Breaking: ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ವಶಕ್ಕೆ

By Santosh Naik  |  First Published May 10, 2024, 11:07 PM IST

ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಟೇಪ್ ಹೊರತಂದಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶುಕ್ರವಾರ ಕರ್ನಾಟಕ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
 



ಬೆಂಗಳೂರು (ಮೇ.10): ಪ್ರಜ್ವಲ್‌ ರೇವಣ್ಣ ಸೆಕ್ಸ್‌ಗೇಟ್‌ ಹಗರಣದ ಪ್ರಮುಖ ವ್ಯಕ್ತಿ ಎನಿಸಿಕೊಂಡಿದ್ದ ಬಿಜೆಪಿ ನಾಯಕ ಹಾಗೂ ವಕೀಲ ದೇವರಾಜೇಗೌಡ ಅವರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಲೈಂಗಿಕ ಕಿರುಕುಳ ಪ್ರಕರಣದಕ್ಕೆ ಸಂಬಂಧಪಟ್ಟಂತೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಚಿತ್ರದುರ್ಗದ ಹಿರಿಯೂರು ಪೊಲೀಸರು ದೇವೇರಾಜೇಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಏಪ್ರಿಲ್‌ 1 ರಂದು ಇವರ ವಿರುದ್ಧ ಹೊಳೆನರಸೀಪುರದಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಅದೇ ಮಹಿಳೆಯ ವಿರುದ್ದ ಹೆಬ್ಬಾಳದಲ್ಲಿ ದೇವರಾಜೇಗೌಡ ದೂರು ದಾಖಲು ಮಾಡಿದ್ದರು. ದೇವರಾಜೇಗೌಡ ವಶಕ್ಕೆ ಪಡೆದ ಬೆನ್ನಲ್ಲಿಯೇ ಹೊಳೆನರಸೀಪುರ ಪೊಲೀಸರು ಹಿರಿಯೂರು ಕಡೆ ಪ್ರಯಾಣ ಬೆಳೆಸಿದ್ದಾರೆ. ಚಿತ್ರದುರ್ಗ ಪೊಲೀಸರಿಂದ ದೇವರಾಜೇಗೌಡ ಅವರನ್ನು ಹೊಳೆನರಸೀಪುರ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ಮಾರ್ಚ್ 28 ಕ್ಕೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಹನಿಟ್ರಾಪ್ ಮಾಡಿದ್ದಾರೆಂದು ಮಹಿಳೆ ವಿರುದ್ದ ದೇವರಾಜೇಗೌಡ ದೂರು ದಾಖಲಿಸಿದ್ದರು.

Tap to resize

Latest Videos

ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ಡಿಕೆಶಿ ಭೇಟಿಗಾಗಿ ದೇವರಾಜೇಗೌಡನೇ ದುಂಬಾಲು ಬಿದ್ದಿದ್ದ: ಶಿವರಾಮೇಗೌಡ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ವ್ಯಕ್ತಿ ವಿರುದ್ದ ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ದೇವರಾಜೇಗೌಡರನ್ನ ವಶಕ್ಕೆ ಪಡೆಯಲಾಗಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕೇಸ್ ಗಳ ಸಂಬಂಧ ದೇವರಾಜೇಗೌಡ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಪಿಎಸ್ ಐ ಅಜಯ್ ನೇತೃತ್ವದಲ್ಲಿ ಹಿರಿಯೂರಿನತ್ತ ಹೊಳೆನರಸೀಪುರ ಪೊಲೀಸರು ಹೊರಟಿದ್ದಾರೆ. ಇಂದು ರಾತ್ರಿಯೇ ದೇವರಾಜೇಗೌಡ ರನ್ನ ಹೊಳೆನರಸೀಪುರಕ್ಕೆ ಪೊಲೀಸರು ಕರೆತರುವ ಸಾಧ್ಯತೆ ಇದೆ. ಬೆಳಗ್ಗೆ ವಿಚಾರಣೆ ಬಳಿಕ ನ್ಯಾಯಾದೀಶರ ಎದುರು ಹಾಜರುಪಡಿಸಲಿದ್ದಾರೆ. ಇಂದು ರಾತ್ರಿ ಅವರನ್ನು ಪೊಲೀಸ್‌ ಠಾಣೆಗೆ ಕರೆತರಲಿದ್ದಾರೆ. ಏಪ್ರಿಲ್ 1 ರಂದು ದೇವರಾಜೇಗೌಡ ವಿರುಧ್ದ ಸಂತ್ರಸ್ಥ ಮಹಿಳೆ ದೂರು ದಾಖಲಿಸಿದ್ದರು.

‘ಏನೂ ಕೇಳಬೇಡಿ, ನನಗೇನು ಗೊತ್ತಿಲ್ಲ’ ಎಸ್‌ಐಟಿ ಅಧಿಕಾರಿಗಳ ನೂರು ಪ್ರಶ್ನೆಗೆ ರೇವಣ್ಣ ಒಂದೇ ಆನ್ಸರ್‌!

click me!