
ಕೊಪ್ಪಳ (ಜ.25): ವಿದೇಶಿ ಮಹಿಳೆ ಮೇಲಿನ ಅತ್ಯಾ೧ಚಾರವನ್ನು ಸಣ್ಣ ಘಟನೆ ಎಂದಿರುವ ಸಂಸದ ರಾಜಶೇಖರ್ ಹಿಟ್ನಾಳ್ ತಕ್ಷಣವೇ ಕ್ಷಮೆ ಕೇಳಬೇಕೆಂದು ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಆಗ್ರಹಿಸಿದ್ದಾರೆ. ಸಂಸದರ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಲ್ಲಿ ಇಂತಹ ಕೀಳುಮಟ್ಟದ ಮಾತುಗಳು ಬರಬಾರದಿತ್ತು ಎಂದು ಅವರು ಕೊಪ್ಪಳದಲ್ಲಿ ವಾಗ್ದಾಳಿ ನಡೆಸಿದರು.
ಪ್ರವಾಸೋದ್ಯಮವನ್ನು ಸಮರ್ಥಿಸುವ ಭರದಲ್ಲಿ ಅತ್ಯಾ೧ಚಾರದಂತಹ ಘೋರ ಕೃತ್ಯವನ್ನು 'ಸಣ್ಣದು' ಎನ್ನುವುದು ತಪ್ಪು. ಇದು ಇಡೀ ಮಹಿಳಾ ಕುಲಕ್ಕೆ ಮಾಡಿದ ಅವಮಾನ.ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಸಂಸದರ ಈ ಹೇಳಿಕೆಯೇ ಸಾಕ್ಷಿ. ಅವರ ಮನಸ್ಸಿನಲ್ಲಿದ್ದ ಮಾತುಗಳೇ ಇಂದು ಬಾಯಲ್ಲಿ ಹೊರಬಂದಿವೆ ಎಂದು ಹೇಮಲತಾ ನಾಯಕ್ ಆಕ್ರೋಶ ಹೊರಹಾಕಿದರು.
'ನನ್ನನ್ನು ಬಾಯಿ ತುಂಬ ಅಕ್ಕ ಎಂದು ಕರೆಯುವ ಸಂಸದರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಣ್ಣದು ಎನ್ನುತ್ತಿರುವುದು ನೋವು ತಂದಿದೆ' ಎಂದ ಅವರು, ಸಂಸದರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳದಿದ್ದರೆ ಅವರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಗಡುವು ನೀಡಿದ್ದಾರೆ. ಕ್ಷಮೆ ಕೇಳದಿದ್ದರೆ ಈ ಕಪ್ಪು ಚುಕ್ಕೆ ನಿಮ್ಮ ಹೆಸರಿನಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ