ಶಿವಮೊಗ್ಗ ಗಲಭೆ ಪೂರ್ವ ನಿಯೋಜಿತ ಕೃತ್ಯ. ಗಜ್ವಾ ಹಿಂದ್ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆ, ವ್ಯಕ್ತಿಗಳು ಇನ್ನೂ ಇದ್ದಾರೆ ಅಂತ ಶಿವಮೊಗ್ಗ ಘಟನೆಯಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಹೇಳಿದರು.
ಕೋಲಾರ (ಅ.3): ಶಿವಮೊಗ್ಗ ಗಲಭೆ ಪೂರ್ವ ನಿಯೋಜಿತ ಕೃತ್ಯ. ಗಜ್ವಾ ಹಿಂದ್ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆ, ವ್ಯಕ್ತಿಗಳು ಇನ್ನೂ ಇದ್ದಾರೆ ಅಂತ ಶಿವಮೊಗ್ಗ ಘಟನೆಯಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಹೇಳಿದರು.
ಕೋಲಾರದಲ್ಲಿ ಶಿವಮೊಗ್ಗ ಗಲಭೆ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ಉಗ್ರ ಸಂಘಟನೆ ಸಿಮಿ ಬ್ಯಾನ್ ಮಾಡಿ ಅದರ ಕಚೇರಿ ಮೇಲೆ ದಾಳಿ ನಡೆದಾಗ ಗಜ್ವಾ ಹಿಂದ್ ಟಾಸ್ಕ್ ಪೂರ್ಣಗೊಳಿಸುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಿದ್ದು ಬಯಲಾಗಿತ್ತು. ಆದರೆ ಉಗ್ರ ಸಂಘಟನೆ ಬ್ಯಾನ್ ಆಗಿದ್ದರೂ, ಅದರ ವ್ಯಕ್ತಿಗಳು ಇನ್ನೂ ಇದ್ದಾರೆ ಎಂಬುದು ಶಿವಮೊಗ್ಗ ಗಲಭೆಯಿಂದ ಗೊತ್ತಾಗುತ್ತದೆ ಎಂದರು.
ಡಿಕೆಶಿಯವರದ್ದು ಗೂಂಡಾ, ದುರಹಂಕಾರಿ ವರ್ತನೆ: ಸಿ.ಟಿ.ರವಿ ಆರೋಪ
ಟಿಪ್ಪು ಮತ್ತು ಔರಂಗಜೇಬನ ಉದ್ದೇಶ ಗಜ್ವಾ ಇ ಹಿಂದ್ ಒಂದೇ ಆಗಿತ್ತು. ಟಿಪ್ಪು ಆಡಳಿತವೇ ಮುಂದುವರಿದಿದ್ದರೆ ಕನ್ನಡ ಉಳಿಸಿಕೊಳ್ಳುವುದೇ ಕಷ್ಟ ಆಗುತ್ತಿತ್ತು. ಟಿಪ್ಪು ಮತ್ತು ಔರಂಗಜೇಬ್ ಅಂದಿನ ಕಾಲದ ಭಯೋತ್ಪಾದಕರು. ಅಖಂಡ ಭಾರತವನ್ನು ಇಸ್ಲಾಮಿಕರಣಗೊಳಿಸುವ ಉದ್ದೇಶವಿತ್ತು. ಅಂದು ಕಾಶಿ ವಿಶ್ವನಾಥ ಮಂದಿರ ನಾಶ ಮಾಡಿದ್ದು, ಗುರು ತೇಜ್ ಬಹದ್ದೂರ್ ಕೊಂದವನು ಔರಂಗಜೇಬ್. ಅಂಥ ಮತಾಂಧನನ್ನು ಇಂದು ಈದ್ ಮಿಲಾದ್ ದಿನವೇ ಆರಾಧಿಸುತ್ತಿದ್ದಾರೆಂದರೆ ಇವರ ಉದ್ದೇಶವೇ ನಮ್ಮ ಸನಾತನ ಧರ್ಮ, ಭಾರತೀಯತೆ ನಾಶ ಮಾಡುವುದು ಅಂತಾ ನನಗನ್ನಿಸ್ತಿದೆ. ಔರಂಗಜೇಬನ ಆರಾಧಿಸುವವರ ಉದ್ದೇಶ ಸ್ಪಷ್ಟ ಇದೆ. ಬಹಳ ದೊಡ್ಡ ಮತ್ತು ಹಳೆಯ ಅಜೆಂಡಾವನ್ನು ಹೊಸ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ.ಇದಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕುಮ್ಮಕ್ಕು ಕೊಟ್ಟಿದೆ. ರಾಷ್ಟ್ರ ವಿರೋಧಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ನೋಡಿದಾಗ ಗಜ್ವಾ ಹಿಂದ್ ಟಾಸ್ಕ್ ಪೂರ್ತಿಗೊಳಿಸಲು ಕೆಲಸ ಶುರು ಮಾಡಿದ್ದಾರೆ. ಆ ಟಾಸ್ಕ್‌ನ ಉದ್ದೇಶವೇ ಇತರ ಧರ್ಮಗಳನ್ನು ಮುಗಿಸಿ ಮೊಘಲ್ ಸಾಮ್ರಾಜ್ಯ ಸ್ಥಾಪನೆ ಮಾಡೋದು. ಶಿವಮೊಗ್ಗದಲ್ಲಿ ಮತಾಂಧ ಔರಂಗಜೇಬನ ಕಟೌಟ್ ಹಾಕಿದರೆ ಅದನ್ನು ತಡೆಯದ ಪೊಲೀಸ್ ಇಲಾಖೆ. ಭಗಧ್ವಜ ಕಟ್ಟಿದ್ರೆ ಪ್ರಶ್ನೆ ಮಾಡ್ತಾರೆ. ಭಗವಧ್ವಜಕ್ಕೆ ನಿಮ್ಮ ಆಕ್ಷೇಪ ಇದೆ. ಹಾಗಾದರೆ ಔರಂಗಜೇಬನ ಚಿತ್ರ ಹಾಕಿದ ಮತಾಂಧ ಶಕ್ತಿಗಳಿಗೆ ರಾಜ್ಯ ಸರ್ಕಾರದ ಬೆಂಬಲ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಪರಮೇಶ್ವರ್ ಒಬ್ಬ ಅಸಮರ್ಥ ಗೃಹಸಚಿವ ಶಿವಮೊಗ್ಗದಲ್ಲಿ ಅವರು ಪ್ರದರ್ಶನ ಮಾಡಿದ್ದು ಮರದ ಕತ್ತಿ ಎನ್ನುತ್ತಾರೆ. ಮನೆಗಳ ಮೇಲೆ ಕಲ್ಲು ತೂರಿದ್ದಾರೆ, ಎಸ್‌ಪಿ ಮೇಲೆಯೇ ಕಲ್ಲೂ ತೂರಿದ್ದಾರೆ, ಹಲವು ಪೊಲೀಸರಿಗೆ ಗಾಯಗಳಾಗಿವೆ ಇಷ್ಟಾದರೂ ಇದೊಂದು ಸಣ್ಣ ಘಟನೆ ಎನ್ನುತ್ತಾರಲ್ಲ. ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡುವುದು ಇದು ಒಲೈಕೆಯ ಪರಾಕಾಷ್ಠೆ, ದೇಶದ ಭದ್ರತೆಗೇ ಅಪಾಯ ಎಂದರು.
ಶಿವಮೊಗ್ಗ ಗಲಭೆಗೆ ರಾಜ್ಯಸರ್ಕಾರದ ವೈಫಲ್ಯವೇ ಕಾರಣ.ಗಲಭೆಯ ನೇರ ಹೊಣೆ ರಾಜ್ಯ ಸರ್ಕಾರವೇ ಹೊರಬೇಕು. ಈ ಘಟನೆಯ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಗಲಭೆ: ಮತಾಂಧ ಶಕ್ತಿಗಳ ಕೈವಾಡವಿದೆ -ನಳಿನ್ ಕುಮಾರ್ ಕಟೀಲ್
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಡಿಕೆ ಶಿ ಶಿಪಾರಸು ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರ ಋಣ ತೀರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಅವರ ಋಣ ತೀರಿಸುವ ಕೆಲಸ ಮಾಡ್ತಾ ಇದ್ದಾರೆ. ಇಂದು ಅವರ ಝಳಪಿಸುತ್ತಿರುವ ಕತ್ತಿ ಇಂದು ಬಿಜೆಪಿ ಆರೆಸ್ಸೆಸ್, ಅದೇ ಕತ್ತಿ ನಾಳೆ ಕಾಂಗ್ರೆಸ್ ಕಡೆಯೂ ತಿರುಗತ್ತೆ ನೆನಪಿರಲಿ. ಇಂದು ಸಿಟಿ ರವಿ ನಾಳೆ ಸಿದ್ದರಾಮಯ್ಯ ಡಿಕೆಶಿ. ನಾವು ನೀವು ಸ್ವರ್ಗಕ್ಕೆ ಹೋಗಬೇಕು ಎಂದರೆ ಒಳ್ಳೆಯ ಕೆಲಸ ಮಾಡಬೇಕು. ಅವರು ಗಜ್ವಾ ಇ ಹಿಂದ್ ಮಾಡ್ತಾರೆ ಅಂದರೆ ಇಸ್ಲಾಮೇತರರನ್ನು ಕೊಂದರೆ ಅವರಿಗೆ ಸ್ವರ್ಗ. ಶಿವಮೊಗ್ಗದಲ್ಲಿ ಕತ್ತಿ ಝಳಪಿಸಿದ ಇಂಥ ಮತಾಂಧರನ್ನು ಪೋಷಣೆ ಮಾಡುತ್ತಿರುವವರು ಮುಂದೊಂದು ಅದರ ಫಲ ಅನುಭವಿಸುತ್ತಾರೆ ಎಂದರು.