
ಬೆಂಗಳೂರು (ಅ.3) ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಕಾರು ಅಪಫಾತ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇಕ್ಕಟ್, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಖ್ಯಾತಿಯ ನಟ ನಾಗಭೂಷಣ್ ಕಾರು ಅಪಘಾತ ಮಾಡಿ ಮಹಿಳೆಯ ಸಾವಿಗೆ ಕಾರಣವಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್‌ನಿಂದಲೇ ಕಾರು ಅಪಘಾತವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅವರ ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಕಾರು ಅಪಘಾತ ಡ್ರಿಂಕ್ ಅಂಡ್ ಡ್ರೈವ್ ನಿಂದಲೂ ಆಗಿಲ್ಲ. ಮೊಬೈಲ್ ನಲ್ಲಿಮಾತಾಡಿಕೊಂಡು ಹೋಗಿದ್ರಿಂದಲೂ ಅಪಘಾತ ಸಂಭವಿಸಿಲ್ಲ ಹಾಗಾದ್ರೆ ಅಪಘಾತವಾಗಿದ್ದು ಹೇಗೆ ಅನ್ನೋದು ನಿಗೂಢವಾಗಿದೆ.
ದಂಪತಿ ಫುಟ್‌ಪಾತ್ ಮೇಲಿಂದ ಕೆಳಗಿಳಿದು ರಸ್ತೆಗೆ ಬಂದರು: ಅಪಘಾತದ ಬಗ್ಗೆ ಮೌನ ಮುರಿದ ನಾಗಭೂಷಣ್!
ಆರೋಪಿ ನಾಗಭೂಷಣ್, ಗಾಬರಿಯಿಂದ ಅಪಘಾತವಾಗಿದೆ ಎಂದು ಸ್ವಇಚ್ಚೆಯಿಂದ ಹೇಳಿಕೆ ನೀಡಿದ್ದಾರೆ. ಆದರೆ ನಂಬೋದಕ್ಕೆ ಯಾವ ಸಾಕ್ಷಿಯೂ ಇಲ್ಲ. ಹೀಗಾಗಿ ಅಪಘಾತ ರಹಸ್ಯ ಭೇದಿಸಲು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು. ಅಪಘಾತದ ಕಾರಣ ತಿಳಿಯಲು ಪರಿಶೀಲನೆ ನಡೆಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಐಎಂವಿಇ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಕಾರಿನ ಮ್ಯಾನುಪ್ಯಾಕ್ಚರ್ ಡಿಫಾಲ್ಟ್‌ನಿಂದ ಕಾರು ಅಪಘಾತವಾಗಿದೆಯಾ? ಬ್ರೇಕ್ ಫೇಲ್ಯೂರ್ ನಿಂದ ಸಂಭವಿಸಿದೆಯಾ? ಗಾಡಿ ಎಷ್ಟು ಡ್ಯಾಮೇಜ್ ಆಗಿದೆ ಎಂಬ ಐಎಂವಿ ಟೆಸ್ಟ್ ನಿಂದ ಮಾಹಿತಿ ಹೊರಬರುತ್ತದೆ. ಹೀಗಾಗಿ ಐಎಂವಿ ಟೆಸ್ಟ್ ನಡೆಸುವಂತೆ ಪತ್ರ.
ಹಲವು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವ ನಟ:
ನಟ ನಾಗಭೂಷಣ್ ಈ ಹಿಂದೆ ಹಲವು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋ ಬಗ್ಗೆ ದೂರುಗಳಿವೆ. ನೋ ಪಾರ್ಕಿಂಗ್ , ಸೀಟ್ ಬೆಲ್ಟ್ ಧರಿಸದ ಕಾರಿನ ಮೇಲಿದೆ ಮೂರು ಕೇಸ್‌ಗಳಿವೆ. ಕಿಯಾ ಕಂಪನಿಯ KA09MG5335 ಸೆಲ್ಟೋಸ್ ಎಂಬ ಕಾರು ಸಾರ್ವಜನಿಕರಿಂದ ದೂರು ನೀಡಿದ್ದರು.
ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ
ಮೊನ್ನೆ ಶನಿವಾರ ರಾತ್ರಿ 9.30ರ ಸುಮಾರಿಗೆ ನಡೆದ ಭೀಕರ ಅಪಘಾತ ನಡೆದ ಅಪಘಾತದಲ್ಲೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಂಚಾರಿ ನಿಯಮ ಪೊಲೀಸರು ಹೇಳಿದ್ದಾರೆ. ಡ್ರೈವಿಂಗ್ ಮಾಡುವಾಗ ನಟ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಇಷ್ಟು ದೊಡ್ಡ ಅಪಘಾತವಾದ್ರೂ ಏರ್ ಬ್ಯಾಗ್ ಓಪನ್ ಆಗಿಲ್ಲ ಎಂದರೆ ಸೀಟ್ ಬೆಲ್ಟ್ ಧರಿಸದಿರುವುದೇ ಕಾರಣ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ