'ನನ್ನನ್ನು ಯಾರೂ ‘ಟಚ್‌’ ಮಾಡಕ್ಕಾಗಲ್ಲ, ಯಾಕಂದ್ರೆ ನಾನು ಪರಮಶಿವ'

By Kannadaprabha News  |  First Published Dec 7, 2019, 7:47 AM IST

ನನ್ನನ್ನು ಯಾರೂ ‘ಟಚ್‌’ ಮಾಡಕ್ಕಾಗಲ್ಲ: ನಿತ್ಯಾನಂದ| ಮೂರ್ಖ ಕೋರ್ಟ್‌ಗಳಿಂದ ನನ್ನನ್ನು ವಿಚಾರಣೆಗೆ ಗುರಿಪಡಿಸಲಾಗುವುದಿಲ್ಲ| ಏಕೆಂದರೆ ನಾನು ಪರಮಶಿವ| ಹೊಸ ವಿಡಿಯೋದಲ್ಲಿ ಸವಾಲೆಸೆದ ಧರ್ಮಗುರು| ‘ನಿಷ್ಠೆಯಿಂದಿದ್ದರೆ ಸಾವು ಎಂಬುದೇ ಇರಲ್ಲ’ ಎಂದ ನಿತ್ಯಾ!


ನವದೆಹಲಿ[ಡಿ.07]: ತನ್ನ ವಿರುದ್ಧ ಭಾರತದಲ್ಲಿ ಹತ್ತು ಹಲವು ಹೊಸ ಪ್ರಕರಣಗಳು ದಾಖಲಾಗುತ್ತಿದ್ದಂತೆಯೇ ಮತ್ತೆ ವಿಡಿಯೋದಲ್ಲಿ ಪ್ರತ್ಯಕ್ಷನಾಗಿರುವ ಕರ್ನಾಟಕದ ರಾಮನಗರ ಜಿಲ್ಲೆ ಬಿಡದಿಯ ವಿವಾದಿತ ಧರ್ಮಗುರು ನಿತ್ಯಾನಂದ ‘ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ’ ಎಂದು ಸವಾಲಿನ ಧಾಟಿಯಲ್ಲಿ ಹೇಳಿದ್ದಾನೆ.

ನಿತ್ಯಾ​ನಂದನ ಶಿಷ್ಯಂದಿರು ಬಿಡದಿಗೆ ವಾಪಸ್‌!

"No judiciary can touch me. M param shiva"
: from an undisclosed location. pic.twitter.com/WXdZ6bGCdO

— Divesh Singh (@YippeekiYay_DH)

Tap to resize

Latest Videos

ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೇಳಲಾದ ನಿತ್ಯಾನಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ‘ನಿಮ್ಮ ಮುಂದೆ ಸತ್ಯವನ್ನು ಬಹಿರಂಗಪಡಿಸಿ ನನ್ನ ಸಮಗ್ರತೆ ಹಾಗೂ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲಿದ್ದೇನೆ. ಈಗ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾನು ಸತ್ಯವೊಂದನ್ನು ಹೇಳುತ್ತಿದ್ದೇನೆ. ನಾನು ಪರಮಶಿವ. ಅರ್ಥವಾಯ್ತಾ? ಯಾವುದೇ ಮೂರ್ಖ ನ್ಯಾಯಾಲಯವೂ ನನ್ನನ್ನು ಸತ್ಯ ಬಹಿರಂಗಕ್ಕೆ ವಿಚಾರಣೆಗೆ ಗುರಿಪಡಿಸಲು ಆಗದು. ನಾನು ಪರಮಶಿವ’ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ. ಆದರೆ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಯಿತು ಎಂಬ ಅಂಶವು ಅದರಲ್ಲಿಲ್ಲ.

ಬಲವಂತವಾಗಿ ಪುರುಷತ್ವ ಪರೀಕ್ಷೆ: ವಿಶ್ವಸಂಸ್ಥೆಗೆ ಭಾರತದ ವಿರುದ್ಧ ನಿತ್ಯಾನಂದ ದೂರು!

‘ನನ್ನ ಜತೆಗಿದ್ದು ನನ್ನ ಬಗ್ಗೆ ನಿಷ್ಠೆಯನ್ನು ನೀವು ಘೋಷಿಸಿದರೆ ನಿಮಗೆ ಸಾವು ಎಂಬುದೇ ಇರಲ್ಲ. ನಾನು ನಿಮಗೆ ವಚನ ನೀಡುತ್ತೇನೆ’ ಎಂದೂ ತಮ್ಮ ಅನುಯಾಯಿಗಳಿಗೆ ನಿತ್ಯಾನಂದ ಹೇಳಿದ್ದಾನೆ. ನವೆಂಬರ್‌ 22ರಿಂದ ಈ ವಿಡಿಯೋ ಹರಿದಾಡುತ್ತಿದೆ.

click me!