ಮೂರು ರೋಗಿಗಳ ಸಾವಿನ ಹಿಂದೆ ಇದೇಯ್ಯಾ ಭಾರಿ ಷಡ್ಯಂತ್ರ ? ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನ ಬಲಿ ಪಡೆದ್ರಾ ನೀಚರು ? ನಿರ್ದೇಶಕರನ್ನ ಕೆಳಗಿಸಲು ಕರೆಂಟ್ ಕಟ್ ಆಗಿರೋ ವಿಷಯವನ್ನೇ ಅಸ್ತ್ರ ಮಾಡಿಕೊಂಡ್ರಂತೆ. ಷಡ್ಯಂತ್ರದ ಬಗ್ಗೆ ಸ್ವತಃ ನಿರ್ದೇಶಕ ಗಂಗಾಧರ್ ಗೌಡ ಬಾಯ್ಬಿಟ್ಟಿದ್ದಾರೆ.
ಬಳ್ಳಾರಿ, (ಸೆಪ್ಟೆಂಬರ್ .16): ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತಗೊಂಡ ಕಾರಣ ಮೂವರು ರೋಗಿಗಳು ಮೃತಪಟ್ಟಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಭಾರೀ ಸದ್ದು ಮಾಡಿದೆ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವುಪಡೆದುಕೊಂಡಿದೆ.
ಹೌದು...ಶಾಸಕ ಸೋಮಶೇಖರ್ ರೆಡ್ಡಿ ಅವರು ನಿರ್ದೇಶಕ ಗಂಗಾಧರ್ ಗೌಡ ಹಾಗೂ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಅಲ್ಲದೇ ಗಂಗಾಧರ್ ಗೌಡ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ರೆಡ್ಡಿ ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಿರ್ದೇಶಕ ಗಂಗಾಧರ್ ಗೌಡ ಅವರು ನನ್ನ ಹೆಸರು ಕೆಡಿಸಲು ಈ ರೀತಿ ಮಾಡಿಸಿದ್ದಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಸೋಮಶೇಖರ್ ರೆಡ್ಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
undefined
ಬಳ್ಳಾರಿ ದುರಂತ: ವಿಮ್ಸ್ ಐಸಿಯುನಲ್ಲಿ 3 ಸಾವು, ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ
ಈ ಬಗ್ಗೆ ಇಂದು(ಶನಿವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಮ್ಸ್ ಆಸ್ಪತ್ರೆ ನಿರ್ದೇಶಕ ಗಂಗಾಧರ್ ಗೌಡ, ನನ್ನ ಹೆಸರು ಕೆಡಿಸಲು ಎನೇನೋ ಮಾಡ್ತಿದ್ದಾರೆ. ಕಳೆದ ತಿಂಗಳು ನೇಮಕಾತಿಯಾದ ದಿನದಿಂದ ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ದಿನ ಕೆಲವರು ಫೋನ್ ನಲ್ಲಿ ಮಾತನಾಡಿದ್ದಾರೆ. ಆ ಆಡಿಯೋ ಸಂಗ್ರಹಿಸುತ್ತಿರುವೆ. ನನ್ನ ಹೆಸರು ಕೆಡಿಸಲು ವಿದ್ಯುತ್ ಸಂಪರ್ಕ ಕಡಿತಗೊಂಡ ವಿಷಯ ಲಾಭ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ದ ದೂರು ನೀಡಲು ನಿರ್ಧರಿಸಿರುವೆ. ನನ್ನ ಹೆಸರು ಕೆಡಿಸಲು ಮುಂದಾದವರ ವಿರುದ್ದ ಎಫ್ ಐಆರ್ ದಾಖಲು ಮಾಡಿ ಕಾನೂನು ಹೋರಾಟ ಮಾಡುವೆ ಎಂದು ಸ್ಪಷ್ಟಪಡಿಸಿದರು.
ಗಂಗಾಧರ್ ಗೌಡ,ಸುಧಾಕರ್ ವಿರುದ್ಧ ಶಾಸಕ ರೆಡ್ಡಿ ಕಿಡಿ
ಬಳ್ಳಾರಿ : ಡಾ. ಸುಧಾಕರ್ ಅವರಿಗೆ ಅಹಂಕಾರ ಜಾಸ್ತಿ, ಸುಧಾಕರ್ ಬಿಜೆಪಿ ಶಾಸಕರ ಮಾತುಗಳನ್ನೆಲ್ಲ ಕೇಳಲ್ಲ ಎಂದು ಸೋಮಶೇಖರ್ ರೆಡ್ಡಿ, ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.
Ballari ವಿಮ್ಸ್‌ನಲ್ಲಿ ಮುಂದುವರೆದ ಮರಣ ಮೃದಂಗ! ಸತ್ತಿದ್ದು ಎರಡೋ? ನಾಲ್ಕೋ?
ವಿಧಾನಸಭೆಗೆ ಅನಾರೋಗ್ಯದ ನಿಮಿತ್ತ ಆರೋಗ್ಯ ಸಚಿವ ಡಾ. ಸುಧಾಕರ್ ಆಗಮಿಸದ ಹಿನ್ನೆಲೆ ಸುಧಾಕರ್‌ಗೆ ಅಹಂಕಾರ ಜಾಸ್ತಿ. ಬಿಜೆಪಿ ಶಾಸಕರ ಮಾತುಗಳನ್ನೆಲ್ಲ ಕೇಳಲ್ಲ. ಈ ಬಾರಿ ಸದನಕ್ಕೂ ಬಂದಿಲ್ಲ ಬಿಜೆಪಿ ಶಾಸಕರ ಕೈಗೆ ಸಿಗಲ್ಲ, ಈಬಾರಿ ಸದನಕ್ಕೂ ಬಂದಿಲ್ಲ ಬಳ್ಳಾರಿಯಲ್ಲಿ ಸುಧಾರಕ್ ವಿರುದ್ಧ ಸೋಮಶೇಖರ್ ರೆಡ್ಡಿ ಗರಂ ಆಗಿದ್ದಾರೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡದಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ್ ರೆಡ್ಡಿ ಅವರು ನೇರವಾಗಿ ಸಚಿವ ಸುಧಾಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಮ್ಸ್ ನಲ್ಲಿ ನಡೆದ ಘಟನೆಯಲ್ಲಿ ನಿರ್ದೇಶಕರ ವೈಫಲ್ಯವಿದೆ ಎಂದ ರೆಡ್ಡಿ ನೇರವಾಗಿ ಆರೋಪ ಮಾಡಿದರು.
ಯಾರೋ ( ಸುಧಾಕರ್) ಬಂದು ಇವರನ್ನು ಡೈರೆಕ್ಟರ್ ಮಾಡಿದ್ದಾರೆ. ನಾವು ಗಂಗಾಧರ ಗೌಡ ಅವರ ನೇಮಕ ಮಾಡುವುದು ಬೇಡ ಎಂದಿದ್ದೇವು. ಆದ್ರೇ, ಸಚಿವ ಸುಧಾಕರ್ ಅವರು ಗಂಗಾಧರ್ ಗೌಡ ಅವರನ್ನು ಹಠಕ್ಕೆ ಬಿದ್ದವರಂತೆ ನೇಮಕ ಮಾಡಿದ್ದಾರೆ. ಈಗ ಇರುವ ಡೈರೆಕ್ಟರ್ ಬೇಡ ಅಂದಿದ್ದೇವು, ಅದ್ರೆ ಅವರನ್ನು ಏಕಾಏಕಿ ನೇಮಕ ಮಾಡಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಅವರು ಸಚಿವ ಸುಧಾಕರ್ ಹಾಗೂ ವಿಮ್ಸ್ ಡೈರೆಕ್ಟರ್ ಗಂಗಾಧರ್ ಗೌಡ ವಿರುದ್ಧ ಕಿಡಿಕಾರಿದರು.
ಬಳ್ಳಾರಿ ವಿಮ್ಸ್ ದುರಂತ: ಬಡವರಿಗೆ ಬ್ಯಾನಿ ಬರಬಾರದ್ರಿ, ರೋಗಿಗಳ ಸಂಬಂಧಿಕರ ಅಳಲು
ಸಚಿವ ಸುಧಾಕರ್ ಒಂದು ರೀತಿಯಲ್ಲಿ ಹಠಕ್ಕೆ ಬಿದ್ದ ರೀತಿಯಲ್ಲಿ ನೇಮಕ ಮಾಡಿದ್ರು. ನೇಮಕಾತಿ ಪಾರದರ್ಶಕವಾಗಿ ಆಗಿಲ್ಲವೆಂದು ಜನರು ಮಾತನಾಡಿಕೊಳ್ಳುತ್ತಾರೆ. ಅವರಿಗಿಂತ ಚೆನ್ನಾಗಿ ಕೆಲಸ ಮಾಡುವವರು ಇದ್ದಾರೆ. ಆದ್ರೆ ಇವರನ್ನೇ ನೇಮಕಾತಿ ಮಾಡಿದ್ದಾರೆ. ಅವರು ಸರಿಯಾಗಿ ಕೆಲಸ ಮಾಡಲ್ಲ ರೌಡ್ಸ್ ಹೊಡೆಯಲ್ಲ. ಕೆಲಸ ಮಾಡೋರನ್ನು ಬಿಟ್ಟು ಇವರನ್ನು ನೇಮಕಾತಿ ಮಾಡಿದ್ದಾರೆ. ಇವರ ನೇಮಕಾತಿಗೆ ನಮ್ಮ ವಿರೋಧ ಇತ್ತು, ಈಗಲೂ ಇದೆ ಎಂದು ನೇರವಾಗಿ ನಿರ್ದೇಶಕ ಗಂಗಾಧರ್ ನೇಮಕಕ್ಕೆ ಅಸಾಧಾನ ಹೊರಹಾಕಿದ್ದಾರೆ.
ಶಾಸಕ ಸೋಮಶೇಖರ್ ರೆಡ್ಡಿ ಅವರ ಮಾತುಗಳನ್ನ ಗಮನಿಸಿದ್ರೆ ವಿಮ್ಸ್ ನಿರ್ದೇಶಕರ ನೇಮಕಾತಿಯಲ್ಲಿ ಲಾಭಿ ನಡೆದಿತ್ತಾ.? ರಾಜ್ಯದಲ್ಲಿ ಅಧಿಕಾರಿಗಳು ನೇಮಕಾತಿಯ ಲಾಭಿ ಬಿಚ್ಚಿಟ್ಟರಾ ? ಎನ್ನುವ ಅನುಮಾನಗಳು ಉದ್ಭವಿಸಿವೆ.
ಮೂರು ರೋಗಿಗಳ ಸಾವಿನ ಹಿಂದೆ ಇದೇಯ್ಯಾ ಭಾರಿ ಷಡ್ಯಂತ್ರ ? ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನ ಬಲಿ ಪಡೆದ್ರಾ ನೀಚರು? ಇಬ್ಬರ ನಡುವಿನ ಜಗಳದಲ್ಲಿ ಅಮಾಯಕ ರೋಗಿಗಳು ಬಲಿಯಾದ್ರಾ?