ರಾಜ್ಯ ಸರ್ಕಾರದಿಂದ ಶೀಘ್ರ ಕೋವಿಡ್ ಪ್ಯಾಕೇಜ್ : ಕಟೀಲ್ ಸುಳಿವು

By Suvarna NewsFirst Published May 14, 2021, 3:55 PM IST
Highlights
  • ಮಾನದಂಡಗಳನ್ನ ಇಟ್ಟುಕೊಂಡು ಆಕ್ಸಿಜನ್ ಪೂರೈಕೆ 
  •  ಅನಿವಾರ್ಯತೆ ಹೆಚ್ಚಿದೆಯೋ ಅಲ್ಲಿಗೆ ಆಕ್ಸಿಜನ್ ಪೂರೈಕೆ
  • ಅನುಕೂಲಕಲ್ಪಿಸುವ ನಿಟ್ಟಿನಲ್ಲಿ ಕೆಲ ಪ್ಯಾಕೇಜ್  ಘೋಷಣೆ ಸುಳಿವು ನೀಡಿದ ಕಟೀಲ್

ಮಂಗಳೂರು (ಮೇ.14):   ಕೇಂದ್ರ ಸರ್ಕಾರ ಮಾನದಂಡಗಳನ್ನ ಇಟ್ಟುಕೊಂಡು ಆಕ್ಸಿಜನ್ ಪೂರೈಕೆ ಮಾಡುತ್ತದೆ. ರಾಜ್ಯ ಸರ್ಕಾರಕ್ಕೆ ಯಾವ ಜಿಲ್ಲೆಯಲ್ಲಿ ಅನಿವಾರ್ಯತೆ ಹೆಚ್ಚಿದೆಯೋ ಅಲ್ಲಿಗೆ ಪೂರೈಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಮಂಗಳೂರಿನಲ್ಲಿಂದು ಮಾತನಾಡಿದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕೆ ರಾಜ್ಯಕ್ಕೆ ನೆರವು ಸಿಗುತ್ತಿಲ್ಲ ಎನ್ನುವ ಆರೋಪದ ವಿಚಾರವಾಗಿ  ಪ್ರತಿಕ್ರಿಯಿಸಿದರು.  

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ ..

ಕೇಂದ್ರ ಸರ್ಕಾರ ಮಾನದಂಡಗಳನ್ನ ಇಟ್ಟುಕೊಂಡು ಎಲ್ಲಿ ಅನಿವಾರ್ಯತೆ ಹೆಚ್ಚಿದೆಯೋ ಅಲ್ಲಿಗೆ ಪೂರೈಸಬೇಕಾಗುತ್ತದೆ. ಅದೇ ರೀತಿ ಕೇಂದ್ರ ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಕೇಸುಗಳು ಜಾಸ್ತಿಯಿದ್ದ ಕಾರಣ ಅಲ್ಲಿಗೆ ಮೊದಲು ಕೊಟ್ಟಿದೆ. ಅದರ ಆಧಾರದಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದಾರೆ, ಕೊಡುತ್ತಾರೆ.  ಸದ್ಯ ನಮ್ಮ ರಾಜ್ಯದಲ್ಲಿ ಪ್ರಹ್ಲಾದ್ ಜೋಶಿಯವರು ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಕಟೀಲ್ ಹೇಳಿದರು. 

ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಕ್ಕೆ ಕಟೀಲ್‌ ಮೆಚ್ಚುಗೆ

ಪ್ಯಾಕೇಜ್ ಘೋಷಣೆ :  ಸರ್ಕಾರ ಎಲ್ಲವನ್ನೂ ಗಮನಿಸುತ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆ ಜನರಿಗೆ ಅನುಕೂಲಕಲ್ಪಿಸುವ ನಿಟ್ಟಿನಲ್ಲಿ ಕೆಲ ಪ್ಯಾಕೇಜ್  ಘೋಷಣೆ ಮಾಡಬಹುದು ಎಂದು ಕಟೀಲ್ ಹೇಳಿದರು.

 ಟೀಕೆ ಮಾಡುವವರು ಯೊಚಿಸಬೇಕಿತ್ತು : ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ. ಇವತ್ತು ಟೀಕೆ ಮಾಡುವವರು ಮೊದಲು ಯೋಚನೆ ಮಾಡಬೇಕು ದೇಶದಲ್ಲಿ ಕೋವಿಡ್ ಲಸಿಕೆ ಕೊಡಲು ಎರಡು ಘಟಕಗಳು ಕೆಲಸ ಮಾಡುತ್ತಿವೆ. ಈಗಾಗಲೇ ಹತ್ತೊಂಬತ್ತು ಕೋಟಿ ಲಸಿಕೆ ಕೊಡುವ ಕೆಲಸ ಆಗಿದೆ.  ಆದರೆ ಆರಂಭದಲ್ಲಿ ಬಹಳಷ್ಟು ಜನರು ಇದು ಬಿಜೆಪಿಯ ಲಸಿಕೆ ಅಂತ ಟೀಕೆ ಮಾಡಿದ್ದರು. ಆದರೆ ಅವರೇ ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದರು. 

ಆಗ ಲಸಿಕೆ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದರು. ಕೋವಿಡ್ ಲಸಿಕೆ ಬಗ್ಗೆ ಅನುಮಾನ ಪಡುವ ಕೆಲಸ ಮಾಡಿದ್ದರು. ಆಗ ನಂಬಿಕೆ ಇರಲಿಲ್ಲ, ಆದರೆ ಈಗ ಲಸಿಕೆ ಇಲ್ಲ ಎನ್ನುತ್ತಿದ್ದಾರೆ. ಇವತ್ತು ಕೋವಿಡ್ನಿಂದ ಜನರು ಮೃತರಾಗಲು ಇದೇ ಕಾರಣ. 

ಜನರ ದಾರಿ ತಪ್ಪಿಸಿದ ಕಾರಣಕ್ಕೆ ಜನರು ಲಸಿಕೆ ತೆಗೆದುಕೊಂಡಿಲ್ಲ. ರಾತ್ರಿ ಹಗಲು ಎಷ್ಟೋ ಜನರು ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಮಾಡುವ ಕೆಲಸಗಳನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ. ರಾಜಕಾರಣ ಮಾಡುವ ಬದಲು ಜನರಿಗೆ ಆತ್ಮವಿಶ್ವಾಸ ತುಂಬಿ. ಸರ್ಕಾರದದಲ್ಲಿ ವ್ಯತ್ಯಾಸಗಳಾದಾಗ ಟೀಕೆಯ ಬದಲು ಸಲಹೆ ನೀಡಿ. ರಾಜಕಾರಣ ಬಿಟ್ಟು ಕರ್ತವ್ಯ ಮಾಡುವ ಕಾಲಘಟ್ಟ ಮತ್ತು ಅನಿವಾರ್ಯತೆಯಲ್ಲಿ ನಾವಿದ್ದೇವೆ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!