Bengaluru rains: ಬೆಂಗಳೂರಿನಲ್ಲಿ ರಾತ್ರಿ ಮಳೆ ಅರ್ಭಟ, ವಾಹನ ಸವಾರರು ಪರದಾಟ, ಇಂದು ಹೇಗಿರಲಿದೆ ಹವಾಮಾನ?

Kannadaprabha News   | Kannada Prabha
Published : Oct 06, 2026, 05:37 AM IST
Bengaluru traffic jam updates

ಸಾರಾಂಶ

ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ಪೀಣ್ಯ, ರಾಜರಾಜೇಶ್ವರಿ ನಗರ ಸೇರಿದಂತೆ ವಿವಿಧೆಡೆ ಅತಿ ಹೆಚ್ಚು ಮಳೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡಿದರು. ಮಂಗಳವಾರವೂ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ.

ಬೆಂಗಳೂರು (ಅ.6): ನಗರದಲ್ಲಿ ಸೋಮವಾರ ಸಂಜೆ ಮತ್ತು ರಾತ್ರಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ಅಂಡರ್ ಫಾಸ್, ಫ್ಲೈಓವರ್‌ಗಳಲ್ಲಿ ನಿಂತ ಮಳೆನೀರು!

ಭಾರಿ ಮಳೆಗೆ ನಗರದ ನಗರದ ಅನೇಕ ರಸ್ತೆಗಳಲ್ಲಿ ನೀರು ರಭಸವಾಗಿ ಹರಿದಿದೆ. ಗೆದ್ದಲಹಳ್ಳಿ ರೈಲ್ವೆ ಗೇಟ್, ಶಿವಾನಂದ ವೃತ್ತದ ರೈಲ್ವೆ ಅಂಡರ್‌ಪಾಸ್ ಸೇರಿದಂತೆ ನಗರದ ಅನೇಕರ ಅಂಡರ್‌ಪಾಸ್‌ಗಳು, ಫ್ಲೈಓವರ್‌ಗಳಲ್ಲಿ ನೀರು ನಿಂತು ವಾಹನಗಳು ತೆವಳುತ್ತ ಸಾಗಿದವು.

ಎಲ್ಲೆಲ್ಲಿ ಭರ್ಜರಿ ಮಳೆ?

ನಗರದ ಉತ್ತರ, ಕೇಂದ್ರ, ಪಶ್ಚಿಮ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಪೂರ್ವ ಮತ್ತು ದಕ್ಷಿಣ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಪೀಣ್ಯದಲ್ಲಿ ಗರಿಷ್ಠ 51 ಮಿ.ಮೀ ಮಳೆಯಾಗಿದೆ. ರಾಜರಾಜೇಶ್ವರಿ ನಗರ ಮತ್ತು ಯಲಹಂಕದಲ್ಲಿ ತಲಾ 44 ಮಿ.ಮೀ ಮಳೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರಿ ಮಳೆ ಸುರಿದಿದೆ.

ಸಂಜೆ ದಿಢೀರ್ ಮಳೆಯಿಂದ ಸವಾರರು ಪರದಾಟ

ಭಾರಿ ಮಳೆಯಿಂದ ಹೆಣ್ಣೂರು, ಇಂದಿರಾ ನಗರ, ಮಹದೇವಪುರ, ದೂಪನಹಳ್ಳಿ, ಜಯಮಹಲ್, ಪ್ಯಾಲೆಸ್ ಗುಟ್ಟಹಳ್ಳಿ, ಕಂಟೋನ್ಮೆಂಟ್ ರೈಲು ನಿಲ್ದಾಣ, ಕಾಡುಬೀಸನಹಳ್ಳಿ ರಿಂಗ್ ರಸ್ತೆ. ಸಿಬಿಐ ಜಂಕ್ಷನ್ ಫ್ಲೈ ಓವರ್‌, ಕೋರಮಂಗಲ, ಹೆಬ್ಬಾಳ ವೃತ್ತ, ಬಿ. ನಾರಾಯಣಪುರ, ಎಚ್‌ಬಿಆರ್ ಲೇಔಟ್ ಮುಖ್ಯ ರಸ್ತೆ, ನಾಗವಾರ ಮುಖ್ಯ ರಸ್ತೆಗಳು ಜಲಾವೃತಗೊಂಡಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ಇಂದು ಮಳೆ ಮುನ್ಸೂಚನೆ:

ಮಂಗಳವಾರವೂ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಶಿವಣ್ಣನ ಬಳಿಯೇ ಪಟಾಕಿ ಸ್ಫೋಟ, ಅದೃಷ್ಟವಶಾತ್ ತಪ್ಪಿದ ದೊಡ್ಡ ಅಪಾಯ
'ರಚಿತಾ ರಾಮ್ ನಗರ' ಆಯ್ತಾ ರಾಜರಾಜೇಶ್ವರಿ ನಗರ?! ಈ ನಟಿಯ ವಿರುದ್ಧ ಜನರು ಕೂಗಾಡುತ್ತಿರೋದೇಕೆ?