'ಹಮಾಸ್‌ಗೆ ಜಯವಾಗಲಿ' ಎಂದಿದ್ದ ಆರೋಪಿ ಝಾಕಿರ್ ಅರೆಸ್ಟ್

By Ravi Janekal  |  First Published Oct 14, 2023, 4:53 PM IST

ಹಮಾಸ್ ಉಗ್ರರನ್ನು 'ದೇಶ ಪ್ರೇಮಿಗಳು' ಎಂದು ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿದ ಮಂಗಳೂರು ಬಂದರು ಪೊಲೀಸರು. ಝಾಕೀರ್ ಬಂಧಿತ ಆರೋಪಿ.


ಮಂಗಳೂರು (ಅ.14): ಹಮಾಸ್ ಉಗ್ರರನ್ನು 'ದೇಶ ಪ್ರೇಮಿಗಳು' ಎಂದು ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿದ ಮಂಗಳೂರು ಬಂದರು ಪೊಲೀಸರು.

ಝಾಕೀರ್ ಬಂಧಿತ ಆರೋಪಿ. ಶುಕ್ರವಾರ ಮಸೀದಿಯಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಿ ಹಮಾಸ್ ಉಗ್ರರನ್ನು ಬೆಂಬಲಿಸಿ'ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲಿ ಎಂದು ವಿಡಿಯೋ ಮಾಡಿದ್ದ ಆರೋಪಿ. ಅಷ್ಟೇ ಅಲ್ಲ, ಎಲ್ಲ ಮುಸ್ಲಿಂಮರು ಹಮಾಸ್ ಉಗ್ರರಿಗಾಗಿ ಪ್ರಾರ್ಥಿಸುವಂತೆ ಹೇಳಿದ್ದ. ಆರೋಪಿ ತನ್ನ ವೇಷಭೂಷಣಗಳ ಕಾರಣಕ್ಕೆ ಸ್ಥಳೀಯರಲ್ಲಿ 'ತಾಲಿಬಾನ್ ಝಾಕಿರ್' ಎಂದೇ ಕುಖ್ಯಾತಿ ಪಡೆದಿದ್ದ ಆರೋಪಿ. 

Tap to resize

Latest Videos

ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದು ಸಂಘಟನೆಗಳು. ಉಗ್ರರರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿ ವಿಡಿಯೋ ಮಾಡಿದ್ದ ಝಾಕೀರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವಹಿಂದು ಪರಿಷತ್ ಮುಖಂಡ ಪ್ರದೀಪ್ ಕುಮಾರ್ ಮಂಗಳೂರು ಬಂದರು ಠಾಣೆಯಲ್ಲಿ ದೂರು ನೀಡಿದ್ದರು.

Video viral: ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದ ಮಂಗಳೂರು ವ್ಯಕ್ತಿ!

 ಹಮಾಸ್ ಉಗ್ರರ ಪರ ವಿಡಿಯೋ ಹರಿಬಿಟ್ಟು ಕೋಮುಪ್ರಚೋದನೆ ಆರೋಪ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ. ಅಲ್ಲದೇ ಇವನೊಂದಿಗೆ  ಭಯೋತ್ಪಾದಕರ ನಂಟು ಇರುವ ಶಂಕೆ. ತನಿಖೆ ಮಾಡಿ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಿ ದೂರು ನೀಡಲಾಗಿತ್ತು. ಐಪಿಸಿ ಸೆಕ್ಷನ್ 153a ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಿರುವ ಪೊಲೀಸರು.
 

click me!