
ಉದ್ಯಮಿ ಸಿಜೆ ರಾಯ್ ಆತ್ಮ*ಹತ್ಯೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧವಾಗಿ ಜಿಡಿಎಸ್ ಶಾಸಕ ಎ. ಮಂಜು ಅವರು ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣದ ಹಿಂದೆ ಹಲವು ನಿಗೂಢ ಸಂಗತಿಗಳು ಇದ್ದು, ಇದನ್ನು ಕೇವಲ ಸಾಮಾನ್ಯ ಆತ್ಮ*ಹತ್ಯೆ ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಜೆ ರಾಯ್ ಆತ್ಮಹತ್ಯೆಗೆ ಇಡಿ (ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಅಧಿಕಾರಿಗಳು ನೇರ ಕಾರಣ ಎಂಬ ಆರೋಪವಿದೆ. ಇಡಿಯವರು ಏನು ಮೇಲಿಂದ ಇಳಿದು ಬಂದವರಲ್ಲ. ನಿರಂತರ ಮಾನಸಿಕ ಒತ್ತಡ, ಭಯ ಮತ್ತು ಹಿಂಸಾತ್ಮಕ ಪರಿಸ್ಥಿತಿಗಳಿಂದಾಗಿ ಸಿಜೆ ರಾಯ್ ಹೀಗೆ ಮಾಡಿಕೊಂಡಿರಬಹುದು. ಅವನು ಹೆದರಿ ಸಾವಿಗೆ ಶರಣಾಗಿದ್ದಾನೆ.
ಈ ಪ್ರಕರಣದ ಹಿಂದೆ ಹಲವು ಪ್ರಭಾವಿ ರಾಜಕಾರಣಿಗಳ ಕೈವಾಡ ಇರುವ ಸಾಧ್ಯತೆಯನ್ನು ಶಾಸಕ ಮಂಜು ಅನುಮಾನ ವ್ಯಕ್ತಡಿಸಿದ್ದಾರೆ. ಸಿಜೆ ರಾಯ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದರು. ಆ ಹೂಡಿಕೆಗಳಿಗೆ ಸಂಬಂಧಿಸಿದಂತೆ ಉಂಟಾದ ವಿವಾದಗಳು, ಒತ್ತಡಗಳು ಹಾಗೂ ಆರ್ಥಿಕ ಸಂಕಷ್ಟಗಳು ಅವರ ಮಾನಸಿಕ ಸ್ಥಿತಿಗೆ ಭಾರೀ ಪರಿಣಾಮ ಬೀರಿರಬಹುದು ಎಂದಿದ್ದಾರೆ.
ಇದೇ ಮೊದಲಲ್ಲ. ಹಿಂದೆಯೂ ಇದೇ ರೀತಿಯಲ್ಲಿ ಹಲವು ಉದ್ಯಮಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆಗಳು ದೇಶದಾದ್ಯಂತ ಜಗಜ್ಜಾಹೀರಾಗಿವೆ. ಆ ಎಲ್ಲಾ ಪ್ರಕರಣಗಳಲ್ಲೂ ಸತ್ಯ ಹೊರಬಂದಿದೆಯೇ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಉಳಿದಿದೆ.
ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ರಾಜ್ಯ ಮಟ್ಟದ ತನಿಖೆಯಿಂದ ಸಂಪೂರ್ಣ ಸತ್ಯ ಹೊರಬರುತ್ತದೆಯೇ ಎಂಬ ಅನುಮಾನವನ್ನು ಶಾಸಕ ಎ ಮಂಜು ಅವರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ನಿಜಾಂಶ ಜನರ ಮುಂದೆ ಬರಬೇಕಾದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಪ್ರಕರಣವು ಕೇವಲ ಒಬ್ಬ ಉದ್ಯಮಿಯ ಆತ್ಮ*ಹತ್ಯೆಗೆ ಸೀಮಿತವಾಗದೆ, ರಾಜಕೀಯ, ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳಲ್ಲಿರುವ ದೋಷಗಳನ್ನು ಬಹಿರಂಗಪಡಿಸುವ ಅಗತ್ಯವಿದೆ. ಸತ್ಯ ಹೊರಬಂದಾಗ ಮಾತ್ರ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ