
ಮಂಡ್ಯ (ಮಾ.15): ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಭಾನು ಮುಷ್ತಾಕ್ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು. ಅದಕ್ಕೆ ಭಾನು ಮುಷ್ತಾಕ್ ಒಪ್ಪಲಿಲ್ಲ.
ಪುಷ್ಪ ನಮನಕ್ಕೆ ಚಪ್ಪಲಿ ಬಿಟ್ಟು ಬರಬೇಕೆಂದರೆ ನಾನು ಪುಷ್ಪ ನಮನವನ್ನೇ ಸಲ್ಲಿಸುವುದಿಲ್ಲ ಎಂದು ನೇರವಾಗಿ ಹೇಳಿದರು. ಕೊನೆಗೆ ಚಪ್ಪಲಿ ಧರಿಸಿಕೊಂಡು ಬಂದು ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ನಂತರ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಚಪ್ಪಲಿ ನಮ್ಮ ಮನೆ ದೇವರು. ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವವಿದೆ ಎಂದು ಸಮರ್ಥನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ