
BJP expels MLA Basanagouda Patil Yatnal:: ಬಣ ರಾಜಕೀಯ ಮತ್ತು ಆಂತರಿಕ ಕಚ್ಚಾಟದಿಂದ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಬಿಜೆಪಿ ನಾಯಕರಿಗೆ ಹೈಕಮಾಂಡ್ ಕೊನೆಗೂ ಬಿಗ್ ಶಾಕ್ ನೀಡಿದೆ. ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ
ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ವಿಜಯಪುರದಲ್ಲಿ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದೆ.ವಿಜಯಪುರ ಬಿಜೆಪಿ ನಗರ ಒಬಿಸಿ ಮೋರ್ಚಾ ಸ್ಥಾನಕ್ಕೆ ಭೀಮು ಮಾಶ್ಯಾಳ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಾಟ್ಸಪ್ ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಇವರಷ್ಟೇ ಅಲ್ಲದೇ ಬಿಜೆಪಿ ನಗರ ಮಂಡಳ ಅಧ್ಯಕ್ಷರಾದ ಹೂಗಾರ್ ಸಹ ವಾಟ್ಸಪ್ ಮೂಲಕ ರಾಜೀನಾಮೆ ರವಾನಿಸಿದ್ದಾರೆ. ಯತ್ನಾಳ್ ಅವರ ಉಚ್ಛಾಟನೆಗೆ ವಿಜಯಪುರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಪಕ್ಷವನ್ನೇ ತೊರೆಯುವ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: Breaking: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಶಾಸಕ ಸ್ಥಾನಕ್ಕೂ ಬರುತ್ತಾ ಕುತ್ತು!
ವಿಜಯಪುರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜೀನಾಮೆ:
ಯತ್ನಾಳ್ ಉಚ್ಚಾಟನೆ ಖಂಡಿಸಿ ಬೆಂಬಲಿಗರ ರಾಜೀನಾಮೆ ಪರ್ವ ಮುಂದುವರಿದಿದ್ದು, ಇದೀಗ ರೈತ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲಾಗಿದೆ. ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ್, ನಗರ ಮಂಡಲ ಅಧ್ಯಕ್ಷ ಶಂಕರ್ ಹೂಗಾರ್ ಎಂಬುವವರು I STAND WITH ಯತ್ನಾಳ್ ಎಂದು ಬರೆದು ರಾಜೀನಾಮೆ ನೀಡಿದ್ದಾರೆ. ಯತ್ನಾಳ್ ರಾಜೀನಾಮೆ ಬಳಿಕ ಒಟ್ಟು ಐವರು ರಾಜೀನಾಮೆ ನೀಡಿದ್ದಾರೆ. ಇದು ಇನ್ನು ಮುಂದುವರಿಯುವ ಸಾಧ್ಯತೆ ಇದೆ.
ಯತ್ನಾಳ್ ಉಚ್ಛಾಟನೆ; ವಿರೋಧಿ ಬಣದ ಸಂಭ್ರಮಾಚರಣೆ!
ಬಿಜೆಪಿ ಹೈಕಮಾಂಡ್ ಯತ್ನಾಳ್ ಉಚ್ಚಾಟಿಸಿದ ಬೆನ್ನಲ್ಲೆ ವಿರೋಧಿ ಬಣ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಘಟನೆ ನಗರದ ಜೋರಾಪುರ ಪೇಟ್‌ನ ಶಂಕರಲಿಂಗ ದೇಗುಲದ ಬಳಿ ನಡೆಯಿತು. ಯತ್ನಾಳ್ ವಿರೋಧಿಯಾಗಿರುವ ಅಪ್ಪು ಪಟ್ಟಣಶೆಟ್ಟಿ ಬಣದವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪರಸ್ಪರ ಸಹಿ ಹಂಚಿ ಸಂತಸ ಪಟ್ಟ ನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಾಜೂ ಹುನ್ನೂರ, ಆಕಾಶ ತೊರವಿ, ಸುಮಿತ್ ಮ್ಯಾಡಿ, ಸುಮೀತ್ ಗೌರ, ಆಕಾಶ ನಾಗನೂರ ಹಾಗೂ ಇತರರು ಸಂಭ್ರಮಾಚರಿಸುವ ಮೂಲಕ ಯತ್ನಾಳ್ ಉಚ್ಚಾಟನೆ ಸ್ವಾಗತಿಸಿದ ವಿರೋಧಿ ಬಣದ ಬಿಜೆಪಿ ಕಾರ್ಯಕರ್ತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ