ಕನ್ನಡ ನಾಡಿನ ಜೀವನದಿ ಕಾವೇರಿ ನದಿಯ ಕೆಆರ್‌ಎಸ್ ಆಣೆಕಟ್ಟು ಶೇ.100ರಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ ಬರುವ ಒಳಹರಿವಿನ ನೀರನ್ನು ಹಾಗೆಯೇ ನದಿಗೆ ಹರಿಸಲಾಗುತ್ತಿದೆ.
ಮಂಡ್ಯ (ಜು.24): ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ನಿರ್ಮಿಸಲಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಆಣೆಕಟ್ಟೆಯ ಗರಿಷ್ಠ ನೀರಿನ ಸಂಗ್ರಹದ ಸಾಮರ್ಥ್ಯವಿರುವ 124 ಅಡಿಯಷ್ಟು ನೀರು ಭರ್ತಿಯಾಗಿದೆ. ಆಣೆಕಟ್ಟೆಯಲ್ಲಿ ಶೇ.100 ನೀರು ತುಂಬಿದ ಬೆನ್ನಲ್ಲಿಯೇ ಜಲಾಶಯಕ್ಕೆ ಬರುವ ಎಲ್ಲ ಒಳಹರಿವಿನ ನೀರನ್ನು ಹಾಗೆಯೇ ನದಿಗೆ ಹಾಗೂ ಕಾಲಿವೆಗಳಿಗೆ ಹರಿಸಲಾಗುತ್ತಿದೆ.
ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಅದರಲ್ಲಿಯೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂಬ ಭಾರಿ ಮಳೆಯಾಗುತ್ತಿದ್ದು, ಕಾವೇರಿ ಕೊಳ್ಳಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ನಿರ್ಮಿಸಲಾದ ಎಲ್ಲ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿದ್ದವು. ಈಗ ಕಾವೇರಿ ನದಿಗೆ ಮೈಸೂರು ರಾಜರು ನಿರ್ಮಿಸಿದ ಅತೊದೊಡ್ಡ ಜಲಾಶಯ ಕೆಆರ್‌ಎಸ್ ಜಲಾಶಯವೂ ಈಗ ಭರ್ತಿಯಾಗಿದೆ. ಈ ಕೆಆರ್‌ಎಸ್ ಜಲಾಶಯದ ನೀರು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಗೆ ಜೀವಜಲವನ್ನು ಒದಗಿಸಲಿದೆ. ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಯಿದ್ದು, ಇಂದು ಶೇ.100ರಷ್ಟು ಭರ್ತಿಯಾಗಿದೆ.
ಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್ ನೀರು ಬಿಡುಗಡೆ : ರಂಗನತಿಟ್ಟು ಪ್ರವೇಶ ನಿರ್ಬಂಧ
ಕಳೆದ ವರ್ಷ ರಾಜ್ಯದಲ್ಲಿ ಬೀರಿದ್ದ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರು ಹಾಗೂ ರಾಜ್ಯದ ಜನತೆಯ ಮೊಗದಲ್ಲಿ ಸಂತಸ ಮನೆಮಾಡಿದೆ. ಇನ್ನು ಕೆಆರ್‌ಎಸ್ ಜಲಾಶಯ ಭರ್ತಿಯಾದ ಬೆನ್ನಲ್ಲಿಯೇ ಡ್ಯಾಮ್‌ಗೆ ಹರಿದುಬರುತ್ತಿರುವ ಒಳಹರಿವಿನ ನೀರಿನ ಪ್ರಮಾಣವನ್ನು ಹಾಗೆಯೇ ಗೇಟ್ ಮೂಲಕ ಹೊರಗೆ ಕಳುಹಿಸಲಾಗುತ್ತಿದೆ. ಜು.24ರ ಬುಧವಾರ ಸಂಜೆ ವೇಳೆಗೆ ಕೆಆರ್‌ಎಸ್ ಡ್ಯಾಮ್‌ಗೆ 41 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, ಅದನ್ನು ಸಂಗ್ರಹಣೆ ಮಾಡಲು ಸಾಧ್ಯವಾಗದೇ ಬಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಕೆಳ ಭಾಗದಲ್ಲಿರುವ ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಕೆಆರ್‌ಎಸ್ ನೀರಿನ ಮಟ್ಟ
ಬಹಿರ್ದೆಸೆಗೆ ಕುಳಿತ ವ್ಯಕ್ತಿ ಮೇಲೆ ದಾಳಿ ಮಾಡಿ, ನುಂಗಲು ಮುಂದಾದ 13 ಅಡಿ ಉದ್ದದ ಹೆಬ್ಬಾವು!
ಜು.27ಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯಕ್ಕೆ ಬರಗಾಲ ಆವರಿಸುತ್ತದೆ ಎಂದು ಕಳೆದ ವರ್ಷ ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಆದರೆ, ಈ ವರ್ಷ ಮುಂಗಾರು ಪೂರ್ವ ಅವಧಿಯಿಂದಲೇ ಉತ್ತಮವಾಗಿ ಮಳೆಯಾಗುತ್ತಿದೆ. ಜೊತೆಗೆ, ಮುಂಗಾರು ಮಳೆಯೂ ಉತ್ತಮವಾಗಿ ಸುರಿದಿದ್ದು, ಹಳ್ಳ -ಕೊಳ್ಳಗಳು, ಕೆರೆ-ಕಟ್ಟೆಗಳು ಹಾಗೂ ನದಿಗಳು ತುಂಬಿ ತುಳುಕುತ್ತಿವೆ. ಕೆಲವುಯ ಪ್ರದೇಶಗಳಲ್ಲಿ ಪ್ರವಾಹವೂ ಸೃಷ್ಟಿಯಾಗಿದೆ. ಆದರೆ, ದಕ್ಷಿಣ ಕರ್ನಾಟಕದ ಜನತೆಗೆ ಜೀವನದಿ ಆಗಿರುವ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ಜು.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ.