
ಬೆಂಗಳೂರು/ನವದೆಹಲಿ(ಏ.01): ಕರ್ನಾಟಕದಲ್ಲಿ(Karnataka) ಧರ್ಮಾಧರಿತ ವಿಭಜನೆ ಬೆಳೆಯದಂತೆ ತಡೆಯಬೇಕು. ಇಂಥ ಬೆಳವಣಿಗೆ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವುದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ(Kiran Mazumdar Shaw) ವಿರುದ್ಧ ಬಿಜೆಪಿ(BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಯೋಕಾನ್(Biocon) ಮುಖ್ಯಸ್ಥರು ರಾಜಕೀಯ ತಾರತಮ್ಯ(Political Discrimination) ಮಾಡುತ್ತಿದ್ದಾರೆ. ಈ ಹಿಂದೆ ಅಲ್ಪಸಂಖ್ಯಾತರ ಗುಂಪು ಶಿಕ್ಷಣಕ್ಕಿಂತ ತಮಗೆ ಹಿಜಾಬೇ ಮುಖ್ಯ ಎಂದಾಗ ಅಥವಾ ಹಿಂದು(Hindu) ಸಂಸ್ಥೆಗಳಿಂದ ಹಿಂದುಯೇತರರನ್ನು ಹೊರಗಿರಿಸಲು ಕಾಂಗ್ರೆಸ್ ಪಕ್ಷ ನಿಯಮ ರೂಪಿಸಿದ್ದಾಗ ಅವರು ಮಾತನಾಡಿದ್ದರಾ? ಎಂದು ಪಕ್ಷ ಪ್ರಶ್ನಿಸಿದೆ.
ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ
ಇನ್ನು ನೇರವಾಗಿ ತಮ್ಮನ್ನು ಉದ್ದೇಶಿಸಿಯೇ ಟ್ವೀಟ್ ಮಾಡಿದ್ದ ಕಿರಣ್ ಮಂಜುದಾರ್ ಅವರಿಗೆ ಅಲ್ಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ‘ಕರ್ನಾಟಕ ಶಾಂತಿ ಹಾಗೂ ಪ್ರಗತಿಗೆ ಹೆಸರಾದ ರಾಜ್ಯ. ಅದನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರ ಸಹಕಾರ ಕೋರುತ್ತೇನೆ. ಸಾಮಾಜಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವ ಮುನ್ನ ತಾಳ್ಮೆ ವಹಿಸಿ, ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.
ಧರ್ಮ ವಿಭಜನೆ:
ಕರ್ನಾಟಕದಲ್ಲಿ ಕೆಲವು ವಾರಗಳಿಂದ ನಡೆಯುತ್ತಿರುವ ಹಿಜಾಬ್(Hijab) ಗದ್ದಲ, ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ದೇಗುಲ ಬಳಿ ವ್ಯಾಪಾರ ನಿಷೇಧ, ಹಲಾಲ್(Halal) ಕಟ್ ವಿವಾದ ಕುರಿತು ಗುರುವಾರ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಕಿರಣ್ ಮಜುಂದಾರ್ ಶಾ ‘ಒಂದು ಧರ್ಮದ ವ್ಯಾಪಾರಿಗಳನ್ನು ನಿಷೇಧಿಸುವ ವಿವಾದದಲ್ಲಿ ಮಾಧ್ಯಮಗಳು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿವೆ. ಇದಕ್ಕೆ ರಾಜಕೀಯ ತಿರುವು ನೀಡಿ ಬಿಜೆಪಿಯು ವಿವಾದವನ್ನಾಗಿ ಮಾಡುತ್ತಿದೆ’ ಎಂದು ಆರೋಪಿಸಿದ್ದರು.
ಅಲ್ಲದೆ ‘ಪಟ್ಟಭದ್ರ ಶಕ್ತಿಗಳು ಈ ವಿಚಾರವನ್ನು ರಾಜಕೀಯವಾಗಿ ಹೈಜಾಕ್ ಮಾಡುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಶಾಂತಿಯುತವಾಗಿ ಬಗೆಹರಿಸುವ ಸಂಪೂರ್ಣ ವಿಶ್ವಾಸವಿದೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳೂ ಒಂದಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಧರ್ಮಾಧರಿತ ವಿಭಜನೆ ಬೆಳೆಯುದಂತೆ ತಡೆಯಬೇಕು. ನನಗೆ ಕನ್ನಡತಿಯಾಗಿರುವುದಕ್ಕೆ ಹೆಮ್ಮೆ ಇದೆ. ನಮ್ಮ ರಾಜ್ಯದಲ್ಲಿ ಇಂತಹ ಬೆಳವಣಿಗೆಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವುದನ್ನು ನನಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದು ಐಟಿಗೆ ಕಾಲಿಟ್ಟರೆ ದೇಶದ ‘ಜಾಗತಿಕ ನಾಯಕತ್ವ’ಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಶಾಂತಿಯುತವಾಗಿ ಬಗೆಹರಿಸಬೇಕು’ ಎಂದು ಹೇಳಿದ್ದರು.
ಬಿಜೆಪಿ ಆಕ್ರೋಶ:
ಕಿರಣ್ ಅವರ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಬಯೋಕಾನ್ ಮುಖ್ಯಸ್ಥರು ರಾಜಕೀಯ ತಾರತಮ್ಯ ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ರಾಜಕೀಯ ಬಣ್ಣ ಮಿಶ್ರಿತವಾಗಿದೆ ಎಂದು ದೂಷಿಸಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿನ ಧಾರ್ಮಿಕ ವಿಭಜನೆ(Religious Divide) ಕುರಿತು ಕಿರಣ್ ಅವರು ಎಚ್ಚೆತ್ತುಕೊಂಡಿದ್ದಾರೆ. ಅಲ್ಪಸಂಖ್ಯಾತರ ಗುಂಪು ಶಿಕ್ಷಣಕ್ಕಿಂತ ತಮಗೆ ಹಿಜಾಬೇ ಮುಖ್ಯ ಎಂದಾಗ ಅಥವಾ ಹಿಂದು ಸಂಸ್ಥೆಗಳಿಂದ ಹಿಂದುಯೇತರರನ್ನು ಹೊರಗಿರಿಸಲು ಕಾಂಗ್ರೆಸ್(Congress) ಪಕ್ಷ ನಿಯಮ ರೂಪಿಸಿದ್ದಾಗ ಅವರು ಮಾತನಾಡಿದ್ದರಾ? ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕರಡು ತಯಾರಿಗೆ ನೆರವಾಗಿದ್ದವರು ಅವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವೈಯಕ್ತಿಕ, ರಾಜಕೀಯ ಬಣ್ಣ ಮಿಶ್ರಿತ ಅಭಿಪ್ರಾಯವನ್ನು ಹೇರಿ, ಅದನ್ನು ಭಾರತದ ಐಟಿಬಿಟಿ ವಲಯದ ನಾಯಕತ್ವದ ಜತೆ ಸಂಯೋಜಿಸುವ ಕೆಲಸವನ್ನು ಕಿರಣ್ ಅವರಂತಹ ವ್ಯಕ್ತಿಗಳು ಮಾಡುತ್ತಿರುವುದು ದುರದೃಷ್ಟಕರ. ಉದ್ಯಮಿ ರಾಹುಲ್ ಬಜಾಜ್ ಕೂಡ ಗುಜರಾತ್ ಬಗ್ಗೆ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಗುಜರಾತ್ ಇಂದು ದೇಶದ ಪ್ರಮುಖ ಆಟೋಮೊಬೈಲ್ ಹಬ್ ಆಗಿದೆ ಎಂದಿದ್ದಾರೆ.
ಕುತೂಹಲ ಕೆರಳಿಸಿದ ಕಿರಣ್ ಮಜುಂದಾರ್- ಮೋಹನ್ ಭಾಗವತ್ ಭೇಟಿ..!
ಕಿರಣ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು ‘ಬೊಮ್ಮಾಯಿ ಅವರು ಕೋಮು ವಿಭಜನೆಯನ್ನು ಹೆಚ್ಚಿಸುತ್ತಾರೆ ಹಾಗೂ ಕರ್ನಾಟಕ ನಮ್ಮ ಕಣ್ಣೆದುರೇ ವಿಫಲವಾಗುತ್ತದೆ’ ಎಂದು ಬರೆದುಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಿರಣ್, ‘ನಮ್ಮ ಮುಖ್ಯಮಂತ್ರಿ ಅತ್ಯಂತ ಪ್ರಗತಿಪರ ನಾಯಕ. ಈ ವಿಷಯವನ್ನು ಬೇಗ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಇಂಥದ್ದನ್ನೆಲ್ಲ ಸಹಿಸಲಾಗದು
ನನಗೆ ಕನ್ನಡತಿಯಾಗಿರುವುದಕ್ಕೆ ಹೆಮ್ಮೆ ಇದೆ. ನಮ್ಮ ರಾಜ್ಯದಲ್ಲಿ ಇಂತಹ ಬೆಳವಣಿಗೆಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವುದನ್ನು ನನಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದು ಐಟಿಗೆ ಕಾಲಿಟ್ಟರೆ ದೇಶದ ‘ಜಾಗತಿಕ ನಾಯಕತ್ವ’ಕ್ಕೆ ಧಕ್ಕೆ ಬರುತ್ತದೆ ಅಂತ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.
ಆಗ ಎಲ್ಲಿದ್ದಿರಿ?
ಅಲ್ಪಸಂಖ್ಯಾತರ ಗುಂಪು ಶಿಕ್ಷಣಕ್ಕಿಂತ ತಮಗೆ ಹಿಜಾಬೇ ಮುಖ್ಯ ಎಂದಾಗ ಅಥವಾ ಹಿಂದು ಸಂಸ್ಥೆಗಳಿಂದ ಹಿಂದುಯೇತರರನ್ನು ಹೊರಗಿರಿಸಲು ಕಾಂಗ್ರೆಸ್ ಪಕ್ಷ ನಿಯಮ ರೂಪಿಸಿದ್ದಾಗ ಅವರು ಮಾತನಾಡಿದ್ದರಾ? ಅಂತ ಬಿಜೆಪಿ ಅಮಿತ್ ಮಾಳವೀಯ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ