ತೆಲಂಗಾಣದಲ್ಲಿ 400 ಎಕರೆ ಅರಣ್ಯ ನಾಶ: ಸಿಎಂ ರೇವಂತ್ ರೆಡ್ಡಿ ಗಲ್ಲಿಗೇರಿಸಲು ರಾಷ್ಟ್ರಪತಿಗೆ ಮನವಿ!

Published : Apr 16, 2025, 01:03 PM ISTUpdated : Apr 16, 2025, 01:19 PM IST
ತೆಲಂಗಾಣದಲ್ಲಿ 400 ಎಕರೆ ಅರಣ್ಯ ನಾಶ: ಸಿಎಂ ರೇವಂತ್ ರೆಡ್ಡಿ ಗಲ್ಲಿಗೇರಿಸಲು ರಾಷ್ಟ್ರಪತಿಗೆ ಮನವಿ!

ಸಾರಾಂಶ

ತೆಲಂಗಾಣದಲ್ಲಿ 400 ಎಕರೆಗೂ ಹೆಚ್ಚು ಅರಣ್ಯ ಭೂಮಿ ನಾಶಪಡಿಸಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಮನುಸಂಕುಲಕ್ಕೆ ಮಾರಕವಾಗಿರುವಂತೆ ಮಾಡಿರುವ ಸಿಎಂ ರೇವಂತ್ ರೆಡ್ಡಿ, ಅರಣ್ಯ ಸಚಿವೆ ಕೊಂಡ ಸುರೇಖಾ ಹಾಗೂ ಅರಣ್ಯ ಅಧಿಕಾರಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದಲ್ಲಿ ಎಡಿಸಿ ಗೀತಾಹುಡೇದ ಮೂಲಕ ರಾಷ್ಟ್ರಪತಿಗೆ ವಿಶ್ವ ರೈತ ಸಂಘ ಸದಸ್ಯರು, ಪಾರಂಪರಿಕ ವೈದ್ಯ ಎಚ್.ಸಿ.ಮಹೇಶ್ ಕುಮಾ‌ರ್ ಮನವಿ ಸಲ್ಲಿಸಿದರು.

ಚಾಮರಾಜನಗರ (ಏ.16): ತೆಲಂಗಾಣದಲ್ಲಿ 400 ಎಕರೆಗೂ ಹೆಚ್ಚು ಅರಣ್ಯ ಭೂಮಿ ನಾಶಪಡಿಸಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಮನುಸಂಕುಲಕ್ಕೆ ಮಾರಕವಾಗಿರುವಂತೆ ಮಾಡಿರುವ ಸಿಎಂ ರೇವಂತ್ ರೆಡ್ಡಿ, ಅರಣ್ಯ ಸಚಿವೆ ಕೊಂಡ ಸುರೇಖಾ ಹಾಗೂ ಅರಣ್ಯ ಅಧಿಕಾರಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದಲ್ಲಿ ಎಡಿಸಿ ಗೀತಾಹುಡೇದ ಮೂಲಕ ರಾಷ್ಟ್ರಪತಿಗೆ ವಿಶ್ವ ರೈತ ಸಂಘ ಸದಸ್ಯರು, ಪಾರಂಪರಿಕ ವೈದ್ಯ ಎಚ್.ಸಿ.ಮಹೇಶ್ ಕುಮಾ‌ರ್ ಮನವಿ ಸಲ್ಲಿಸಿದರು.

ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ಅರಣ್ಯ ಸಚಿವೆ ಕೂಂಡ ಸುರೇಖಾ ಹಾಗೂ ಅರಣ್ಯಾಧಿಕಾರಿಗಳು ತೆಲಂಗಾಣದಲ್ಲಿರುವ 400 ಎಕರೆಗೂ ಹೆಚ್ಚು ಅರಣ್ಯ ಸಾಶ ಮಾಡಿದ್ದಾರೆ. ಐಟಿ ಪಾರ್ಕ ನಿರ್ಮಿಸುವ ನೇಪ ಹೇಳಿ ಅರಣ್ಯಕ್ಕೆ ರಾತ್ರೋರಾತ್ರಿ ಯುದ್ದೋಪಾದಿಯಲ್ಲಿ ನಾಶಪಡಿಸಿ ಯಾವುದೇ ಅನುಮತಿ ಇಲ್ಲದೇ ನೂರಾರು ಜೆಸಿಬಿ ಮುಖಾಂತರ ತೆರಳಿ ಅರಣ್ಯ ಹಾಗೂ ಅಲ್ಲಿರುವ ಅಪಾರ ವನ್ಯ ಪ್ರಾಣಿ ಪಕ್ಷಿಗಳ ಮಾರಣ ಹೋಮವಾಗಿದೆ. ಇದು ರಾಜ್ಯವಲ್ಲ, ದೇಶವಲ್ಲ, ವಿಶ್ವವೇ ತಲೆತಗ್ಗಿಸುವಂತ ಹೇಯಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಡೆದ ಫೈರಿಂಗ್ ಸುಳ್ಳಾ? ಗೃಹ ಸಚಿವ ಪರಮೇಶ್ವರ್ ಮಹತ್ವದ ಹೇಳಿಕೆ!

 ಇಂತಹ ಕ್ರೂರ ಕಾರ್ಯಾಚರಣೆ ಮಾಡಿರುವ ತೆಲಂಗಾಣ ಸರ್ಕಾರವನ್ನು ವಜಾಮಾಡಿ, ಇದಕ್ಕೆ ಸಂಬಂದಪಟ್ಟ ಅರಣ್ಯ ಅಧಿಕಾರಿಗಳು ಪ್ರತಿರೋಧ ಒಡ್ಡದೆ ಕೈಜೋಡಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇವರನ್ನು ಸೇವೆಯಿಂದ ವಜಾಗೊಳಿಸಿ ಅಲ್ಲಿ ಮತ್ತೆ ಅರಣ್ಯ ಬೆಳೆಸುವಂತೆ ಮುನ್ನೆಚ್ಚರಿಕೆ ವಹಿಸಿ ಐಟಿ ಪಾರ್ಕ ನಿರ್ಮಿಸದಂತೆ ಕ್ರಮವಹಿಸಬೇಕು. ಇಂತಹ ಅಕ್ರಮ ವ್ಯವಸ್ಥೆ ನೆಡೆದರೂ ವಿರೋಧ ಪಕ್ಷಗಳು ಸುಮ್ಮನಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರ ವಿರುದ್ಧವು ತನಿಖೆ ನಡೆಸಿ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್.ಸಿ.ಮಹೇಶ್ ಕುಮಾರ್ ಒತ್ತಾಯಿಸಿದ್ದಾರೆ. ಈ ವೇಳೆ ಹರದನಹಳ್ಳಿ ಮಹದೇವಸ್ವಾಮಿ ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ