಗೆ ಮಾದರಿಯ ವಿಚಿತ್ರ ವಸ್ತುಗಳು ಕಂಡುಬಂದಿತ್ತು. ದಶಕಗಳ ಬಳಿಕ ಕಂಡು ಬಂದ ಈ ವಿಚಿತ್ರ ವಿದ್ಯಮಾನದಿಂದ ಸ್ಥಳೀಯರು ಅಚ್ಚರಿಪಟ್ಟಿದ್ದರು. ಈಗ ವಿಜ್ಞಾನಿಗಳು ಸ್ಥಳ ಭೇಟಿ ಮಾಡಿದ್ದು, ಗಂಗೆ ಕೂದಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

ಸದ್ಯ ಇದೇ ವಿಚಾರವಾಗಿ ಸಂಶೋಧನೆ ನಡೆಸಿದ ವಿಜ್ಞಾನಿಗಳು ಇದು ಸಲೋಪೆನ್ಟ್ ಟ್ಯೂಬ್ ವರ್ಮ್ (Cellophane tube worms) ಎಂದು ಪತ್ತೆ ಹಚ್ಚಿದ್ದಾರೆ. ಮಲ್ಪೆ ಕಡಲತಡಿಯಲ್ಲಿ ಈ ವಿಚಿತ್ರ ಜೀವಿ ಪತ್ತೆಯಾದ ಬೆನ್ನಲ್ಲೇ ಮೀನುಗಾರಿಕಾ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಮತ್ತು ತಂಡದವರು ಮಲ್ಪೆಯ ಕಡಲ ತಡಿಯಲ್ಲಿ ಬಿದ್ದಿದ್ದ ಈ ವಿಚಿತ್ರ ವಸ್ತುವನ್ನು ಪರಿಶೀಲನೆ ನಡೆಸಿ ಇದು ಸಲೋಪೆನ್ಟ್ ಟ್ಯೂಬ್ ವರ್ಮ್ ಖಚಿತಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಪಣಂಬುರು ಬೀಚಿನಲ್ಲಿ ಈ ಇಂಥದ್ದೇ ಜೀವಿ ಪತ್ತೆಯಾಗಿತ್ತು. 

Tap to resize

Latest Videos

undefined

Viral news: ಮಲ್ಪೆ ಬೀಚ್‌ನಲ್ಲಿ ಟನ್ನುಗಟ್ಟಲೇ ಗಂಗಾಮಾತೆಯ ಕೂದಲು ಪತ್ತೆ !

ಆತಂಕ ಬೇಡವೆಂದ ವಿಜ್ಞಾನಿಗಳು: 
ಈ ಬಾರಿ ಬಿಪರ್ ಜಾಯ್ ಚಂಡಮಾರುತ ಬಂದಿತ್ತು. ಇದರಿಂದ ಕಡಲ ನೀರು ಅಡಿಮೇಲಾಗಿತ್ತು. ಕಡಲಿನ ಅಲೆಗಳು ಅಬ್ಬರಿಸಿದ್ದವು. ಇದರ ಪ್ರಭಾವದಿಂದಾಗಿ ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಜೀವಿ ಸತ್ತು ರಾಶಿಯಾಗಿ ತೇಲಿ ಸಮುದ್ರ ತಡಕ್ಕೆ ಬಂದಿದೆ. ಇದರ ಬಗ್ಗೆ ಯಾರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಇದು ಕೊಳೆತು ಗೊಬ್ಬರವಾದಲ್ಲಿ ಯಥೇಚ್ಛವಾಗಿ ಮೀನುಗಳು ಇಲ್ಲಿ ಉತ್ಪತ್ತಿಯಾಗುವ ಸಾಧ್ಯತೆ ಇದೆ ಹಾಗಾಗಿ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ‌. 

ಸಂಶೋಧಣೆನೆಗೆ ಮಾದರಿ ಸಂಗ್ರಹ: ಅಲ್ಲದೆ ಹೆಚ್ಚಿನ ಸಂಶೋಧನೆಗಾಗಿ ಇದರ ಸ್ಯಾಂಪಲ್ ಸಂಗ್ರಹಿಸಿ ತಂಡ ತೆರಳಿದೆ.  ಮಲ್ಪೆಯ ಕಡಲ‌ತಡಿಯಲ್ಲಿ ಶ್ಯಾವಿಗೆಯಂತೆ ಬಿದ್ದಿದ್ದ ಈ ಪಾಚಿ ಸುಮಾರು ಎರಡು ದಶಕದ ನಂತರ ಕಾಣಿಸಿಕೊಂಡಿತ್ತು. ಸಮುದ್ರದ ಅಲೆಗಳಲ್ಲಿ ತೇಲಿ ಬಂದಿದ್ದ ಈ ವಿಚಿತ್ರ ವಸ್ತುವನ್ನು ನೋಡಿ ಸ್ಥಳೀಯ ಮೀನುಗಾರರು ಗೊಂದಲಕ್ಕೀಡಾಗಿದ್ದರು. ಇದೀಗ ಮೀನುಗಾರರು ನಿರಾಳರಾಗಿದ್ದಾರೆ.

ಕಲ್ಮಶ, ವಾಸನೆಯೂ ಇಲ್ಲ:  ಕಳೆದ ಮೂರ್ನಾಲ್ಕು ದಿನಗಳ ಹಿಂದೆ, ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗಾಗಿ ಕಡಲು ಈ ಕಸದ ರಾಶಿಯನ್ನು ತಂದು ಗುಡ್ಡೆ ಹಾಕಿದೆ.  ಹಾಗಂತ ಇದನ್ನು ಕಲ್ಮಶ ಅಥವಾ ಕಸ ಎನ್ನಲು ಸಾಧ್ಯವಿಲ್ಲ. ಸ್ಥಳೀಯ ಆಡು ಭಾಷೆಯಲ್ಲಿ ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ರಾಶಿ ಬಿದ್ದಿದೆ. ಕಡಲ ತೀರದ ಮರಳಿನ ರಾಶಿ ಕಾಣದಷ್ಟು ದಟ್ಟವಾಗಿ ಹಬ್ಬಿಕೊಂಡಿದೆ.

ಮಲ್ಪೆ ಕಡಲ ತೀರದಲ್ಲಿ ಎಲ್ಲಿ ನೋಡಿದರಲ್ಲಿ ಗಂಗೆಯ ಕೂದಲು! ಏನಿದರ ವಿಶೇಷ?

ಮೀನುಗಳಿಗೆ ಉತ್ತಮ ಆಹಾರ: ಇತ್ತೀಚೆಗೆ ಬಿಫರ್ ಜಾಯ್ ಚಂಡಮಾರುತ ತನ್ನ ಅಬ್ಬರ ತೋರಿಸಿತ್ತು. ಯಾವುದೇ ಚಂಡಮಾರುತ ಬಂದಾಗ ಕಡಲು ತನ್ನ ಒಡಲಿನಲ್ಲಿರುವ ಎಲ್ಲಾ ವಸ್ತುಗಳನ್ನು ತಂದು ದಡಕ್ಕೆ ರಾಶಿ ಹಾಕುತ್ತದೆ. ದಶಕಗಳ ಬಳಿಕ ಗಂಗೆಯ ಕೂದಲು ಕಡಲತೀರದಲ್ಲಿ ರಾಶಿ ಬಿದ್ದಿದೆ. ನೋಡಲು ಕಲ್ಮಶದಂತೆ ಕಂಡರೂ ಇದಕ್ಕೆ ಯಾವುದೇ ದುರ್ವಾಸನೆ ಇಲ್ಲ. ಹುಲ್ಲು ರಾಶಿಯ ರೀತಿಯಲ್ಲಿ ಅಥವಾ ನಾವು ಆಹಾರವಾಗಿ ಸ್ವೀಕರಿಸುವ ಶಾವಿಗೆಯ ಎಳೆಯಂತೆ ಕಾಣುತ್ತದೆ. ಹಾಗಂತ ಈ ಗಂಗೆಯ ಕೂದಲನ್ನು ಯಾರು ತೆರವು ಮಾಡುವುದಿಲ್ಲ. ಮತ್ತೊಮ್ಮೆ ಅಬ್ಬರದ ಕಡಲಿನ ಅಲೆಗಳು ತೀರ ಪ್ರದೇಶಕ್ಕೆ ಬಂದಾಗ, ಅವು ಈ ರಾಶಿಯನ್ನು ಹೊತ್ತು ಮತ್ತೆ ಕಡಲಿನ ಒಡಲಿಗೆ ಹಾಕುತ್ತದೆ. ಮೀನಿಗೆ ಇದು ಅತ್ಯುತ್ತಮ ಆಹಾರ. ಹಾಗಾಗಿ ಯಾರು ಕೂಡ ಇದರ ಗೋಜಿಗೆ ಹೋಗುವುದಿಲ್ಲ.

click me!