ರಂಜಾನ್ ಕಿಟ್ ವಿತರಣೆ ವಿಚಾರವಾಗಿ ಬಿಜೆಪಿ ನಾಯಕರನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ವಕ್ಫ್, ಹಲಾಲ್ ಬಜೆಟ್ ಬಗ್ಗೆ ಹೋರಾಟ ಮಾಡಿದವರು ಈಗ ಮಸೀದಿ ಮುಂದೆ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು (ಮಾ.26): 'ವಕ್ಫ್, ಹಲಾಲ್ ಬಜೆಟ್, ಕಾಂಟ್ರಾಕ್ಟ್ ಜಿಹಾದ್‌ಗಾಗಿ ಹೋರಾಟ ಮಾಡಿದ್ದ ಬಿಜೆಪಿ ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿ.ಜೆ. ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು ಈಗ ಸೌಗತ್-ಎ-ಮೋದಿ ಕಿಟ್‌ಗಳನ್ನು ವಿತರಿಸಲು ಮಸೀದಿಗಳ ಮುಂದೆ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ರಂಜಾನ್ ಹಬ್ಬದ ನಿಮಿತ್ತವಾಗಿ ದೇಶದ 32 ಲಕ್ಷ ಮುಸ್ಲಿಮರಿಗೆ ಸೌಗತ್-ಎ-ಮೋದಿ ಕಿಟ್ ವಿತರಣೆ ಮಾಡುತ್ತಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವಿಟ್ ಮಾಡಿರುವ ಸಚಿವರು, ಈ ಎಲ್ಲ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ ಎಂದಿದ್ದಾರೆ. ಅಲ್ಲದೇ ಮುಸ್ಲಿರ ಬಗ್ಗೆ ಮಾತನಾಡಿದ ಹಿಂದೂ ಹುಲಿಗಳು ಇದೀಗ ಅವರೇ ಮಸೀದಿಗಳ ಮುಂದೆ ಸಾಲಾಗಿ ನಿಂತು ಸೌಗತ್-ಎ-ಮೋದಿ ಕಿಟ್ ವಿತರಣೆ ಮಾಡಲಿದ್ದಾರೆ ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ಮೋದಿ ಸಾಹೇಬರು ಕಾತರರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Breaking: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಶಾಸಕ ಸ್ಥಾನಕ್ಕೂ ಬರುತ್ತಾ ಕುತ್ತು!
ಬಿಜೆಪಿ ನಾಯಕರು ಮತ್ತವರ ಕಾರ್ಯಕರ್ತರು ವಾಟ್ಸಪ್ ಯುನಿವರ್ಸಿಟಿ ಬಿಟ್ಟು ಸಂವಿಧಾನವನ್ನು ಓದಬೇಕು, ಎಲ್ಲ ನಾಗರಿಕರಿಗೆ ಸಮಾನಹಕ್ಕುಗಳಿವೆ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ವಾಟ್ಸಾಪ್ ಯೂನಿವರ್ಸಿಟಿಯನ್ನು ನಂಬಿಕೊಂಡರೆ ತಮ್ಮ ಪಕ್ಷದ ಅನಿರೀಕ್ಷಿತ ಮಾಸ್ಟರ್ ಸ್ಟ್ರೋಕ್‌ಗಳಿಂದ ಪೆಪ್ಪರ್ ಆಗಬೇಕಾಗುತ್ತದೆ ಎಂದು ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ಮುಂದುವರಿದು, ಈ ಕಾರ್ಯಕ್ರಮಕ್ಕೆ ಬರುವ ಬಿಜೆಪಿಗರು ನಿಮ್ಮ ಅಲ್ಪಸಂಖ್ಯಾತರ ಮೋರ್ಚಾಗೆ ಕುಫಿ (ಟೋಪಿ)ಗಳನ್ನು ತರುವುದನ್ನು ಹೇಳಲು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ.