ಕಾವೇರಿಗಾಗಿ ಅ.10ಕ್ಕೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌, ವಾಟಾಳ್‌ ಘೋಷಣೆ

By Santosh NaikFirst Published Oct 3, 2023, 6:33 PM IST
Highlights

ಕಾವೇರಿ ನದಿ ನೀರು ಹೋರಾಟದ ಸಂಬಂಧ ಅಕ್ಟೋಬರ್‌ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವುದಾಗಿ ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಘೋಷಣೆ ಮಾಡಿದ್ದಾರೆ.

ಬೆಂಗಳೂರು (ಅ.3): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ವಿರುದ್ಧ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್‌ 10 ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅತ್ತಿಬೆಲೆ ಬಳಿ ಹೆದ್ದಾರಿ ಬಂದ್ ಮಾಡಲಿದ್ದೇವೆ ಎಂದು ವಿಧಾನಸೌಧದಲ್ಲಿ ತಿಳಿಸಿದ್ದಾರೆ. ತಮಿಳುನಾಡಿನವರು ನಮ್ಮ ಮೇಲೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಬಹಳ ನೋವಾಗುತ್ತದೆ. ಕೆಆರ್‌ಎಸ್‌ನಲ್ಲಿ ಪ್ರಾಮಾಣಿಕವಾಗಿ ನೀರಿಲ್ಲ. ಜಲಸಂಪನ್ಮೂಲ ಸಚಿವರು ಅಷ್ಟು ಬಂತು ಇಷ್ಟು ಬಂತು ಅಂತ ಅದೇನೋ ಹೇಳ್ತಾರೆ ಪಾಪ. ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೇಶದ ಮೇಲೆ ಯುದ್ದ ಮಾಡಿದಂತೆ ಆಡುತ್ತಾರೆ.ತಮಿಳುನಾಡಿನವರು ಮಾರುವೇಶದಲ್ಲಿ ಬಂದು ಕೆಆರ್‌ಎಸ್‌ ರೌಂಡ್ ಹಾಕಿಕೊಂಡು ಹೋಗಲಿ. ಸ್ಟಾಲಿನ್ ಏನ್ ಬರೋದು ಬೇಡ. ನಮ್ಮನ್ನ ಏನು ಮಾಡಬೇಕು ಅನ್ಕೊಂಡಿದ್ದಾರೆ. ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಹಾಕಿದೆ. ಅರ್ಜಿ ಏನಾಯ್ತು, ಅಲ್ಲಿಯವರೆಗೆ ನೀರು ಏನಾಗ್ತಿದೆ ಎನ್ನುವ ಸತ್ಯ ನಮಗೆ ಬೇಕಿದೆ ಎಂದು ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ತಮಿಳುನಾಡಿಗೆ ಗಂಭೀರವಾಗಿ ಹೇಳುತ್ತಿದ್ದೇನೆ. ರಾಜಕೀಯ ಮಾಡ್ತಿದ್ದೀರಿ, ಈ ವಿಚಾರದಲ್ಲಿ ರಾಜಕೀಯ ಬೇಡ. ನಿಮ್ಮನ್ನ ನಾವು ಕೆಟ್ಟದಾಗಿ ನೋಡಬೇಕಾಗುತ್ತೆ. ಪಳನಿಸ್ವಾಮಿ ಕೂಡ ಬೀದಿಗೆ ಇಳಿದಿದ್ದಾರೆ. ಇದನ್ನ ಕರ್ನಾಟಕದ ಜನತೆ ಗಂಭೀರವಾಗಿ ಚಿಂತನೆ  ಮಾಡಬೇಕು. ಯಾರಿಗೂ ಗಂಭೀರತೆ ಇಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ನಾವು ತಮಿಳುನಾಡಿನ ತಪ್ಪು, ಬ್ಲಾಕ್ ಮೇಲ್, ಸ್ಟಾಲಿನ್ ಸರ್ಕಾರದ ವಿರುದ್ದ ಐದನೇ ತಾರೀಕು ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಬಾರಿ ದೊಡ್ಡ ಮೆರವಣಿಗೆ ಮಾಡಲಿದ್ದೇವೆ. ನಮ್ಮಲ್ಲಿ ನೀರಿಲ್ಲ ಅಂತ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಕೆಆರ್‌ಎಸ್‌ನಲ್ಲಿ ಕನ್ನಡ ಒಕ್ಕೂಟದ ಮೇಳ ಮಾಡಲಿದ್ದೇವೆ. ನೂರಾರು ವಾಹನಗಳಲ್ಲಿ ತೆರಳಿ ಕನ್ನಡ ಒಕ್ಕೂಟದ ಮೇಳ, ಕಪ್ಪು  ಬಾವುಟ ಪ್ರದರ್ಶನ , ಪ್ರತಿಭಟನೆ ಕರಾಳ ದಿನ ಆಚರಿಸಲಿದ್ದೇವೆ ಎಂದು ಹೇಳಿದ್ದಾರೆ.

ಸಂಸದರು ರಾಜೀನಾಮೆ ನೀಡಿ: ಸಂಸದರು ಈಗಲಾದರೂ ಧೈರ್ಯ ಮಾಡಿ ರಾಜೀನಾಮೆ ಕೊಡಿ. ಇನ್ನು ಆರು ತಿಂಗಳಲ್ಲಿ ಚುನಾವಣೆ ಬರುತ್ತೆ, ರಾಜೀನಾಮೆ ಕೊಟ್ರೆ ಶಕ್ತಿ ಗೌರವ ಬರುತ್ತೆ. ಮೋದಿ ಅವರು ಎರಡೂ ರಾಜ್ಯದವರನ್ನ‌ಕರೆಸಿ ಮಾತನಾಡಲಿ. ಅದಕ್ಕೂ ಮುನ್ನ ನಿಮ್ಮದೇ ಆದ ಒಂದು ತಂಡ ಕಳಿಸಿ ವರದಿ ಪಡೆಯಿರಿ. ಕಾವೇರಿ ವಿಚಾರದಲ್ಲಿ ರಾಜಕೀಯ ಆಟ ಬೇಡ. ಇಬ್ಬರೂ ಸಿಎಂ ಕರೆಸಿ ಮಾತನಾಡಿ. ಪ್ರಧಾನಿಯಾಗಿ ನನಗೇನು ಗೊತ್ತಿಲ್ಲ ಅನ್ನೋದು ಬೇಡ. ಹಿಂದೆಲ್ಲಾ ಪ್ರಧಾನಿಗಳು ಸಮಸ್ಯೆ ಬಗೆ ಹರಿಸಿದ್ದಾರೆ. ಈಗ ಸಂಕಷ್ಟವಿದೆ. ನೀರಿಲ್ಲ ಎನ್ನುವಾಗ ನಾವೇನು ಮಾಡಬೇಕು? ಇಲ್ಲಿ ಸಂಕಷ್ಟ ಸೂತ್ರದ ಬಗ್ಗೆ ತೀರ್ಮಾನ ಆಗಬೇಕು ಎಂದಿದ್ದಾರೆ.

 

ಕನ್ನಡಪರ ಸಂಘಟನೆಗಳ ಪ್ರತಿಭಟನೆ: ತಮಿಳನಾಡು ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ

ಇದು ರಾಜಕೀಯ ಮಾಡೋ ವಿಚಾರವಲ್ಲ. ಅಕ್ಟೋಬರ್ ಹತ್ತನೇ ತಾರೀಕು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್‌ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಅತ್ತಿಬೆಲೆ ಬಳಿ ಹೆದ್ದಾರಿ ಬಂದ್ ಮಾಡುತ್ತೇವೆ. ನಾರಾಯಣ ಗೌಡ ನಾನು ಸ್ನೇಹಿತರು, ನಾವು ನಾವು ಯಾಕೆ ಕಿತ್ತಾಡಬೇಕು. ನಾವು ಸ್ಟಾಲಿನ್ ಮೇಲೆ ಹೋರಾಟ ಮಾಡೋದು ಎಂದು ಹೇಳಿದ್ದಾರೆ.

ಕಾವೇರಿ ವಿಚಾರದಲ್ಲಿ ಕೆಟ್ಟ ಮೇಲೆ ಸರ್ಕಾರಕ್ಕೆ ಬುದ್ಧಿ ಬರುತ್ತಿದೆ! ಮಾಜಿ ಸಿಎಂ ಮಾತಿನ ಮರ್ಮವೇನು?

ಸಿನಿಮಾದವ್ರು ಅವರಿಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವೀರಪ್ಪ ಮಿಯ್ಲಿ ಕೂಡ ಇಬ್ಬರೂ ಕುಳಿತು ಮಾತನಾಡಿ ಎನ್ನುತ್ಥಾರೆ. ಎಲ್ಲಿ ಕುತ್ಕೊಂಡು ಮಾತನಾಡಬೇಕು, ಅವರ ಮನೆಯಲ್ಲ, ಚಿಕ್ಕಬಳ್ಳಾಪುರದಲ್ಲ, ದೊಡ್ಡಬಳ್ಳಾಪುರದಲ್ಲ ಸಿನಿಮಾದವರು ಸ್ಪಷ್ಟ ಮಾತುಗಳನ್ನಾಡುತ್ತಿಲ್ಲ, ಸುಮ್ನೆ ನಾವಿದ್ದೀವಿ ಎನ್ನುತ್ತಿದ್ದಾರೆ. ನಾವೇ  ಬೇವರ್ಸಿಗಳೇನೂ ಅನಿಸಿದೆ. ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ  29 ರ ಬಂದ್ ಉತ್ತರ ಕೊಟ್ಟಿದೆ ಎಂದಿದ್ದಾರೆ.

click me!