ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ವಾಹನ ಅಡ್ಡಗಟ್ಟಿ ಸ್ಕೂಟರ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸರ ಕೈಗೆ ವಾಹನ ಸವಾರ ಕಚ್ಚಿದ ಘಟನೆ ನಡೆದಿದೆ.
ಬೆಂಗಳೂರು (ಫೆ.12): ರಾಜ್ಯ ರಾಜಧಾನಿ ವಿಲ್ಸನ್ ಗಾರ್ಡನ್ ಬಳಿ ಹೆಲ್ಮೆಟ್ ಧರಿಸದೇ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸರು ಸ್ಕೂಟರ್ ಕೀ ಕಿತ್ತುಕೊಂಡಿದ್ದಾರೆ. ಈ ವೇಳೆ ನಾನು ಅರ್ಜೆಂಟ್ ಹೋಗಬೇಕಿದೆ ಎಂದಾಗಲೂ ಕೀ ಕೊಡದ ಪೊಲೀಸರ ಕೈಯನ್ನೇ ವಾಹನ ಸವಾರ ಕಚ್ಚಿದ ಘಟನೆ ನಡೆದಿದೆ.
ಇನ್ನು ವಿಲ್ಸನ ಗಾರ್ಡನ್ ವ್ಯಾಪ್ತಿಯಲ್ಲಿ ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಸಂಚಾರಿ ಪೊಲೀಸರು ಕೀ ಕಿತ್ತುಕೊಂಡಿದ್ದಾರೆ. ಈ ವೇಳೆ ತಮ್ಮ ಕೀ ಕೊಡುವಂತೆ ಸ್ಕೂಟರ್ ಸವಾರ ಕೇಳಿದ್ದಾನೆ. ಆಗ, ನಾನು ಆಸ್ಪತ್ರೆಗೆ ಹೋಗಬೇಕಿದೆ, ತುರ್ತಿನಲ್ಲಿ ಹೆಲ್ಮೆಟ್ ಬಿಟ್ಟು ಬಂದಿದ್ದೇನೆ. ಹೀಗಾಗಿ, ಸ್ಕೂಟರ್ ಕೀ ಕೊಡಿ ಎಂದಾಗಲೂ ಕೊಡದ ಟ್ರಾಫಿಕ್ ಪೊಲೀಸರ ಕೈಗೆ ವಾಹನ ಸವಾರ ಕಚ್ಚಿದ್ದಾನೆ. ಇದನ್ನು ಮತ್ತೊಬ್ಬ ಸಂಚಾರಿ ಪೊಲೀಸರು ವಿಡಿಯೋ ಮಾಡಿದ್ದಾರೆ. ನೀನು ಕೈ ಕಚ್ಚಿದ ವಿಡಿಯೋ ಆಗುತ್ತಿದೆ, ದೂರು ದಾಖಲಾದರೆ ವಿಡಿಯೋ ವೈರಲ್ ಆಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆಯ್ತು, ಅದೇನ್ ವೈರಲ್ ಮಾಡ್ತೀರೋ ಮಾಡ್ಕೊಳಿ, ನನ್ನ ಸ್ಕೂಟರ್ ಕೀ ಕೊಡಿ ಎಂದು ಹಠವಿಡಿದು ಪೊಲೀಸರ ದುಂಬಾಲು ಬಿದ್ದಿದ್ದಾನೆ.
HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕದ ಬಿಗ್ ಅಪ್ಡೇಟ್ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!
ಈ ಘಟನೆ ಬೆಂಗಳೂರು ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ನಲ್ಲಿ ನಡೆದಿದೆ. ಸ್ಕೂಟರ್ ಸವಾರ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರ ಕೈಗೆ ಕಚ್ಚಿದ್ದಾನೆ. ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ, ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ತವ್ಯನಿರತ ಸಂಚಾರಿ ಪೊಲೀಸರ ಕೈ ಕಚ್ಚಿದ್ದರಿಂದ ವಾಹನ ಸವಾರನ ಮೇಲೆ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದಾರೆ. ಪೊಲೀಸರ ದೂರಿನ ಹಿನ್ನೆಲೆಯಲ್ಲಿ ವಿಡಿಯೋ ಸಾಕ್ಷಿಯ ಆಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1.20 ಕೋಟಿಯಷ್ಟು ವಾಹನಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕಂಡು ಬರುತ್ತದೆ. ಹೆಲ್ಮೆರ್ಟ ಧರಿಸದ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸದ, ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್, ವಾಹನ ಚಾಲನೆ ವೇಳೆ ಫೋನಿನಲ್ಲಿ ಮಾತನಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ಅತಿಯಾದ ಕರ್ಕಶ ಶಬ್ಬ ಉಂಟುಮಾಡುವುದು ಸೇರಿದಂತೆ ಪ್ರತಿನಿತ್ಯ ಹಲವು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗುತ್ತಲೇ ಇರುತ್ತವೆ.
ಕೊಡಗು ಬೈಕ್ ಗುದ್ದಿ ಯುವಕ ಸಾವು; ಈ ಅಪಘಾತಕ್ಕೆ ನಾನೇ ಕಾರಣವೆಂದು ಬೈಕ್ ಸವಾರ ಆತ್ಮಹತ್ಯೆ!
ಸಂಚಾರಿ ಪೊಲೀಸರು ವಾಹನ ಸವಾರರಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾದಲ್ಲಿ ಅವರನ್ನು ಹಿಡಿದು ದಂಡ ವಸೂಲಿ ಮಾಡಲು ಹಾಗೂ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಸಂಚಾರಿ ಪೊಲೀಸರು ಕೂಡ ನಿಂತಿರುತ್ತಾರೆ. ಹೆಲ್ಮೆಟ್ ಧರಿಸದ, ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದ ವಾಹನಗಳನ್ನು ತಡೆದು ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಾರೆ. ಆದರೆ, ಇಂತಹ ಸಂದರ್ಭದಲ್ಲಿ ಹಲವು ಬೈಕ್ ಸವಾರರು ವಾಹನಗಳನ್ನು ಜೋರಾಗಿ ಓಡಿಸುತ್ತಾ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳುವ ಭರಾಟೆಯಲ್ಲಿ ಮತ್ಯಾವುದೋ ಅಪಘಾತವನ್ನು ಮಾಡಿ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕುತ್ತಾರೆ.