ಯುಗಾದಿ ಹಬ್ಬಕ್ಕಾಗಿ ಬಿಜೆಪಿಯಿಂದ ಮತದಾರರಿಗೆ ಸೀರೆ ಗಿಫ್ಟ್?: ಕುಡಿತದ ನಶೆಯಲ್ಲಿ ಸೀರೆಯನ್ನ ರಸ್ತೆಯಲ್ಲಿ ಸುಟ್ಟು ಆಕ್ರೋಶ

Published : Mar 08, 2023, 01:32 PM IST
ಯುಗಾದಿ ಹಬ್ಬಕ್ಕಾಗಿ ಬಿಜೆಪಿಯಿಂದ ಮತದಾರರಿಗೆ ಸೀರೆ ಗಿಫ್ಟ್?: ಕುಡಿತದ ನಶೆಯಲ್ಲಿ ಸೀರೆಯನ್ನ ರಸ್ತೆಯಲ್ಲಿ ಸುಟ್ಟು ಆಕ್ರೋಶ

ಸಾರಾಂಶ

ಬಿಜೆಪಿ ಪಕ್ಷದ ಮುಖಂಡರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸೀರೆ ಗಿಫ್ಟ್ ನೀಡಲಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ  ಶಾಸಕ ಸಿ.ಟಿ.ರವಿ ಪರವಾಗಿ ಬೆಂಬಲಿಗರು ಯುಗಾದಿ ಹಬ್ಬಕ್ಕಾಗಿ ಮಹಿಳೆರಿಗೆ  ಸೀರೆಯನ್ನು ಗಿಫ್ಟ್‌ಆಗಿ ನೀಡಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.08): ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಬಿಜೆಪಿ ಪಕ್ಷದ ಮುಖಂಡರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸೀರೆ ಗಿಫ್ಟ್ ನೀಡಲಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ  ಶಾಸಕ ಸಿ.ಟಿ.ರವಿ ಪರವಾಗಿ ಬೆಂಬಲಿಗರು ಯುಗಾದಿ ಹಬ್ಬಕ್ಕಾಗಿ ಮಹಿಳೆರಿಗೆ  ಸೀರೆಯನ್ನು ಗಿಫ್ಟ್‌ಆಗಿ ನೀಡಿದ್ದಾರೆ. ಹೀಗೆ ಉಡುಗೊರೆಯಾಗಿ ನೀಡಿದ ಸೀರೆಯೊಂದನ್ನು ಕುಡಿತದ ನಶೆಯಲ್ಲಿ ನಡು ರಸ್ತೆಯಲ್ಲಿ ಸೀರೆ ಸುಟ್ಟು ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ. 

ಮದ್ಯವ್ಯಸನಿಯೊಬ್ಬ ಸೀರೆ ಬೆಂಕಿ ಹಚ್ಚಿ ಆಕ್ರೋಶ: ಚುನಾವನೆ ನೆಪದಲ್ಲಿ ಮುಂಬರೋ ಯುಗಾದಿ ಹಬ್ಬಕ್ಕೆ ಸೀರೆ ಹಂಚಿಕೆ ಮಾಡಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಬೆಂಬಲಿಗರಿಗೆ  ಮೈಚಳಿ ಬಿಡಿಸಿದ್ದಾರೆ. ಕಳೆದ ರಾತ್ರಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಸೀರೆ ಹಂಚುವ ವೇಳೆ ಮನೆಗೆ ಬಂದ ಮದ್ಯವ್ಯಸನಿಯೊಬ್ಬ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಮಧ್ಯೆ ಸೀರೆಯನ್ನ ಸುಟ್ಟು ಸೀರೆ ಹಂಚಲು ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ. ಕೊರೋನಾ ಸಂದರ್ಭದಲ್ಲಿ ಒಂದು ಕೆ.ಜಿ. ಅಕ್ಕಿ ಕೊಟ್ಟಿಲ್ಲ. ಈಗ ಎಲೆಕ್ಷನ್ ಬಂತು ಅಂತ ಸೀರೆ ಹಂಚಲು ಬಂದಿದ್ದಾರಾ ಎಂದು  ಆಕ್ರೋಶ ಹೊರಹಾಕಿದ್ದಾರೆ. 

Chikkamagaluru: ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೇ ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ

ಮನೆ ಮನೆಗೆ ಸೀರೆ ಹಂಚಿಕೆ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರು ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸಾಮಾಜಿಕ ಜಾಲ ತಾಣದಲ್ಲಿ ಮದ್ಯವ್ಯಸನಿಯೊಬ್ಬ ಸೀರೆ ಹಂಚಿಕೆ ಮಾಡಿದ್ದಾಗ ಕುಡಿತದ ನಶೆಯಲ್ಲಿ ಸೀರೆ ಸಿಟ್ಟು ಹಾಕಿರುವ ವಿಡಿಯೋ ವೈರಲ್ ಆಗಿದೆ. ನಮಗೆ ಸೀರೆ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಮಗೆ ಸೂಕ್ತವಾದ ಮೂಲಭೂತ ಸೌಲಭ್ಯಬೇಕು ಎಂದು ನಶೆಯಲ್ಲಿ ಬಿಜೆಪಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎರಡ್ಮೂರು ಸೀರೆಗಳನ್ನ ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾನೆ. ಇದನ್ನ ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌