ಕನಕಪುರ ಪಟ್ಟಣ ಪುನಃ ಬೆಂಗಳೂರಿಗೆ ಸೇರ್ಪಡೆ: ಸುಳಿವು ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

By Sathish Kumar KH  |  First Published Oct 24, 2023, 12:32 PM IST

ಕನಕಪುರ ತಾಲೂಕಿನ ಗ್ರಾಮಗಳ ಯಾವೊಬ್ಬ ರೈತರೂ ಭೂಮಿಯನ್ನು ಮಾರಾಟ ಮಾಡಬೇಡಿ. ನಾವು ವಾಸ ಮಾಡುವಂತಹ ಈ ಗ್ರಾಮಗಳು ಒಂದಲ್ಲ ಒಂದು ದಿನ ಬೆಂಗಳೂರು ಆಗೇ ಆಗುತ್ತದೆ.


ಬೆಂಗಳೂರು (ಅ.24): ಕನಕಪುರ ತಾಲೂಕಿನ ಗ್ರಾಮಗಳ ಯಾವೊಬ್ಬ ರೈತರೂ ಭೂಮಿಯನ್ನು ಮಾರಾಟ ಮಾಡಬೇಡಿ. ನಾವು ವಾಸ ಮಾಡುವಂತಹ ಈ ಗ್ರಾಮಗಳು ಒಂದಲ್ಲ ಒಂದು ದಿನ ಬೆಂಗಳೂರು ಆಗೇ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಇನ್ಮುಂದೆ ರಾಮನಗರ ಜಿಲ್ಲೆ ಇರೋದಿಲ್ಲ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಯಾರೋ ಹೆಸರು ಮಾಡಿಕೊಳ್ಳಬೇಕು ಅಂತ ರಾಮನಗರ ಜಿಲ್ಲೆ ಮಾಡಿದ್ದರು. ಈಗ ಪುನಃ ಬೆಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರಾಜಕೀಯವಾಗಿ ಭರ್ಜರಿ ಟಾಂಗ್ ಕೊಟ್ಟಿದ್ದಾರೆ. 

Tap to resize

Latest Videos

ವರ್ತೂರು ಸಂತೋಷ್‌ ಹುಲಿ ಉಗುರು ಪೆಂಡೆಂಟ್‌ನಿಂದ ಚಿನ್ನದಂಗಡಿ ಮಾಲೀಕನಿಗೂ ಸಂಕಷ್ಟ!

ರಾಮನಗರ ಇಲ್ಲ.. ಬೆಂಗಳೂರು ಅಷ್ಟೇ ಎಂದು ದೇವರ ಮೇಲೆ ಪ್ರಮಾಣ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ರೈತರಿಗೆ ಭೂಮಿ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ. ಒಂದೊಂದು ಅಡಿ ಲೆಕ್ಕದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತದೆ. ಇದನ್ನು ಬೆಂಗಳೂರು ಜಿಲ್ಲೆಯಾಗಿ ಮಾಡುವುದರಿಂದ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಯಾವೊಬ್ಬ ರೈತರೂ ತಮ್ಮ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮುಂದಿನ ದಿನಗಳನ್ನು ನಷ್ಟವನ್ನು ಅನುಭವಿಸಬೇಡಿ. ನಿಮ್ಮ ಭೂಮಿಯನ್ನು ಮಾರಾಟ ಮಾಡಿ ಮುಂದಿನ ದಿನಗಳನ್ನು ನೀವೇ ಕೂಲಿಯಾಳಾಗಬೇಡಿ ಎಂದು ಡಿ.ಕೆ. ಶಿವಕುಮಾರ್‌ ಸಲಹೆ ನೀಡಿದ್ದಾರೆ.

ಕನಕಪುರ ತಾಲೂಕಿನ ಗ್ರಾಮಗಳ ಯಾವೊಬ್ಬ ರೈತರೂ ಭೂಮಿಯನ್ನು ಮಾರಾಟ ಮಾಡಬೇಡಿ. ನಾವು ವಾಸ ಮಾಡುವಂತಹ ಈ ಗ್ರಾಮಗಳು ಒಂದಲ್ಲ ಒಂದು ದಿನ ಬೆಂಗಳೂರು ಆಗೇ ಆಗುತ್ತದೆ. ಆಗ ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಾನು ಕನಕಪುರ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರೆಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮೈಸೂರು ದಸರಾ 2023: ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ನಾನು ದೇವಾಲಯ ಜೀರ್ಣೋದ್ಧಾರ ಮಾಡಿದ ಬಗ್ಗೆ ಪುಸ್ತಕ ಬರೆಯಬಹುದು: ಡಿ.ಕೆ.ಶಿವಕುಮಾರ್, ಪಿ.ಜಿ.ಆರ್.ಸಿಂಧ್ಯಾ ಎಲ್ಲರ ಕೈಗಳು ಇರುವುದೇ ದಾನ ಮಾಡಲು. ದೇವರ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ ಕನಕಪುರ ತಾಲೂಕಿನಲ್ಲಿ ಸುಮಾರು 300 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿ ಹೊಸ ರೂಪ ಕೊಡಲಾಗಿದೆ. ನಾನು ಈ ಕ್ಷೇತ್ರದ ಪ್ರತಿನಿಧಿಯಾದ ಮೇಲೆ ಎಷ್ಟು ದೇವಾಲಯಗಳ ಜೀರ್ಣೋದ್ಧಾರ ಮಾಡಿರುವ ಕುರಿತು ಪುಸ್ತಕ ಮಾಡಬಹುದು. ಪ್ರಸ್ತುತ ವೀರಭದ್ರನ ದೇವಸ್ಥಾನಕ್ಕೆ ಎಷ್ಟು ಸಹಾಯ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳುವದಿಲ್ಲ. ಈ ದೇವಸ್ಥಾನದ ಪ್ರತಿ ಕುಟುಂಬದ ಹಣವಿರಬೇಕು ಎಂದು ಸಲಹೆ ನೀಡಿದರು.

ಕಬ್ಬಾಳಮ್ಮ ದೇವಸ್ಥಾನ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ: ನಾಣು ಕಬ್ಬಾಳಮ್ಮನ ದೇವಸ್ಥಾನ ಜೀರ್ಣೋದ್ಧಾರ ಮಾಡುವ ವೇಳೆ, ಒಂದಷ್ಟು ಜನ ದೇವಿಯನ್ನು ಮುಟ್ಟಬೇಡ, ಸುಟ್ಟು ಹೋಗುವೆ ಎಂದು ಹೇಳಿದ್ದರು. ಆದರೂ ನಾನು ನೊಣವಿನಕೆರೆ ಸ್ವಾಮೀಜಿಗಳ ಬಳಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಒಬ್ಬರ ಹೆಸರು ಸೂಚಿಸಿ ಇವರ ಕಡೆಯಿಂದ ಭಿನ್ನಮಾಡಿ ನೆರವೇರಿಸಲು ತಿಳಿಸಿದರು. ಇದರಿಂದಾಗಿ ಕಬ್ಬಾಳಮ್ಮನ ದೇವಸ್ಥಾನ ಈಗ ರಾಜ್ಯದಲ್ಲಿಯೇ ಒಂದು ಅದ್ಭುತವಾದ ದೇವಸ್ಥಾನ ನಿರ್ಮಾಣವಾಗಿದೆ ಎಂದರು.

click me!