ಕಾವೇರಿ ವಿಚಾರದಲ್ಲಿ ಅಂದು ಬಂಗಾರಪ್ಪನವರು ಚಿಟಿಕೆ ಹೊಡೆಯುವುದರೊಳಗೆ ಉತ್ತರ ಕೊಟ್ಟುಬಿಟ್ಟರು ಎಂದು ಅಂದು ಬಂಗಾರಪ್ಪ ತೆಗೆದುಕೊಂಡ ತೀರ್ಮಾನವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆನಪಿಸಿಕೊಂಡರು.
ರಾಯಚೂರು (ಸೆ.22): ಕಾವೇರಿ ವಿಚಾರದಲ್ಲಿ ಅಂದು ಬಂಗಾರಪ್ಪನವರು ಚಿಟಿಕೆ ಹೊಡೆಯುವುದರೊಳಗೆ ಉತ್ತರ ಕೊಟ್ಟುಬಿಟ್ಟರು ಎಂದು ಅಂದು ಬಂಗಾರಪ್ಪ ತೆಗೆದುಕೊಂಡ ತೀರ್ಮಾನವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆನಪಿಸಿಕೊಂಡರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನ ಕಾನೂನಿಗೆ ಇಂದಿನ ಕಾನೂನಿಗೆ ಬಹಳ ವ್ಯತ್ಯಾಸವಿದೆ. ಕಾವೇರಿ ವಿಚಾರದಲ್ಲಿ ಆವತ್ತು ಬಂಗಾರಪ್ಪನವರು ಕಾವೇರಿ ಪ್ರಾಧಿಕಾರದ ವಿರುದ್ಧ ತೀರ್ಮಾನ ತೆಗೆದುಕೊಂಡರು. ಆ ಬಳಿಕ ನಮಗೆ ಹೈ ಕೋರ್ಟ್ ಛೀಮಾರಿ ಹಾಕಿತ್ತು .
ಕಾಂಗ್ರೆಸ್ ರಾಜಕಾರಣ ಸಂಪೂರ್ಣ ಬಡವರ ಪರ: ಸಚಿವ ಮಧು ಬಂಗಾರಪ್ಪ
ಅವರು ತೆಗೆದುಕೊಂಡ ನಿರ್ಧಾರದಂತೆ ಇವತ್ತು ಹಾಗೇ ಮಾಡಲು ಹೋದ್ರೆ, ಕಾನೂನು ಮೈಮೇಲೆ ಬಂದುಬಿಡುತ್ತೆ. ಈಗ ಕಾನೂನಿನ ವಿರುದ್ಧ ಮಾಡಲು ಆಗಲ್ಲ. ಆದ್ರೂ ಸಿಎಂ ಸಿದ್ದರಾಮಯ್ಯನವರು ಬಂಗಾರಪ್ಪನವರು ತೆಗೆದುಕೊಂಡಂತೆ ತೀರ್ಮಾನ ತೆಗೆದುಕೊಂಡರೆ ನಾವೆಲ್ಲರೂ ಅವರ ಜೊತೆಗೆ ಇರುತ್ತೇವೆ ಎಂದರು ಮುಂದುವರಿದು, ಅಂತಹ ಟೈಮ್ ಬಂದ್ರೆ ಸಿದ್ದರಾಮಯ್ಯ ಅವರು ಸಹ ಬಂಗಾರಪ್ಪ ನಂತವರೇ ಎಂದರು.