ಪ್ರೀ ಫೈರ್ ಗೇಮ್ ಚಟ: ಅಮ್ಮ ಗೇಮ್ ಆಡೋಕೆ ಫೋನ್ ಕೊಟ್ಟಿಲ್ಲ ಅಂತ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ

Published : Apr 24, 2026, 01:31 PM ISTUpdated : Apr 24, 2026, 01:32 PM IST
mobile phone addiction

ಸಾರಾಂಶ

ಹುಬ್ಬಳ್ಳಿಯಲ್ಲಿ, ಪ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ 14 ವರ್ಷದ ಬಾಲಕನೊಬ್ಬ, ತಾಯಿ ಗೇಮ್ ಆಡೋಕೆ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಚಟದ ಅಪಾಯವನ್ನು ಸೂಚಿಸುತ್ತಿದೆ.

ಹುಬ್ಬಳ್ಳಿ : ಮೊಬೈಲ್ ಕೊಟ್ಟಿಲ್ಲ ಅಂತ 14 ವರ್ಷದ ಸಮರ್ಥ ಸಾವಿಗೆ ಶರಣು

ಹುಬ್ಬಳ್ಳಿ: ಮೊಬೈಲ್ ಕೊಡದೇ ಇದ್ದದಕ್ಕೆ ಬಾಲಕ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಹುಬ್ಬಳ್ಳಿ ನಗರದ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ ಸಾವಿಗೆ ಶರಣಾದ ಬಾಲಕ. ಮೃತ ಬಾಲಕ ಪ್ರೀ ಫೈರ್ ಗೇಮ್‌ನ ಚಟಕ್ಕೆ ಬಿದ್ದಿದ್ದ. ಬಾಲಕನ ಮೊಬೈಲ್ ಚಟ ನೋಡಿದ ಪೋಷಕರು ಬಾಲಕನಿಗೆ ಬುದ್ಧಿ ಹೇಳಿದ್ದರು. ನಿನ್ನೆ ರಾತ್ರಿ ಬಾಲಕನ ತಾಯಿ ಮಗನಿಗೆ ಮೊಬೈಲ್ ಗೇಮ್ ಆಡದಂತೆ ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ನೊಂದು ಬಾಲಕ ಸಾವಿಗೆ ಶರಣಾಗಿದ್ದಾನೆ. ರಾತ್ರಿ ಕೋಣೆಗೆ ಹೋದ ಬಾಲಕ ಅಮ್ಮನ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕಿಮ್ಸ್‌ಗೆ ಹುಬ್ಬಳಿ ಪೊಲೀಸ್ ಕಮೀಷನರ್‌ ಎನ್‌ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೊಬೈಲ್ ಫೋನ್‌ಗೆ ಆಡಿಕ್ಟ್ ಆಗ್ತಿರುವ ಪುಟ್ಟ ಮಕ್ಕಳು

ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳು ಮೊಬೈಲ್‌ ಚಟಕ್ಕೆ ತೀವ್ರವಾಗಿ ಅಡಿಕ್ಟ್ ಆಗಿದ್ದು, ಮೊಬೈಲ್ ಇಲ್ಲದೇ ಜೀವವೇ ಇಲ್ಲ ಎಂಬಂತಾಗಿದ್ದಾರೆ. ರಾಜ್ಯ ಸರ್ಕಾರ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಬಾರದೆಂದು 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ನಿಷೇಧ ಮಾಡಿದೆ. ಮಕ್ಕಳಿಗೆ ಮೊಬೈಲ್ ಮೂಲಕ ಯಾವುದೇ ಪಠ್ಯಗಳನ್ನು ಕಳುಹಿಸದಂತೆ ಶಾಲೆಗಳಿಗೂ ಆದೇಶಿಸಲಾಗಿದೆ. ಆದರೂ ಮಕ್ಕಳು ಪೋಷಕರ ಮೊಬೈಲ್ ಪಡೆದು ಮೊಬೈಲ್ ಫೋನ್‌ಗಳಿಗೆ ಅಡಿಕ್ಟ್ ಆಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಅಥವಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಪೋಷಕರೇ ಈ ಬಗ್ಗೆ ಜಾಗರೂಕರಾಗಿ ಮಕ್ಕಳನ್ನು ಮೊಬೈಲ್ ಬದಲು ಬೇರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕಿದೆ. ಇಲ್ಲದೇ ಹೋದರೆ ಅಪಾಯ ಗ್ಯಾರಂಟಿ.

ಇದನ್ನೂ ಓದಿ: ಬಳ್ಳಾರಿ: ಏರುತ್ತಿರುವ ಬಿಸಿಲ ತಾಪದ ನಡುವೆ: ರಸ್ತೆ ಅಗಲೀಕರಣಕ್ಕಾಗಿ 30ಕ್ಕೂ ಹೆಚ್ಚು ಮರಗಳ ತೆರವು 

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಹೀಟ್‌ವೇವ್: 'ಸೆಲ್ಫ್ ಲಾಕ್‌ಡೌನ್'ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ; ಆಸ್ಪತ್ರೆಗಳಲ್ಲಿ ಹೈ ಅಲರ್ಟ್!
ಬಳ್ಳಾರಿ: ಏರುತ್ತಿರುವ ಬಿಸಿಲ ತಾಪದ ನಡುವೆ: ರಸ್ತೆ ಅಗಲೀಕರಣಕ್ಕಾಗಿ 30ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಏಟು