ಬ್ರಹ್ಮಕಲಶೋತ್ಸವಕ್ಕೆ ಯುಟಿ ಖಾದರ್ ಗೆ ಆಹ್ವಾನ, ಆಡಳಿತ ಮಂಡಳಿ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ!

By Suvarna NewsFirst Published Feb 15, 2022, 2:36 PM IST
Highlights

ದೇವಸ್ಥಾನದ ಧರ್ಮಸಭೆಗೆ ಬ್ಯಾರಿ ಯಾಕೆ ಬೇಕು?
ವಿಪಕ್ಷ ನಾಯಕ ಯುಟಿ ಖಾದರ್ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗದಾಳಿ
ಬಂಟ್ವಾಳ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಯುಟಿ ಖಾದರ್ ಗೆ ಆಹ್ವಾನ
 

ಮಂಗಳೂರು (ಫೆ 15): ರಾಜ್ಯದಲ್ಲಿ ಹಿಜಾಬ್ (Hijab) ವಿರುದ್ಧ ಹಿಂದೂ ಮುಸ್ಲಿಂ ನಡುವಿನ ಸಾಮರಸ್ಯ ಕದಡುತ್ತಿರುವ ಹಂತದಲ್ಲಿ ವಿಪಕ್ಷ ನಾಯಕ ಯುಟಿ ಖಾದರ್ ಗೆ (UT Khader ) ದೇವಸ್ಥಾನದ ಬ್ರಹ್ಮಕಲಶೋತ್ಸವ (Brahmakalashotsava) ಸಮಾರಂಭಕ್ಕೆ ಆಹ್ವಾನ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಯುಟಿ ಖಾದರ್ ಗೆ ಆಹ್ವಾನ ನೀಡಿದೆ. ಇದಕ್ಕೆ ಆರ್ ಎಸ್ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ( RSS leader Kalladka Prabhakar Bhat ) ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇವಸ್ಥಾನದಲ್ಲಿಯೇ ಈ ಕುರಿತಾಗಿ ಮಾತನಾಡಿದ ಅವರು, "ದೇವಸ್ಥಾನದ ಧರ್ಮಸಭೆಗೆ ಬ್ಯಾರಿಯನ್ನ ಕರೆಸಿದ್ರಲ್ಲ ಮಾರಾಯ್ರೆ. ಇದೊಂದು ಎಂಥ ನಾಚಿಕೆಯ ವಿಷ್ಯ, ನಮಗೆ ಹಿಂದೂಗಳಿಗೆ ಇದು ನಾಚಿಕೆ ಆಗ್ಬೇಕು. ಅವನು ಬಂದು ಎಂಥ ನಮಗೆ ಇಲ್ಲಿ ಬೋಧನೆ ಮಾಡೋದು? ಇಲ್ಲಿ ಬ್ಯಾರಿ ಅಥವಾ ಕ್ರಿಶ್ಚಿಯನ್ ಬಂದು ನಮಗೆ ಬೋಧನೆ ಮಾಡೋಕೆ ಆಗುತ್ತಾ? ಇದು ಧರ್ಮಸಭೆ ಆಗುತ್ತಾ? ಅಧರ್ಮ ಸಭೆ ಆಗ್ತದೆ, ವೇದಿಕೆ ಅಪವಿತ್ರ ಆಗುತ್ತೆ" ಎಂದು ಟೀಕೆ ಮಾಡಿದ್ದಾರೆ.

ರಾತ್ರಿ ಕದ್ದ ದನದ ಮಾಂಸ ತಿನ್ನೋರನ್ನ ಕರೆಸಿದ್ದೀರಿ, ಎಂಥಾ ಅವಸ್ಥೆ ಇದು. ಗೋಹತ್ಯೆ ಮಾಡಿ ಅದನ್ನ ತಿಂದವನು ಇಲ್ಲಿ ಬಂದ್ರೆ ಅಪವಿತ್ರ ಆಗಲ್ವಾ? ರಾಜಕೀಯಕ್ಕೆ ಇಲ್ಲಿ ಕರೀಬೇಡಿ, ಇದು ರಾಜಕೀಯ ವೇದಿಕೆ ಅಲ್ಲ. ಇದು ಧರ್ಮ ಸಭೆ, ಹಿಂದೂಗಳ ಕಾರ್ಯ, ಶಾಸಕನೇ ಆಗಿದ್ರೂ ಅವರನ್ನು ಇಲ್ಲಿ ಕರೆಯಬೇಡಿ. ರಮಾನಾಥ್ ರೈ ಕರೀರಿ ನನಗೆ ಸಂತೋಷ, ಅವನು ಹಿಂದು. ಮೊನ್ನೆ ಭಾಷಣದಲ್ಲಿ ಯಾವ ಧಾರ್ಮಿಕ ಕೇಂದ್ರಕ್ಕೆ ಹೋಗಬೇಕು ಅಂತ ಖಾಝಿಗಳು ಹೇಳಬೇಕಂತೆ ಎಂದು ಖಾದರ್ ಹೇಳಿದ್ದ. ನಮ್ಮ ದೇವಸ್ಥಾನಕ್ಕೆ ಬರಲಿಕ್ಕೆ ಅವರ ಖಾಜಿ ಹೇಳಬೇಕಾ? ಎಂದು ಪ್ರಭಾಕರ್ ಭಟ್ ಪ್ರಶ್ನೆ ಮಾಡಿದ್ದಾರೆ.

ಪುಣ್ಯ ಕಾರ್ಯದಲ್ಲಿ ವಿಷ ತುಂಬಬೇಡಿ: ಆತ ಸೀದಾ ಧರ್ಮಸಭೆಯ ಒಳಗೆ ಬಂದ, ಅವನಿಗೆ ನಾಚಿಕೆ ಇಲ್ವಾ ಮಾರಾಯ್ರೆ. ನಿನ್ನನ್ನ ಕರೆದಿದ್ದು ಯಾರು ಅಂತ ಕೇಳಿದ್ರೆ ಎಂಥ ಅವಸ್ಥೆ ಆಗಬಹುದು . ಅವರು ನಮ್ಮನ್ನ ಒಡೆದು ಆಳೋಕೆ ಬರೋದು. ಓಟಿಗೋಸ್ಕರ ಮತ್ತು ಸೀಟಿಗೋಸ್ಕರ ಹಿಂದೂ ಸಮಾಜದ ಮೇಲೆ ಸವಾರಿ ‌ಮಾಡಲು ಬಿಡ್ತಿರಾ? ದೇವಸ್ಥಾನ ಕಟ್ಟೋದೇ ಹಿಂದೂಗಳು ಇಲ್ಲಿ ಒಂದಾಗಬೇಕು ಅಂತ. ಈ ಪುಣ್ಯ ಮತ್ತು ಪವಿತ್ರ ಕಾರ್ಯದಲ್ಲಿ ವಿಷವನ್ನು ತುಂಬಬೇಡಿ ಎಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

Hijab Row: ಶಾಲೆ ಬಿಡ್ತೀವಿ ಹೊರತು ಹಿಜಾಬ್ ಬಿಡಲ್ಲ, ವಿದ್ಯಾರ್ಥಿನಿಯರು ಸಾಮೂಹಿಕ ಗೈರು
ಇದಕ್ಕೂ ಮುನ್ನ ಹಿಜಾಬ್ ವಿಚಾರದಲ್ಲೂ ರಾಜ್ಯ ಸರ್ಕಾರದ ನಡೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆರು ಮಕ್ಕಳ ಹೋರಾಟಕ್ಕೆ ನಮ್ಮ ರಾಜ್ಯ ಸರ್ಕಾರ ಹೆದರಿ ಬಿಟ್ಟಿತು. ಕೇವಲ 6 ಮಕ್ಕಳ ಪ್ರತಿಭಟನೆಗೆ ನೂರಾರು ಮಕ್ಕಳ ಕಲಿಕೆಗೆ ಯಾಕೆ ಅಡ್ಡಿ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಶಾಲೆ ಕಾಲೇಜಿಗೆ ರಜೆ ಕೊಡುವ ಅಗತ್ಯವಿರಲಿಲ್ಲ. ಪೊಲೀಸರು ಅದನ್ನ ನಿಭಾಯಿಸಬೇಕು, ಶಾಲೆಯ ಶಿಸ್ತು ಒಪ್ಪದವರು ಹೊರಗೆ ಹೋಗಲಿ. ಯೂನಿಫಾರ್ಮ್ ಹಾಕದೇ ಇದ್ರೆ ಬಿಡ್ತಾರಾ? ಪೊಲೀಸ್ ಕಂಪ್ಲೇಂಟ್ ಕೊಟ್ಟು ಹೊರಗೆ ಹಾಕಲಿ. ಆದರೆ ಈ ಸರ್ಕಾರ ಅದನ್ನ ಯಾಕೆ ಮಾಡಲಿಲ್ಲ? ಶಾಸಕ ರಘಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಯಶ್ ಪಾಲ್ ಸುವರ್ಣ, ಸುನೀಲ್ ಕುಮಾರ್ ಚೆನ್ನಾಗಿ ಮಾತನಾಡಿದ್ದಾರೆ .ಅವರೆಲ್ಲರೂ ಈ ವಿಚಾರದಲ್ಲಿ ಬಲವಾಗಿ ಇದ್ದರು, ಅದರಲ್ಲಿ ಒಂದೇ ರೀತಿ ಇದ್ದರು ಎಂದು ಹೇಳಿದ್ದರು. 

Hijab Row: ಶಾಲಾ-ಕಾಲೇಜಿಗೆ ಯಾಕೆ ರಜೆ ಕೊಡಬೇಕಾಗಿತ್ತು? ಪ್ರಭಾಕರ್ ಭಟ್ ಅಸಮಾಧಾನ
"ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪನ್ನ ಅವರು ಒಪ್ಪಲ್ಲ. ಸುಪ್ರೀಂ ಕೋರ್ಟ್ ಮಸೀದಿ ಆಜಾನ್ ತೆಗೀರಿ ಅಂದ್ರೂ ಅವರು‌ ನಿಲ್ಲಿಸಿಲ್ಲ, ಯಾವ ಸರ್ಕಾರ ನಿಲ್ಲಿಸಿದೆ ಹೇಳಿ ನೋಡೋಣ. ಸಂಘರ್ಷ ಆಗಲ್ಲ, ಹೋರಾಟ ನಡೆಯಬೇಕು, ವಿದ್ಯಾರ್ಥಿಗಳೇ ರಸ್ತೆಗಿಳಿದು ಹೋರಾಡಬೇಕು.  ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದ ದೇಶದಲ್ಲಿ ಹೀಗೆಲ್ಲಾ ಆಗುತ್ತಿದೆ. ಹಿಜಾಬ್ ಹಾಕಬಹುದು ಅಂದ್ರೆ ಕೇಸರಿ ಯಾಕೆ ಹಾಕಬಾರದು? ಶಾಲೆಯ ಯೂನಿಫಾರ್ಮ್ ನಲ್ಲಿ ಕೇಸರಿಯನ್ನೂ ಸೇರಿಸಿ, ಅದು ಇನ್ನೂ ಒಳ್ಳೆದಾಗುತ್ತೆ ಎಂದು ಹೇಳಿದ್ದಾರೆ.

click me!