ಭಾರತ್ ಬಂದ್: ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುವುದು ಸರಿಯಲ್ಲ ಎಂದ ಸಿ.ಟಿ.ರವಿ

By Suvarna NewsFirst Published Sep 27, 2021, 9:28 PM IST
Highlights

* ಭಾರತ್ ಬಂದ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯ
* ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸದ್ರು ಎಂದ ಸಿಟಿ ರವಿ
* ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ

ಬೆಂಗಳೂರು, (ಸೆ.27): ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುತ್ತಿರುವುದು ಸರಿಯಲ್ಲ. ರೈತರನ್ನು ಶೋಷಿಸಿ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಇಂದು (ಸೆ.27) ಭಾರತ್ ಬಂದ್ ವಿಚಾರವಾಗಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ರೈತರ ಹೆಸರಿನಲ್ಲಿ ಮೂರು ಪ್ರಮುಖ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಮಾಡಿದ್ದಾರೆ. ಆದರೆ ರೈತರು ಭಾರತ್ ಬಂದ್ ವಿರೋಧಿಸಿ, ಮೋದಿ ಪರ ನಿಂತಿದ್ದಾರೆ. ಕೃಷಿ ಯೋಜನೆ ಪರವಾಗಿದ್ದು, ಮೋದಿಯನ್ನು ರೈತರು ಬೆಂಬಲಿಸಿದ್ದಾರೆ ಎಂದರು.

ಭಾರತ್‌ ಬಂದ್‌: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ

ಅಂತೆಯೇ ಎಲ್ಲ ಪಕ್ಷಗಳು ರೈತರ ವಿರೋಧವಾಗಿ ನಿಂತು ಭಾರತ್ ಬಂದ್ ನಡೆಸಿರುವುದನ್ನು ರೈತರೇ ವಿರೋಧಿಸಿ ಕೇಂದ್ರದ ಈ ಕೃಷಿ ಕಾಯಿದೆಗಳು ರೈತರ ಪರ ಎನ್ನುವುದನ್ನು ರೈತರೇ ಹೇಳಿ ತಮ್ಮ ಹಕ್ಕಿಗಾಗಿ ನಿಂತಿದ್ದಾರೆ. ಕಳೆದ ಒಂದು ವರ್ಷದಿಂದ ರೈತ ಮಸೂದೆ ವಿರೋಧವಾಗಿ ಕೆಲವರು ನಿಂತಿದ್ದಾರೆ. ಯಾವುದನ್ನು ಬದಲಿಸಬೇಕೆಂದು ಸ್ಪಷ್ಟವಾಗಿ ಹೇಳಲು ವಿರೋಧಿಗಳಿಂದಾಗುತ್ತಿಲ್ಲ ಎಂದು ಹೇಳಿದರು. 

ರೈತರಿಗೆ 6000 ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ಮೋದಿ ಹಾಕಿರೋದು. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ. ಸಿದ್ದರಾಮಯ್ಯ ಮತ್ತೆ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

click me!