ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ಗೆ ಪಿತೃ ವಿಯೋಗ!

By Govindaraj S  |  First Published Apr 12, 2023, 10:33 PM IST

ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ ಅವರ ತಂದೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಸುನೀಲ್ ನಾಯ್ಕ್ ತಂದೆ ಬಿಳಿಯಾ ನಾಯ್ಕ್ (74) ಕೊನೆಯುಸಿರೆಳೆದಿದ್ದಾರೆ. 


ಉತ್ತರ ಕನ್ನಡ (ಏ.12): ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ ಅವರ ತಂದೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಸುನೀಲ್ ನಾಯ್ಕ್ ತಂದೆ ಬಿಳಿಯಾ ನಾಯ್ಕ್ (74) ಕೊನೆಯುಸಿರೆಳೆದಿದ್ದಾರೆ. ಶುಗರ್, ಹೈಬಿಪಿ ಮುಂತಾದ ಸಮಸ್ಯೆಗಳಿಂದ ಬಿಳಿಯಾ ನಾಯ್ಕ್ ಬಳಲುತ್ತಿದ್ದರು.

ಈ ಹಿಂದೆಯೂ ಸಮಸ್ಯೆ ಗಂಭೀರವಾಗಿದ್ದಾಗ ಚಿಕಿತ್ಸೆ ಪಡೆದು ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಒಂದು‌ ವಾರದ ಹಿಂದೆ ಮತ್ತೆ ಅನಾರೋಗ್ಯ ಸಮಸ್ಯೆ ಕಾಡಿದಾಗ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಸುನೀಲ್ ನಾಯ್ಕ್‌ ಅವರ ತಂದೆ ಬಿಳಿಯಾ ನಾಯ್ಕ್ ವಿಧಿವಶರಾಗಿದ್ದಾರೆ.

ಭಟ್ಕಳದಲ್ಲಿ ಶುರುವಾಯ್ತು ತಳಮಳ, ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್‌ ಅಭ್ಯರ್ಥಿ!

Tap to resize

Latest Videos

click me!