ರಾಜ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಸರ್ಕಾರ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಪೊಲೀಸರು ತನ್ನ ವಿರುದ್ಧ ಪಕ್ಷಪಾತ ಮಾಡಿದ್ದಾರೆ, ತಾನು ಕೊಟ್ಟ ದೂರು ದಾಖಲಿಸಿಲ್ಲ, ಆದರೆ ತನ್ನ ವಿರುದ್ಧದ ದೂರು ತಕ್ಷಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಚಿಕ್ಕಮಗಳೂರು (ಡಿ.22): ರಾಜ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇದು ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರೋ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದರು.
ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣಿಸುವುದಿಲ್ಲ. ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ, ಹತ್ಯೆ ಮಾಡೋ ಕೆಲಸ ಮಾಡ್ತಾರೆ. ಕೊಲೆ ನಡೆಯುವ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ಅದೇ ಸಿದ್ಧಾಂತ ಫಾಲೋ ಮಾಡ್ತಿದ್ದಾರೆ ಅನ್ನೋದು ಅವರ ಮಾತಿನಲ್ಲೇ ಅರ್ಥವಾಗುತ್ತಿದೆ ಎಂದರು.
undefined
ಸರ್ಕಾರ ಒಂದೇ ಇರಲ್ಲ, ಬದಲಾಗುತ್ತೆ..; ಬೆಳಗಾವಿ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಜೋಶಿ ವಾರ್ನ್!
ನಾನು ಕೊಟ್ಟ ದೂರು ಯಾಕೆ ರಿಜಿಸ್ಟರ್ ಮಾಡಿಲ್ಲ?
ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯ ನೀತಿ ಸಂವಿಧಾನದ ಬಗ್ಗೆ ದೊಡ್ಡ ಮಾತುಗಳನ್ನಾಡ್ತಾರೆ. ಹಾಗಾದ್ರೆ ಕಾನೂನಿನಲ್ಲಿ ನ್ಯಾಯ ಪಡೆಯುವ ಅಧಿಕಾರ, ಹಕ್ಕು ನನಗಿಲ್ಲವ? ನಾನು ಕೊಟ್ಟ ದೂರು ಯಾಕೆ ರಿಜಿಸ್ಟರ್ ಮಾಡಿಲ್ಲ. ಇವರ ದೃಷ್ಟಿಯಲ್ಲಿ ಗೂಂಡಾಗಳನ್ನು ಕಳುಹಿಸಿ ನ್ಯಾಯ ಪಡೆಯಬೇಕಾ? ನಾನು ಕೊಟ್ಟ ದೂರು ದಾಖಲಿಸಿಕೊಳ್ಳದ ಪೊಲೀಸರು. ಅವರು ನನ್ನ ವಿರುದ್ದ ಕೊಟ್ಟ ದೂರು ಮಾತ್ರ ತರಾತುರಿಯಲ್ಲಿ ಎಫ್‌ಐಆರ್ ಮಾಡಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಇರೋದು ವಿಪಕ್ಷಗಳನ್ನು ಜೈಲಿಗೆ ಹಾಕಲು, ಬೆದರಿಸಲು, ಆಡಳಿತ ಪಕ್ಷದವರು ಹೇಳಿದಂತೆ ಕೇಳಲು ಮಾತ್ರವಾ? ನನ್ನ ಬಂಧಿಸಿದ ಬಳಿಕ ನಿಗೂಢ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ಅಪರಿಚಿತರಲ್ಲ, ಡಕಾಯಿತರಲ್ಲ ಕರ್ನಾಟಕ ರಾಜ್ಯ ಪೊಲೀಸರು. ನಿರ್ಜನ ಪ್ರದೇಶದಲ್ಲಿ ಪೊಲೀಸ್ ಜೀಪ್ ನಿಲ್ಲಿಸಿ ಯಾರೊಂದಿಗೆ ರಹಸ್ಯ ಕರೆ ಮಾಡಿ ಸಂಚು ರೂಪಿಸುತ್ತಿದ್ದರು. ಅವರಿಗೆ ಆಗಾಗ ಎಲ್ಲಿಂದಲೋ ಡೈರೆಕ್ಷನ್ ಬರ್ತಾ ಇದ್ದಿದ್ದು ನಿಗೂಢ ಸ್ಥಳದಿಂದ ಅದಕ್ಕೆ ಹೇಳಿದ್ದು ನನ್ನ ಬಂಧನ ಬಳಿಕ ಪೊಲೀಸ್ ಅಧಿಕಾರಿಗಳು ಯಾರರೊಂದಿಗೆ ಕರೆ ಮಾಡಿದ್ದಾರೆ. ಅದೆಲ್ಲದರ ರೆಕಾರ್ಡ್ ಚೆಕ್ ಮಾಡಿ ಅಂತಾ. ನಾನು ನ್ಯಾಯಾಂಗ ತನಿಖೆ ಕೇಳಿರೋದು ಸತ್ಯಾಸತ್ಯತೆ ಹೊರಬರಲಿ ಎಂದರು.
ಮಾಧ್ಯಮದವರು ಇಲ್ಲದಿದ್ರೆ ಸಿ.ಟಿ. ರವಿ ಅವರನ್ನ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡ್ತಿದ್ದರು: ಜೋಶಿ
ಮುಖ್ಯಮಂತ್ರಿಗಳು ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗೊಲ್ಲ ಅಂತಾ ಗೊತ್ತಾಗಿ ಕಬ್ಬಿನ ಗದ್ದೆಗೆ ಕಳಿಸಿದ್ದರು. ಅಲ್ಲಿಗೆ 60 ಜನ ಪೊಲೀಸರೇನೂ ಬಂದಿರಲಿಲ್ಲ ಇದ್ದಿದ್ದು 6 ಜನ ಪೊಲೀಸರು. ಮಾಧ್ಯಮಗಳು, ಸ್ನೇಹಿತರು ಇಲ್ಲದೇ ಇದ್ದಿದ್ದರೆ ಕತೆಯೇ ಬೇರೆಯೇ ಆಗಿರುತ್ತಿತ್ತು. ಮುಖ್ಯಮಂತ್ರಿಗಳು ಈ ವಿಚಾರಕ್ಕೆ ಈಗ ಮಾತನಾಡುತ್ತಿದ್ದಾರೆ. ಈ ಸಂಚಿನಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲ ಎಂದು ಅಂತಾ ಭಾವನೆ ಇತ್ತು. ಆದರೆ ಈ ಎಲ್ಲರೂ ಕೂಡಿ ಷಡ್ಯಂತ್ರ ಮಾಡಿದ್ದಾರೆ ಅಂತಾ ಅನುಮಾನ ಮೂಡಿದೆ. ಅದಕ್ಕಾಗಿ ನ್ಯಾಯಾಂಗ ತನಿಖೆ ಆಗಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನವರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಒಂದು ಕಾನೂನಾ? ನನ್ನ ಮೇಲೆ ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿಲ್ಲವೆಂದರೆ, ರಾಜ್ಯ ಪೊಲೀಸರು ಯಾವ ಮಟ್ಟಕ್ಕೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಪೊಲೀಸರು ನಡೆದುಕೊಂಡಿರುವ ರೀತಿಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.