ರಾಜ್ಯ ಸರ್ಕಾರದ ಇಬ್ಬಗೆ ನೀತಿ: ದಸರಾ ಹಬ್ಬದಂದೇ ಪ್ರತಿಭಟನೆಗೆ ಮುಂದಾದ ರೈತರು

Published : Oct 24, 2023, 10:38 AM IST
ರಾಜ್ಯ ಸರ್ಕಾರದ ಇಬ್ಬಗೆ ನೀತಿ: ದಸರಾ ಹಬ್ಬದಂದೇ ಪ್ರತಿಭಟನೆಗೆ ಮುಂದಾದ ರೈತರು

ಸಾರಾಂಶ

ರೈತ ಸಂಘಟನೆ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದೆ. ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ‌ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ರೈತರಿಗೊಂದು ನ್ಯಾಯ ಕೈಗಾರಿಕೆಗಳಿಗೊಂದು ನ್ಯಾಯ ಎಂದು ರೈತರು ಆರೋಪಿಸಿದ್ದಾರೆ. 

ಬೆಂಗಳೂರು(ಅ.24): ರಾಜ್ಯ ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ದಸರಾ ಹಬ್ಬದಂದೇ ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದಾರೆ. ಹೌದು,  ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಇಂದು(ಮಂಗಳವಾರ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.  

ರೈತ ಸಂಘಟನೆ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯವ್ಯಾಪಿ ಪತ್ರಿಭಟನೆ ನಡೆಯಲಿದೆ. ಸರ್ಕಾರದ ಹಲವು ನಿಲುವುಗಳನ್ನ ವಿರೋಧಿಸಿ ರಸ್ತೆ‌ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ರೈತರಿಗೊಂದು ನ್ಯಾಯ ಕೈಗಾರಿಕೆಗಳಿಗೊಂದು ನ್ಯಾಯ ಎಂದು ರೈತರು ಆರೋಪಿಸಿದ್ದಾರೆ. 

Tumakur : ಲೋಡ್‌ಶೆಡ್ಡಿಂಗ್ ವಿರೋಧಿಸಿ ರೈತರ ಪ್ರತಿಭಟನೆ

ರೈತರಿಗೆ 5 ಗಂಟೆ ವಿದ್ಯುತ್ ಕೈಗಾರಿಕೆಗಳಿಗೆ 10 ಗಂಟೆ ವಿದ್ಯುತ್ ಸರ್ಕಾರ ನೀಡುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ಸರಳ‌ ದಸರಾ ಆಚರಿಸೋದಾಗಿ ಸರ್ಕಾರ ಹೇಳಿತ್ತು. ಆದರೆ,  ಇದೀಗ ಅದ್ದೂರಿ ದಸರಾ ಆಚರಿಸ್ತಿದೆ. ಬರಗಾಲದಲ್ಲೂ ಮೋಜಿನ ದಸರಾ ಬೇಕಿತ್ತಾ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ರಾಜ್ಯ ವ್ಯಾಪಿ ರಸ್ತೆತೆಡೆದು ಪ್ರತಿಭಟನೆ ಮಾಡಲು ತಿರ್ಮಾನ ಮಾಡಲಾಗಿದೆ. 

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಬೇಡಿಕೆಗಳು: 

*  ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಬೇಕು 
*  ಬೆಳಗಿನ ಸಮಯದಲ್ಲೇ ರೈತರಿಗೆ ಕನಿಷ್ಠ 10 ಗಂಟೆ ವಿದ್ಯುತ್ ಕೊಡಬೇಕು 
*  ಕಬ್ಬಿನ ಎಫ್ ಆರ್ ಪಿ ದರ  ಹೆಚ್ಚಳಕ್ಕೆ ಆಗ್ರಹ 
*  ಬರಪೀಡಿತ 225 ತಾಲ್ಲೂಕಿನಲ್ಲಿ ಶೀಘ್ರವಾಗಿ ರೈತರಿಗೆ ಪರಿಹಾರ ನೀಡಬೇಕು
*  ನೀರಿಲ್ಲದೇ ಬೆಳೆ ಬೆಳೆಯದೇ ಇರುವ ರೈತರಿಗೂ ಬೆಳೆ ಪರಿಹಾರ ನೀಡಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ
ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌