Farm Laws Withdrawn:ಒಣ ಪ್ರತಿಷ್ಠೆಗೆ ಒಳಗಾಗದೆ ಕಾಯ್ದೆ ವಾಪಸ್ ಎಂದ ಬಿಎಸ್​ವೈ

By Suvarna News  |  First Published Nov 19, 2021, 2:41 PM IST

* ಮೂರು ಕೃಷಿ ಮಸೂದೆ ವಾಪಸ್ ಪಡೆದ ಮೋದಿ
* ಮೋದಿಯ  ಈ ಮಹತ್ವದ ನಿರ್ಧಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ  ಅಭಿನಂದನೆ
* ಒಣ ಪ್ರತಿಷ್ಠೆಗೆ ಒಳಗಾಗದೆ ಕಾಯ್ದೆ ವಾಪಸ್ ಎಂದ ಬಿಎಸ್​ವೈ


ಹುಬ್ಬಳ್ಳಿ, (ನ.19): ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ನ.19) ವಿವಾದಿತ 3 ಕೃಷಿ ಕಾಯ್ದೆಗಳನ್ನ (Farm Laws) ವಾಪಸ್​ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯ (Narendra Modi) ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

"

Tap to resize

Latest Videos

ಇನ್ನು ಮೋದಿ ಅವರ ಈ ಮಹತ್ವದ ನಿರ್ಧಾರಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಪ್ರತಿಕ್ರಿಯಿಸಿದ್ದು, ಯಾವುದೇ ಒಣ ಪ್ರತಿಷ್ಟೆಗೆ ಒಳಗಾಗದೇ ವಿವಾದಿತ ಕಾಯ್ದೆ ವಾಪಸ್ ಪಡೆದಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸುವೆ ಎಂದರು.

PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ಈ ಬಗ್ಗೆ ಹುಬ್ಬಳ್ಳಿ (Hubballi) ಇಂದು (ಶುಕ್ರವಾಎರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ವಿವಾದಿತ ಮೂರು ಕೃಷಿ ಕಾಯ್ದೆ ವಾಪಸ್ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಒಣ ಪ್ರತಿಷ್ಠೆಗೆ ಒಳಗಾಗದೆ ಕಾಯ್ದೆ ವಾಪಸ್ ಪಡೆದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಿರುವುದಿಲ್ಲ. ಏಕೆಂದರೆ ದೇಶದಲ್ಲಿ ಬಿಜೆಪಿಗೆ ಎದುರಾಳಿಗಳೇ ಇಲ್ಲ ಎಂದು ಹೇಳಿದರು. 

 ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿಯಿತಾ ಎಂಬ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಮಣಿಯುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಉತ್ತರ ಪ್ರದೇಶ ಚುನಾವಣೆಯನ್ನ ನಾವೇ ಗೆಲ್ತಿವಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾಯ್ದೆಯಲ್ಲಿ‌ ಲೋಪದೋಷ ಇಲ್ಲ ಅಂತ ಹೇಳಿದ್ದು ನಿಜ. ಆದರೆ ರೈತರ ಹೋರಾಟಕ್ಕೆ ಬೆಲೆ ಕೊಟ್ಟಿದ್ದೇವೆ. ತಡವಾಗಿಯಾದ್ರೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಕೃಷಿ ಕಾಯ್ದೆ ಹೋರಾಟದಲ್ಲಿ ರೈತರ ಸಾವಿಗೂ, ಕಾಯ್ದೆಗೂ ಸಂಬಂಧವಿಲ್ಲ. ಆದ್ರೂ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ
ಇನ್ನು ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿಯಿತಾ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯಿಸಿದ್ದು, ಮಣಿಯುವ ಪ್ರಶ್ನೆ ಇಲ್ಲ. ಈ ಪ್ರಕ್ರಿಯೆಯಿಂದ ನಮ್ಮ ದೇಶದಲ್ಲಿ ಜಾಗತೀಕರಣ, ಉದಾರೀಕರಣ ಪ್ರಾರಂಭವಾಗಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯಲಾಗಿತ್ತು. ಪಂಜಾಬ್ ಹರಿಯಾಣ ಭಾಗದ ರೈತರು ರೆಗ್ಯುಲೇಟರಿ ಮಾರ್ಕೆಟ್ ನಲ್ಲಿಯೇ ಇರಲಿ ಅನೋ ಒತ್ತಾಯ ಮಾಡಿದ್ದರು. ರೈತರ ಜೊತೆ ಮಾತ್ನಾಡಿ ಕನ್ವೆನ್ಸ್ ಮಾಡಿದ್ರು. ಆದ್ರೆ ರೈತರು ಕನ್ವೆನ್ಸ್ ಆಗಿಲ್ಲ. ಹೀಗಾಗಿ ಈ ಮೂರು ಖಾಯ್ದೆಯನ್ನ ಪ್ರಧಾನಿ ಮೋದಿ ಹಿಂಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

"

ನಮ್ಮದು ಸ್ಪಂದನ ಶೀಲ ಸರ್ಕಾರ. ರೈತರ ಒತ್ತಾಯಕ್ಕೆ ಸ್ಪಂದನೆ ಮಾಡಿದ್ದಾರೆ. ಪಂಚರಾಜ್ಯ ಚುನಾವಣಾ ಹಿನ್ನೆಲೆ ಕಾಯ್ದೆ ವಾಪಸ್ ಪಡೆದಿದ್ದಾರಾ ಎಂಬ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಪಂಚರಾಜ್ಯ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಹಿಂದೆ ನಡೆದ ಹರಿಯಾಣ, ಪಂಜಾಬ್ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದೇವೆ. ಮಸೂದೆಗಳು ಇನ್ನೊಂದು ಸರಿ ಚರ್ಚೆಯಾಗ್ಬೇಕು. ಹಿಂದೆ ತೆಗೆದುಕೊಂಡ್ರೆ ವಿಶ್ವಾಸ ಬರುತ್ತೆ ಅನ್ನೋ ದೃಷ್ಟಿಯಿಂದ ವಾಪಸ್​ ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಸಿ ಪಾಟೀಲ್ ಹೇಳಿಕೆ
ರೈತರಿಗೆ ಸಮಂಜಸವಾದ ದರದಲ್ಲಿ ಬೀಜಗಳನ್ನು ಒದಗಿಸಲು ಮತ್ತು ಸೂಕ್ಷ್ಮ ನೀರಾವರಿ, 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳಂತಹ ಸೌಲಭ್ಯಗಳನ್ನು ಒದಗಿಸಲು ನಾವು ಕೆಲಸ ಮಾಡಿದ್ದೇವೆ. ಇಂತಹ ಅಂಶಗಳು ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿವೆ. ಆದಾಗ್ಯೂ, ಹೊಸ ಕಾನೂನುಗಳ ಪ್ರಯೋಜನಗಳ ಬಗ್ಗೆ ಕೆಲವು ವರ್ಗದವರಿಗೆ ಅರ್ಥಮಾಡಿಸಲು ಸಾಧ್ಯವಾಗದೇ ಇರುವುದರಿಂದ ಕೇಂದ್ರ ಸರ್ಕಾರ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

click me!