PSI Recruitment Scam: ಪಿಎಸ್‌ಐ ಹಗರಣ ಸತ್ಯ ತಿಳಿಯಲು ಮೊದಲು ದಿವ್ಯಾ ಬಂಧಿಸಿ: ಪ್ರಿಯಾಂಕ್‌ ಖರ್ಗೆ

By Govindaraj S  |  First Published Apr 28, 2022, 3:20 AM IST

ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯ ಹೊಣೆ ಹೊತ್ತಿದ್ದ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಮುಂದಾಗಿದೆ ಎಂದರೆ ಕಡೆ ಹಗರಣ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ, ಸರ್ಕಾರದ ಹಿರಿಯರ ಪಾಲುದಾರಿಕೆ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಂತಿದೆ. 


ಬೆಂಗಳೂರು (ಏ.28): ಪಿಎಸ್‌ಐ ನೇಮಕಾತಿ (PSI Recruitment Scam) ಪ್ರಕ್ರಿಯೆಯ ಹೊಣೆ ಹೊತ್ತಿದ್ದ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಮುಂದಾಗಿದೆ ಎಂದರೆ ಕಡೆ ಹಗರಣ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ, ಸರ್ಕಾರದ ಹಿರಿಯರ ಪಾಲುದಾರಿಕೆ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಂತಿದೆ. ಈ ಹಗರಣದ ಸತ್ಯಾಂಶ ಹೊರ ಬರಬೇಕಾದರೆ ಮೊದಲು ಮೊದಲು ಪ್ರಮುಖ ಆರೋಪಿ ದಿವ್ಯಾ ಹಾಗರಗಿ (Divya Hagargi) ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದೆ. 

ಈ ಕೆಲಸ ಮಾಡಲು ಸರ್ಕಾರ 15 ದಿನ ತೆಗೆದುಕೊಂಡಿದೆ. ಈಗ ಅಧಿಕಾರಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಕಡೆಗೂ ಹಗರಣ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು. ಮೊದಲು ಪ್ರಮುಖ ಆರೋಪಿಯಾದ ದಿವ್ಯಾ ಹಾಗರಗಿ ಅವರನ್ನು ಬಂಧಿಸಬೇಕು. ಆಗ ಸತ್ಯ ಹೊರಬರುತ್ತದೆ. ಪುತ್ರನ ವಿವಾಹದ ಆಹ್ವಾನ ಪತ್ರಿಕೆ ನೀಡಲು ದಿವ್ಯಾ ಹಾಗರಗಿ ನಮ್ಮ ಮನೆಗೂ ಬಂದಿದ್ದರು. ನಾನೂ ಅವರ ಜೊತೆ ಇರುವ ಫೋಟೋ ಸಹ ಇರಬಹುದು. ಅಷ್ಟೇ ಏಕೆ ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿದ್ದ ದಿವ್ಯಾ ಅವರ ಫೋಟೋ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೂ ಇರಬಹುದು. ದಿವ್ಯಾ ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಸೇರಿದವರಾ ಎಂಬುದು ಬೇರೆ ವಿಚಾರ. ಹಗರಣ ನಡೆದಿದೆ. ಅದರ ತನಿಖೆಯಾಗುವುದು ಮುಖ್ಯ ಎಂದರು.

Tap to resize

Latest Videos

PSI Recruitment Scam: ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗೆ ಸಿಐಡಿ ತಕರಾರು

ಬಿಜೆಪಿ ಐಟಿ ವಿಭಾಗದವರು ಅವರಿಗೆ ಬೇಕಾದಷ್ಟು ವಿಚಾರವನ್ನು ಮಾತ್ರ ನೋಡುತ್ತಾರೆ. ಆದರೆ, ಪರೀಕ್ಷೆ ಬರೆದ 56 ಸಾವಿರ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬಿಜೆಪಿ ಐಟಿ ವಿಭಾಗದವರು ಹೇಳುವುದಕ್ಕೆಲ್ಲ ಉತ್ತರ ನೀಡುತ್ತಿದ್ದರೆ ನಮಗೆ ಅದೇ ಕೆಲಸವಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಇಂಧನ ತೈಲ ಸುಂಕ ಕಡಿತ ಮಾಡಬೇಕು ಎಂದು ಪ್ರಧಾನಿಗಳು ಸಲಹೆ ನೀಡಿದ್ದಾರೆ. ರಾಜ್ಯಕ್ಕೆ 15ನೇ ಹಣಕಾಸು ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಜಿಎಸ್‌ಟಿ ಪಾಲನ್ನೂ ಸರಿಯಾಗಿ ನೀಡುತ್ತಿಲ್ಲ. ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಲಾಗುತ್ತಿದೆ. ಆದರೆ ಉಡಾಫೆ ಮಾತುಗಳ ಮೂಲಕ ಪ್ರಧಾನಮಂತ್ರಿಗಳು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ & ಟೀಂಗೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗಿದೆ. ವಾರದೊಳಗೆ ಶರಣಾಗದಿದ್ರೆ ಆಸ್ತಿ ಜಪ್ತಿಯ ಎಚ್ಚರಿಕೆ ನೀಡಲಾಗಿದ್ದು, ಇದು ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿಗೆ ತೀವ್ರ ನಡುಕ ಸೃಷ್ಟಿಸುವಂತದ ಆದೇಶವಾಗಿದೆ. 

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಸಿಐಡಿ, ನಾಪತ್ತೆಯಾಗಿರುವವರ ಪತ್ತೆಗೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಕೆಲಸ ನೌಕರರು ಕಳೆದ 16 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಸಿಐಡಿ ಎಲ್ಲಾ ಪ್ರಯತ್ನ ನಡೆಸಿದ್ರೂ ಪತ್ತೆಯಾಗಿಲ್ಲ. ಇವರ ಬಂಧನಕ್ಕಾಗಿಯೇ ಸಿಐಡಿ ಆರು ತಂಡ ರಚಿಸಿ ಹಗಲಿರುಳು ಶೋಧ ನಡೆಸುತ್ತಿದ್ರೂ ದಿವ್ಯಾ ಹಾಗರಗಿ ಆಂಡ್ ಟೀಂ ಸುಳಿವು ಸಿಕ್ಕಿಲ್ಲ.

ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

ಇದರಿಂದಾಗಿ ನಾಪತ್ತೆಯಾದವರ ವಿರುದ್ಧ ಬಿಗಿ ಕ್ರಮಕ್ಕೆ ಮುಂದಾಗಿರುವ ಸಿಐಡಿ, ನ್ಯಾಯಾಲಯದ ಮೂಲಕ ಅರೆಸ್ಟ್ ವಾರೆಂಟ್ ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇವರು ಸಂಘಟಿತ ಅಪರಾಧಿಗಳು, ಇವರಿಗೆ ಜಾಮೀನು ನೀಡಬಾರದು. ಜೊತೆಗೆ ದಿವ್ಯಾ ಸೇರಿ 6 ಆರೋಪಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಇಸ್ಯೂ ಮಾಡಬೇಕು ಎಂದು ಸಿಐಡಿ ಕಲಬುರಗಿ ಜಿಲ್ಲಾ ಮೂರನೇ ಸಸೆನ್ಸ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಸಿಐಡಿ ಮನವಿ ಪುರಸ್ಕರಿಸಿದ ನ್ಯಾಯಾಲಯ, ದಿವ್ಯಾ ಹಾಗರಗಿ ಮತ್ತು ಐವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

click me!