
ಬೆಂಗಳೂರು(ಮೇ.08): ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದಲೇ ಪರಿಸರ ಹಾನಿಯಾಗುತ್ತಿದೆ ಎಂಬುದು ಸುಳ್ಳಲ್ಲ. ಅದರಲ್ಲೂ ಬಿಎಂಟಿಸಿ ಬಸ್ ಗಳು ಬಿಡುವ ಹೊಗೆ ಕಂಡು ಸಿಲಿಕಾನ್ ಸಿಟಿ ಜನ ಹಿಡಿ ಶಾಪ ಹಾಕುವುದು ತಪ್ಪಿಲ್ಲ.
ಆದರೆ ಅದೇ ಬಿಎಂಟಿಸಿ ಬಸ್'ನಲ್ಲಿ ಸಣ್ಣ ಉದ್ಯಾನವನ ಮಾಡಿ ಪರಿಸರ ಜಾಗೃತಿ ಮೂಡಿಸಿದರೆ ಹೇಗಿರುತ್ತೆ?. ಹೌದು, ಬಿಎಂಟಿಸಿ ಚಾಲಕರೊಬ್ಬರು ಪರಿಸರ ರಕ್ಷಣೆ ಜಾಗೃತಿಗಾಗಿ ತಮ್ಮ ವಾಹನದಲ್ಲೇ ಪುಟ್ಟದೊಂದು ಉದ್ಯಾನವನ ಸೃಷ್ಟಿಸಿದ್ದಾರೆ.
ಕಾವಲಭೈರಸಂಧ್ರ ಮತ್ತು ಯಶವಂತಪುರ ನಡುವೆ ಸಂಚರಿಸುವ ಬಿಎಂಟಿಸಿ ಬಸ್'ನಲ್ಲಿ, ಚಾಲಕ ನಾರಾಯಣಪ್ಪ ಎಂಬುವವರು ಹಲವು ಸಣ್ಣ ಗಿಡಗಳನ್ನು ನೆಟ್ಟಿದ್ದಾರೆ.
ನಿತ್ಯವೂ ಈ ಗಿಡಗಳಿಗೆ ನೀರು ಹಾಕಿ ಪೋಷಿಸುವ ನಾರಾಯಣಪ್ಪ, ಬಸ್ ಒಳಗಡೆ ಖಾಲಿ ಇರುವ ಜಾಗದಲ್ಲೆಲ್ಲಾ ಗಿಡಗಳನ್ನು ನೆಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಾರಾಯಣಪ್ಪ ಅವರು ತಮ್ಮ ಬಸ್'ನಲ್ಲಿ ಗಿಡಗಳನ್ನು ಪೋಷಿಸುತ್ತಿದ್ದಾರೆ.
ಪರಿಸರ ರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧ ಗಾಳಿಗಾಗಿ ಮರಗಳನ್ನು ಬೆಳೆಸುವುದು ಅವಶ್ಯಕ ಎಂಬ ಸಂದೇಶ ಸಾರಲು ತಾವು ಬಸ್'ನಲ್ಲಿ ಗಿಡಗಳನ್ನು ಪೋಷಿಸುತ್ತಿರುವುದಾಗಿ ನಾರಾಯಣಪ್ಪ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ