ಕೆಎಸ್​ಆರ್​ಟಿಸಿಯ ಈ ಬಸ್‌ಗಳ​ ಪ್ರಯಾಣ ದರ ಇಳಿಕೆ..!

Published : Jan 09, 2021, 03:49 PM IST
ಕೆಎಸ್​ಆರ್​ಟಿಸಿಯ ಈ  ಬಸ್‌ಗಳ​ ಪ್ರಯಾಣ ದರ ಇಳಿಕೆ..!

ಸಾರಾಂಶ

ಇಷ್ಟು ದಿನ ಮಾಮೂಲಿ ದರಕ್ಕಿಂತ ವಾರಾಂತ್ಯದಲ್ಲಿ  ಹೆಚ್ಚಿಸುತ್ತಿದ್ದ ಕೆಎಸ್​ಆರ್​ಟಿಸಿ ಈಗ ಕಡಿಮೆ ಮಾಡಲು ನಿರ್ಧರಿಸಿದೆ.

ಬೆಂಗಳೂರು, (ಜ.09): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ವಿಧಿಸುತ್ತಿದ್ದ ಹೆಚ್ಚುವರಿ ಪ್ರಯಾಣ ದರವನ್ನು ಇಳಿಕೆ ಮಾಡಿದೆ. 

ವೀಕೆಂಡ್​ನಲ್ಲಿ ವೋಲ್ವೋ, ಸ್ಲೀಪರ್​, ಕ್ಲಬ್​ ಕ್ಲಾಸ್​ ಬಸ್​ಗಳ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚು ಮಾಡಲಾಗಿತ್ತು. ಆದ್ರೆ, ಇದೀಗ ಕೆಎಸ್​ಆರ್​ಟಿಸಿ ಆ ದರದಲ್ಲಿ ಇಳಿಕೆ ಮಾಡಿದೆ.

KSRTC ಡ್ರೈವರ್‌ಗಳಿಗೆ ಹೊಸ ರೀತಿ ಡ್ಯೂಟಿ..!

 ವಾರದ ಅಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತಿದ್ದ ಕಾರಣ ಈ ಬಸ್​ಗಳ ಪ್ರಯಾಣ ದರ ಶುಕ್ರವಾರ ಮತ್ತು ಭಾನುವಾರ ಏರಿಕೆಯಾಗುತ್ತಿತ್ತು.

 ಕೊವಿಡ್​ ಹಿನ್ನೆಲೆಯಲ್ಲಿ ಐಷಾರಾಮಿ ಬಸ್​ಗಳಲ್ಲಿ ಓಡಾಟ ಮಾಡುವವರ ಸಂಖ್ಯೆ ಕಡಿಮೆಯಾದ ಕಾರಣ, ಪ್ರಯಾಣಿಕರನ್ನು ಸೆಳೆಯಲು ಈ ತಂತ್ರ ಅನುಸರಿಸುತ್ತಿದೆ.  ಮುಂದಿನ ಶುಕ್ರವಾರ (15-01-2021)ದಿಂದ ಜನವರಿ 31ರವರೆಗೂ ಇದೇ ನಿಯಮ ಅನ್ವಯ ಆಗಲಿದೆ. ವಾರದ ಎಲ್ಲ ದಿನದ ದರವೇ ವೀಕೆಂಡ್​ಗೂ ಅನ್ವಯ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!