ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಎಂದು ನಾವು ಪದೇ ಪದೇ ತಿವಿದಿದ್ದರಿಂದ ಈಗ ನೇಮಕ ಆಗಿದೆ. ರಾಜ್ಯಾಧ್ಯಕ್ಷರ ನೇಮಕ ಮಾಡುವಲ್ಲಿ ಬಿಜೆಪಿ ನಾಯಕರಿಗೆ ಗಜಪ್ರಸವ ಆದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ವ್ಯಂಗ್ಯ ಮಾಡಿದರು.
ಶಿವಮೊಗ್ಗ (ನ.11): ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಎಂದು ನಾವು ಪದೇ ಪದೇ ತಿವಿದಿದ್ದರಿಂದ ಈಗ ನೇಮಕ ಆಗಿದೆ. ರಾಜ್ಯಾಧ್ಯಕ್ಷರ ನೇಮಕ ಮಾಡುವಲ್ಲಿ ಬಿಜೆಪಿ ನಾಯಕರಿಗೆ ಗಜಪ್ರಸವ ಆದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ವ್ಯಂಗ್ಯ ಮಾಡಿದರು.
ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮಗೆ ವಯಸ್ಸಾಗಿದೆ ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಯಾವ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದರೋ, ಅದೇ ಬಿ ಎಸ್ ವೈ ನೆರಳಿನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಮಾಡಲಾಗಿದೆ. ಅಪ್ರತ್ಯಕ್ಷವಾಗಿ ಯಡಿಯೂರಪ್ಪನವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದರೆ ಯಡಿಯೂರಪ್ಪ ಆದಂತೆಯೇ. ಕುದುರೆ ಮುಂದೆ ಹುಲ್ಲು ಕಟ್ಟಿ ಓಡಿಸಿದ ಹಾಗೆ ಆಗಿದೆ ಎಂದು ವ್ಯಂಗ್ಯ ಮಾಡಿದರು.
ಹಿಂದುಳಿದ ವರ್ಗದ ಬಿಜೆಪಿ ಶಾಸಕರಿಂದ ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಧರಣಿ ಎಚ್ಚರಿಕೆ!
ಇನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಸಿದ ಮಂಜುನಾಥ್. ಇವರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ.ಇದೊಂದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಜಿಲ್ಲಾ ಕೆಡಿಪಿ ಸಭೆಯಲ್ಲಿ ಲೇಔಟ್ಗೆ ಅಕ್ರಮ ಮಣ್ಣು ತೆಗೆದ ವಿಚಾರ ಪ್ರಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಮಧು ಬಂಗಾರಪ್ಪನವರು ಸರ್ಕಾರಿ ನೌಕರರ ಪರವಾಗಿ ಇದ್ದಾರೆ. ಸರ್ಕಾರಿ ನೌಕರರ ಮೇಲೆ ಆರೋಪ ಬಂದಾಗ ತನಿಖೆಗೆ ಅನುಕೂಲವಾಗಲಿ ಎಂದು ವರ್ಗಾವಣೆ ಮಾಡಲಾಗಿದೆ. ನನಗೆ ಇರುವ ಮಾಹಿತಿ ಪ್ರಕಾರ ಷಡಕ್ಷರಿ ಕೆಇಬಿ ಮೊರೆ ಹೋಗಿದ್ದಾರೆ. ನೌಕರರ ಪರವಾಗಿ ಇರುವ ಮಧು ಬಂಗಾರಪ್ಪನವರ ಮೇಲೆ ಪ್ರತ್ಯಕ್ಷ ಮತ್ತು ಪ್ರತ್ಯಕ್ಷವಾಗಿ ದಾಳಿ ನಡೆಸಲಾಗುತ್ತದೆ. ಸರ್ಕಾರಕ್ಕೆ ಬರಬೇಕಾದ ಎಪ್ಪತ್ತು ಲಕ್ಷದಷ್ಟು ರಾಜಧನ ನಷ್ಟ ಆಗಿದೆ ಎಂದಾಗ ಜಿಲ್ಲಾ ಸಚಿವರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಪಿಎಸ್ ಅನ್ನು ಓ ಪಿ ಎಸ್ ಮಾಡುವ ವಿಚಾರವಾಗಿ ಮಧು ಬಂಗಾರಪ್ಪನವರು ಲಕ್ಷಾಂತರ ನೌಕರರ ಪರವಾಗಿ ಇದ್ದಾರೆ. ಅನಗತ್ಯವಾಗಿ ಬಿಜೆಪಿಯವರು ಮಧು ಬಂಗಾರಪ್ಪ ವಿರುದ್ಧ ಕುತಂತ್ರದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗಿದೆಯಾ?: ಕೆಎಸ್ ಈಶ್ವರಪ್ಪ ಪ್ರಶ್ನೆ