
ಬೆಳಗಾವಿ[ಡಿ.12]: ‘ಜನತೆಗೆ ಅನ್ನ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋತಿದ್ದಕ್ಕೆ ಸ್ಪೀಕರ್ ರಮೇಶ್‌ಕುಮಾರ್ ಕಣ್ಣೀರು ಹಾಕಿದ್ದಾರೆ. ಆದರೆ, ಸಿದ್ದರಾಮಯ್ಯ ಅವರನ್ನು ವ್ಯವಸ್ಥಿತ ಪಿತೂರಿ ಮಾಡಿ ಸೋಲಿಸಿದ್ದು ಯಾರು? ಬಾದಾಮಿಯಲ್ಲೂ ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಏನಾಗುತ್ತಿತ್ತು’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ದೂರಿದ್ದಾರೆ.
ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ ಬಿಎಸ್ ವೈ
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸೋಲಿನ ಬಗ್ಗೆ ಎಲ್ಲರಿಗೂ ಅನುಕಂಪ ಇದೆ. ಕೋಲಾರದಲ್ಲಿ ನಡೆದ ಕನಕ ಜಯಂತಿಯಲ್ಲಿ ಸಿದ್ದರಾಮಯ್ಯ ಅವರ ಸೋಲು ನೆನೆದು ಸ್ಪೀಕರ್ ರಮೇಶ್‌ಕುಮಾರ್ ಕಣ್ಣೀರು ಹಾಕಿದ್ದರು. ಅನ್ನ ಕೊಟ್ಟವರ ಋುಣವನ್ನು ಜನರು ಮತ ಹಾಕುವಾಗ ಮರೆತರು. ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸದ ಕೆಟ್ಟಗುಣ ಹಲವರಲ್ಲಿದೆ. ಹೊಟ್ಟೆತುಂಬಾ ಊಟ ಕೊಟ್ಟಪುಣ್ಯಾತ್ಮನ ಸೋಲು ನನಗೆ ನನ್ನ ಸಾವಿಗಿಂತ ಹೆಚ್ಚು ನೋವು ತಂದಿದೆ ಎಂದಿದ್ದರು. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವ್ಯವಸ್ಥಿತ ಪಿತೂರಿ ಮಾಡಿ ಅವರನ್ನು ಸೋಲಿಸಿದ್ದು ಯಾರು ಎಂಬುದು ಗೊತ್ತಿದೆ. ಅಲ್ಲಿ ಸೋತಂತೆ ಬಾದಾಮಿಯಲ್ಲಿಯೂ ಅವರು ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಏನಾಗುತ್ತಿತ್ತು ಎಂದು ಕಾಂಗ್ರೆಸ್ ನಾಯಕರು ಯೋಚನೆ ಮಾಡಬೇಕು ಎಂದು ಯಡಿಯೂರಪ್ಪ ಪರೋಕ್ಷವಾಗಿ ಜೆಡಿಎಸ್‌ಗೆ ಬೆಂಬಲ ನೀಡಿದ ಕಾಂಗ್ರೆಸ್ ನಿರ್ಧಾರವನ್ನು ಟೀಕಿಸಿದರು.
ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ: ಯಡಿಯೂರಪ್ಪ ಹೇಳಿದ್ದೇನು?
ಈ ವೇಳೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್, ಸಿದ್ದರಾಮಯ್ಯ ಅವರು ಸೋತಿದ್ದ ಬಗ್ಗೆ ನೋವು ವ್ಯಕ್ತಪಡಿಸಿದ್ದೇನೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನರ ತೀರ್ಪಿಗೆ ನಾನು ಅಗೌರವ ತೋರಿಲ್ಲ. ಅವರ ಮತದಾನದ ಹಕ್ಕಿಗೆ ಅವಮಾನ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಅವಮಾನಿಸಿದಂತೆ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ