ಮಾಸ್ಕ್‌ ಹಾಕಿದ್ದರೂ ದಂಡ: ಕುಮಾರಸ್ವಾಮಿ ದೂರು

Published : Dec 25, 2020, 10:04 AM ISTUpdated : Dec 25, 2020, 11:04 AM IST
ಮಾಸ್ಕ್‌ ಹಾಕಿದ್ದರೂ ದಂಡ: ಕುಮಾರಸ್ವಾಮಿ ದೂರು

ಸಾರಾಂಶ

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ದೂರು| ಮಾಸ್ಕ್‌ ಹಾಕಿದ್ದರೂ ದಂಡ ವಿಧಿಸಿದ ಪೊಲೀಸರು| ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತನಾಡದೆ ದಂಡ ಪಾವತಿಸಿದ್ದೇನೆ: ಕುಮಾರಸ್ವಾಮಿ| 

ಬೆಂಗಳೂರು(ಡಿ.25): ತಾವು ಮಾಸ್ಕ್‌ ಹಾಕಿದ್ದರೂ ದಂಡ ವಿಧಿಸಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗುರುವಾರ ದೂರು ನೀಡಿದ್ದಾರೆ. 

"

ಬಾಡಿಗೆ ಕಾರಿನಲ್ಲಿ ಶೇಷಾದ್ರಿಪುರ ಕಡೆಯಿಂದ ಶಾಸಕರ ಭವನಕ್ಕೆ ಗುರುವಾರ ಮಧ್ಯಾಹ್ನ 12.30ರಲ್ಲಿ ತೆರಳುತ್ತಿದ್ದೆ. ಶೇಷಾದ್ರಿಪುರ ಠಾಣೆ ಮುಂಭಾಗ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕಾರು ನಿಲ್ಲಿಸಲಾಗಿತ್ತು. ಆಗ ಕಾರಿನ ಟಿಂಟ್‌ ಗ್ಲಾಸ್‌ ಇಳಿಸುವಂತೆ ಬಲವಂತಪಡಿಸಿದ ಪೊಲೀಸರು, ಕಾರಿನೊಳಗೆ ಮಾಸ್ಕ್‌ ಧರಿಸಿ ಕುಳಿತಿದ್ದ ನನಗೆ 250 ದಂಡ ವಿಧಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೈಟೆಕ್‌: ದಿನದ 24 ಗಂಟೆ ಸೇವೆ

ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತನಾಡದೆ ದಂಡ ಪಾವತಿಸಿದ್ದೇನೆ. ವಿನಾ ಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕುಮಾರಸ್ವಾಮಿ ಕೋರಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
80ನೇ ಸ್ವಾತಂತ್ರ್ಯ ದಿನ: 72,000 ಸರ್ಕಾರಿ ನೌಕರಿ, ಉಚಿತ ಕೋಡಿಂಗ್, AI ವಿವಿ ಘೋಷಿಸಿದ ಸಿಎಂ ಡಿ.ಕೆ.ಶಿವಕುಮಾರ್!