ಮಗನ ಉಳಿಸ್ಕೊಡಿ: ಕೈ ಮುಗಿದು ಬೇಡ್ತಿದ್ದಾರೆ 17ರ ತೌಷಿಕ್‌ನ ಅಮ್ಮ

Suvarna News   | Asianet News
Published : Jun 25, 2021, 03:46 PM ISTUpdated : Jun 25, 2021, 06:11 PM IST
ಮಗನ ಉಳಿಸ್ಕೊಡಿ: ಕೈ ಮುಗಿದು ಬೇಡ್ತಿದ್ದಾರೆ 17ರ ತೌಷಿಕ್‌ನ ಅಮ್ಮ

ಸಾರಾಂಶ

ಕೈ ಹಿಡಿದ ಗಂಡ ಜತೆಗಿಲ್ಲ. ಇದ್ದ ಮಗನೂ ದೂರವಾಗುವ ಭಯ 17 ವರ್ಷದ ಮಗನಿಗಾಗಿ ಕೈ ಮುಗಿದು ಕಣ್ಣೀರಿಡ್ತಿದ್ದಾರೆ ಈ ಅಮ್ಮ  

ಬೆಂಗಳೂರು(ಜೂ.25): ಕೊರೋನಾ ಮಾತ್ರವಲ್ಲ ಇತರ ರೋಗಗಳಿಂದ ಬಳಲುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ಒಂದು ಕಡೆ ಕೈಹಿಡಿದ ಗಂಡನೂ ನೆರವಿಗೆ ಇಲ್ಲದೆ ಇರುವ ಒಬ್ಬ ಮಗನನ್ನು ಕಳೆದುಕೊಳ್ಳುವ ಭಯದಲ್ಲಿ ಈ ತಾಯಿ ಇದ್ದಾರೆ. 

ಬೆಳೆದು ನಿಂತ 17 ವರ್ಷದ ಮಗ ನೋವು ಸಹಿಸಲಾಗದೆ ಸಾವು ಬದುಕಿನ ಹೋರಾಟ ಮಾಡುತ್ತಿರುವುದು ಈ ತಾಯಿಯ ಕರುಳು ಹಿಂಡಿದೆ. ಎದೆಯೆತ್ತರ ಬೆಳೆದ ಮಗನ ಉಳಿಸಿಕೊಳ್ಳಲು ಕೈಮುಗಿದು ನೆರವು ಕೇಳುತ್ತಿದ್ದಾರೆ ಈಕೆ.

ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

ದಾಸರಹಳ್ಳಿಯ ಲಕ್ಷ್ಮೀ ಸ್ಥಿತಿ ಕರುಣಾಜನಕವಾಗಿದ್ದು, 17 ವರ್ಷದ ಮಗನಿಗೆ ‌ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದು ಚಿಕಿತ್ಸೆಗೆ ದೊಡ್ಡ ಮೊತ್ತವನ್ನು ಸಂಗ್ರಹಿಸಬೇಕಾಗಿದೆ. ತೌಷಿತ್ ಗೆ ತುರ್ತು ಲಿವರ್ ಟ್ರಾನ್ಸ್ ಪ್ಲಾಟ್ ನ ಅಗತ್ಯವಿದೆ ಎಂದು ವೈದ್ಯರು ಹೇಳಿಯಾಗಿದೆ.

ಲಿವರ್ ಸಿಕ್ಕರೂ ಆಪರೇಷನ್ ಗೆ 40.  ಲಕ್ಷ ಖರ್ಚಾಗಲಿದ್ದು, ಆಸ್ಪತ್ರೆಯ ಐಸಿಯುನಲ್ಲಿ ತೌಷಿತ್ ಸಾಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಮಗನ ಸ್ಥಿತಿ ನೋಡಲಾಗದೆ ಕಣ್ಣೀರಿಡುತ್ತಿರುವ ತಾಯಿ ಸಹಾಯ ಕೇಳಿದ್ದಾರೆ. ಇಗಾಗಲೇ  ಸರ್ಕಾರಿ ಲಿವರ್ ಬ್ಯಾಂಕ್ ಗೂ ಪತ್ರ ಬರೆದಿರೋ ವೈದ್ಯರು ಆದಷ್ಟು ಬೇಗ ಲಿವರ್ ಸಿಕ್ಕರೆ ಮಾತ್ರ ತೌಷಿಕ್ ಬದುಕುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಅಮ್ಮನ ಕಣ್ಣೀರು ಒರೆಸಲು ನೀವೂ ನೆರವಾಗಿ. ಸಹಾಯ ಮಾಡಲು ಇಚ್ಛಿಸುವವರು ಲಕ್ಷ್ಮೀ ಅವರ ಖಾತೆಗೆ ತಮ್ಮಿಂದಾಗುವಷ್ಟು ನೆರವು ನೀಡಬಹುದು.

Donate to : CANARA BANK 
Name:     Lakshmi Devi
A/C NO:  1146101944217
IFSC:        CNRB001146
Google Pay/ PhonePe : 8296247722

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!