
ಆನೇಕಲ್(ಆ.02): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ರೂಪಾ ತನ್ನ 2ನೇ ಹೆರಿಗೆಯಲ್ಲಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ.
ಈ ಬಗ್ಗೆ ಮಾತನಾಡಿದ ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ಬಿಪಿನ್ ಸಿಂಗ್ ಅವರು ತಾಯಿ ಮತ್ತು ಮರಿ ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
ಆನೆ ಮರಿ ರಕ್ಷಿಸಲು ಕಾಲುವೆಗಿಳಿದಾತ ತನ್ನದೇ ಪ್ರಾಣ ಕಳೆದುಕೊಂಡ!
2016ರಲ್ಲಿ ರೂಪಾ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಈಗಿನ ಮರಿಯನ್ನೂ ಸೇರಿಸಿದಲ್ಲಿ ಪಾರ್ಕಿನಲ್ಲಿ ಒಟ್ಟು 24 ಆನೆಗಳ ಗಜಪಡೆ ಇದ್ದು ಪ್ರವಾವಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ ಎಂದರು. ಮುಂದಿನ ಎಲ್ಲ ಭಾನುವಾರಗಳಂದು ಉದ್ಯಾನವನ ಪ್ರವಾಸಿಗರಿಗೆ ತೆರೆದಿರುತ್ತದೆ. ಮಂಗಳವಾರದ ರಜೆಯನ್ನು ಮುಂದುವರಿಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ