ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ: ಪೇದೆ ಪೋಸ್ಟ್‌ ವೈರಲ್!

Kannadaprabha News, Ravi Janekal |   | Kannada Prabha
Published : Feb 03, 2026, 07:06 AM ISTUpdated : Feb 03, 2026, 07:08 AM IST
Better to sell egg rice than work in police Hanumasagara cop s post goes viral

ಸಾರಾಂಶ

ಕೊಪ್ಪಳ ಜಿಲ್ಲೆಯ ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ, ಇಲಾಖೆಯ ಕೆಲಸದ ಒತ್ತಡದಿಂದ ಬೇಸತ್ತು 'ಪೊಲೀಸ್ ಕೆಲಸಕ್ಕಿಂತ ಎಗ್‌ರೈಸ್‌ ಮಾರುವುದೇ ಲೇಸು' ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಇದೀಗ ಕೊಪ್ಪಳ ಎಸ್‌ಪಿ ಅವರು ಪೇದೆಯ ವಿರುದ್ಧ ತನಿಖೆಗೆ ಆದೇಶ

ಹನುಮಸಾಗರ(ಫೆ.3): ಪೊಲೀಸ್ ಇಲಾಖೆಯ ಕೆಲಸದ ಒತ್ತಡ ಮತ್ತು ರಜೆ ರಹಿತ ದುಡಿಮೆಯ ಬಗ್ಗೆ ಅಸಮಾಧಾನಗೊಂಡು, ಪೊಲೀಸ್‌ ಕೆಲಸಕ್ಕಿಂತ ಎಗ್‌ರೈಸ್‌ ಮಾರಿಕೊಂಡು ಬದುಕುವುದು ಉತ್ತಮ ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿದ್ದ ಪೊಲೀಸ್ ಪೇದೆ ಬ್ರಹ್ಮಾನಂದ ಎಂಬುವರ ಪೋಸ್ಟ್‌ ಚರ್ಚೆಗೆ ಕಾರಣವಾಗಿದೆ. 

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಎಂಬುವರು, ‘365 ದಿನವೂ ಡ್ಯೂಟಿ, ಒಂದು ದಿನವೂ ರಜೆ ಇಲ್ಲ. ಪೊಲೀಸ್ ಕರ್ತವ್ಯಕ್ಕೆ ಬರುವ ಮುನ್ನ ನೂರು ಬಾರಿ ಯೋಚಿಸಿ, ಬೇರೆ ಇಲಾಖೆಗೆ ಹೋಗುವುದು ಉತ್ತಮ’ಎಂದು ಮತ್ತೊಂದು ಸ್ಟೇಟಸ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ. 

ರಾಜ್ಯದಲ್ಲಿ 8,300 ಪೊಲೀಸ್ ಹುದ್ದೆಗಳ ನೇಮಕಾತಿ ಕುರಿತು ಡಿಜಿ–ಐಜಿಪಿ ಡಾ.ಎಂ.ಎ.ಸಲೀಂ(Dr MA Saleem DG-IGP) ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಂತೆ ಈ ಸ್ಟೇಟಸ್ ಹಾಕಲಾಗಿದೆ ಎನ್ನಲಾಗಿದೆ. ಬ್ರಹ್ಮಾನಂದ ವಿರುದ್ಧ ಕೊಪ್ಪಳ ಎಸ್‌ಪಿ ತನಿಖೆಗೆ ಆದೇಶಿಸಿದ್ದಾರೆ.

ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರಿಕೊಂಡು ಬದುಕುವುದು ಉತ್ತಮ’ ಎಂದು ಸ್ಟೇಟಸ್ ಹಾಕಿದ್ದರು. ಅಲ್ಲದೇ,‘

ಈ ಮಧ್ಯೆ, ವಿಷಯ ಗಂಭೀರತೆ ಪಡೆದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ಪೇದೆ ಬ್ರಹ್ಮಾನಂದ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Better to sell egg rice than be a cop, says Karnataka Constable on WhatsApp status; probe ordered

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು
Karnataka News Live: ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು