Dr Rajkumar Family: 'ಜಾತಿ, ಧರ್ಮ ಇಟ್ಕೊಂಡು ಡಾ. ರಾಜ್​ ಕುಟುಂಬ ಮಾತಾಡಲ್ಲ'

By Suvarna NewsFirst Published Dec 13, 2021, 10:27 PM IST
Highlights

* ಬೆಳಗಾವಿ ಅಧಿವೇಶನದಲ್ಲಿ  ಪುನೀತ್ ರಾಜ್ ಕುಮಾರ್ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ
* ಇಂದಿನಿಂದ(ಡಿ.13) ಆರಂಭವಾದ ಚಳಿಗಾಲದ ಅಧಿವೇಶ
* ಅಧಿವೇಶನ ಆರಂಭದಲ್ಲಿ ಅಪ್ಪು ನೆನೆದ ರಾಜ್ಯ ರಾಜಕೀಯ ನಾಯಕರು

ಬೆಳಗಾವಿ, (ಡಿ.13): ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Belagavi Winer Session) ಆರಂಭಗೊಂಡಿದ್ದು ಆರಂಭದಲ್ಲಿ ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. 

ಬಿಪಿನ್ ರಾವತ್ ಹಾಗೂ ಇತರ ಮೃತ ಸೈನಿಕರು ಹಾಗೂ ಸಿನಿಮಾ ನಟ ಪುನೀತ್ ರಾಜ್‌ಕುಮಾರ್ (Puneeth Rajkumar)​  ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಕರ್ನಾಟಕದ ಮಾಜಿ ರಾಜ್ಯಪಾಲ ಕೆ.ರೋಸಯ್ಯ, ಮಾಜಿ ಸಚಿವ ಎಸ್ ಆರ್ ಮೋರೆ, ವಿರೂಪಾಕ್ಷಪ್ಪ ಅಗಡಿ, ರಾಮಭಟ್, ಡಾ. ಎಂ.ಪಿ ಕರ್ಕಿ, ಎಸ್ ಶಿವರಾಂ, ಕೆ‌‌ಎಸ್ ನಾರಾಯಣಚಾರ್ಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

Belagavi Assembly Session: ಪುನೀತ್ ರಾಜ್‌ಕುಮಾರ್ ನೆನಪನ್ನು ಮೆಲುಕು ಹಾಕಿದ ಸಿದ್ದರಾಮಯ್ಯ

ಇನ್ನು ಇದೇ ವೇಳೆ ಸಂತಾಪ ಸೂಚನೆ ನಿರ್ಣಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರನ್ನ ನೆನಪಿಸಿಕೊಂಡರು.  

'ಜಾತಿ ಧರ್ಮ ಇಟ್ಕೊಂಡು ಡಾ. ರಾಜ್​ ಕುಟುಂಬ ಮಾತಾಡಲ್ಲ'
ಪುನೀತ್​ ರಾಜ್​ಕುಮಾರ್​ ಜತೆಗಿನ ಒಡನಾಟವನ್ನು ಕುಮಾರ್​ ಬಂಗಾರಪ್ಪ ಅವರು ನೆನಪಿಸಿಕೊಂಡಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಗುಣವನ್ನು ಅವರು ಸದನದಲ್ಲಿ ಕೊಂಡಾಡಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ಪ್ರತಿ ದಿನ ಅವರನ್ನು ನೆನಪು ಮಾಡಿಕೊಳ್ಳುವಂತಹ ಕೆಲಸ ಆಗುತ್ತಿದೆ. ಇಂದು (ಡಿ.13) ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ (Karnataka Assembly Winter Session) ಆರಂಭ ಆಗಿದೆ. ಸದನದಲ್ಲಿ ಅಪ್ಪು ಬಗ್ಗೆ ಅನೇಕರು ಮಾತನಾಡಿದ್ದಾರೆ. ರಾಜ್​ ಕುಟುಂಬದ ಸಂಬಂಧಿ ಆದಂತಹ ಕುಮಾರ್​ ಬಂಗಾರಪ್ಪ (Kumar Bangarappa) ಅವರು ಕೂಡ ಪುನೀತ್​ ಅವರನ್ನು ಸ್ಮರಿಸಿದರು.

 'ಪುನೀತ್​ ರಾಜ್​ಕುಮಾರ್​ ಅವರ ಜೊತೆ ನಮಗೆ ಒಡನಾಟ ಜಾಸ್ತಿ. ಅವರು ನಮ್ಮ ಸಂಬಂಧಿ. ಆದರೆ ಡಾ. ರಾಜ್​ಕುಮಾರ್​ ಕುಟುಂಬದವರು ಯಾವತ್ತೂ ಸಂಬಂಧ, ಜಾತಿ, ಧರ್ಮ ಇಟ್ಟುಕೊಂಡು ಮಾತನಾಡುವವರಲ್ಲ. ಅಪ್ಪು ಆ ಮಟ್ಟಕ್ಕೆ ಇದ್ದರು ಎಂಬುದಕ್ಕೆ ಇಂದು ಅನೇಕ ಉದಾಹರಣೆಗಳಿವೆ. ರಜನಿಕಾಂತ್​ ಮತ್ತು ಪುನೀತ್​ ಸಾಧನೆ ಸಮನಾಗಿದೆ ಎಂಬ ಬಗ್ಗೆ ರಜನಿಕಾಂತ್​ ಅವರೇ ಒಮ್ಮೆ ಹೇಳಿದ್ದರು. ಪ್ರಧಾನಿಗಳಿಂದಲೂ ಪುನೀತ್​ಗೆ ಪ್ರಶಂಸೆ ಸಿಕ್ಕಿತ್ತು' ಎಂದು ಕುಮಾರ್​ ಬಂಗಾರಪ್ಪ ಹೇಳಿದ್ದಾರೆ.

ಅಪ್ಪು ನೆನೆದು ಭಾವುಕರಾದ ಸಿದ್ದರಾಮಯ್ಯ
ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್‍ ಅವರನ್ನು ನೆನಪಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಮೈಸೂರಿನಲ್ಲಿ ಥಿಯೇಟರ್ ಗೆ ಹೋದವನಲ್ಲ. ಆದ್ರೆ ಪುನೀತ್ ರಾಜ್ ಕುಮಾರ್ ಹೇಳಿದ್ರು ಅಂತ ಥಿಯೇಟರ್ ಗೆ ಹೋಗಿ ರಾಜಕುಮಾರ ಸಿನಿಮಾವನ್ನು ನೋಡಿದೆ.

ಅಪ್ಪು ನನ್ನನ್ನು ಯಾವಾಗಲು ಮಾಮ ಎಂದು ಕರೆಯುತ್ತಿದ್ದು, ಹೀಗೆ ಒಮ್ಮೆ ಸಿಕ್ಕಾಗ ಮಾಮ ನೀನು ರಾಜಕುಮಾರ ಸಿನಿಮಾವನ್ನು ನೋಡಬೇಕು ಎಂದಿದ್ದರು. ಈ ಕಾರಣದಿಂದ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೆ ಎಂದು ಸಿದ್ದರಾಮಯ್ಯ ಪುನೀತ್ ನೆನಪನ್ನು ಮೆಲುಕು ಹಾಕಿಕೊಡಿದ್ದಾರೆ.

ಪುನೀತ್ ರಾಜ್ ಕುಮಾರ್ ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದ ವ್ಯಕ್ತಿ. ಅದು ಅವರಿಗೆ ಚಿಕ್ಕವಯಸ್ಸಿನಲ್ಲೇ ರಕ್ತಗತವಾಗಿ ಬಂದಿತ್ತು. ಇದೆಲ್ಲದಿಕ್ಕಿಂತ ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರದ ಅನೇಕ ಇಲಾಖೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ.

ತಂದೆಯ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡ ವ್ಯಕ್ತಿಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಸಮಾಜ ಕೂಡ ಅಂತಹ ಅಪರೂಪದ ವ್ಯಕ್ತಿಯನ್ನ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಕಲಾಪದ ವೇಳೆ ಪುನೀತ್ ಅವರನ್ನು ನೆನೆದು ಭಾವುಕರಾದರು.
 

click me!