ಇಂಡಿಗೋ ಎಡವಟ್ಟಿಂದ ನಾಸಾ ಟ್ರಿಪ್ ಮಿಸ್: ವಿದ್ಯಾರ್ಥಿಗೆ 1.6 ಲಕ್ಷ ಪರಿಹಾರ

By Suvarna NewsFirst Published May 30, 2021, 5:53 PM IST
Highlights
  • ನಾಸಾಗೆ ಹೋಗಬೇಕೆಂದು ಕನಸು ಕಂಡಿದ್ದ ಬೆಂಗಳೂರಿನ ವಿದ್ಯಾರ್ಥಿ
  • ಇಂಡಿಗೋ ಎಡವಟ್ಟಿನಿಂದ ಮಿಸ್ ಆಯ್ತು ಡ್ರೀಮ್ ಟ್ರಿಪ್
  • ಈ ಯುವಕ ಮಾಡಿದ್ದೇನು ನೋಡಿ ? ಸಿಕ್ಕಿದ್ದು ಮಾತ್ರ ಭರ್ತಿ 1.6 ಲಕ್ಷ ಪರಿಹಾರ

ಬೆಂಗಳೂರು(ಮೇ.30): ನ್ಯಾಷನಲ್ ಏರೊನಾಟಿಕ್ಸ್ & ಸ್ಪೇಸ್ ಎಡ್ಮಿನಿಸ್ಟ್ರೇಷನ್‌ಗೆ ಟ್ರಿಪ್ ಕನಸು ಕಂಡಿದ್ದ ಬೆಂಗಳೂರಿನ ವಿದ್ಯಾರ್ಥಿ ಕನಸು ಇಂಡಿಂಗೋ ಎಡವಟ್ಟಿನಿಂದ ಮಿಸ್ಸಾಗಿದೆ. ಟಿಕೆಟ್ ವಿಚಾರವಾಗಿ ಎಡವಟ್ಟು ಮಾಡಿದ್ದ ಇಂಡಿಗೋ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕನಿಗೆ ಕೊನೆಗೂ ನ್ಯಾಯ ಸಿಕ್ಕಿದೆ.

ವಿದ್ಯಾರ್ಥಿ ನಾಸಾ ಕನಸನ್ನು ಭಗ್ನಗೊಳಿಸಿದ್ದಕ್ಕೆ 1.6 ಲಕ್ಷ ಪರಿಹಾರ, ಟಿಕೆಟ್ ಹಣವನ್ನೂ ಹಿಂತಿರುಗಿಸುವಂತೆ ಕೋರ್ಟ್ ಆದೇಶಿಸಿದೆ. ಆಗಸ್ಟ್ 10,2019 ಕೆವಿನ್ ಮಾರ್ಟಿನ್‌ಗೆ ಮುಖ್ಯ ದಿನವಾಗಿತ್ತು. ಈತ ದೆಹಲಿ ತಲುಪಲು ಚೆನ್ನೈ ಏರ್‌ಪೋರ್ಟ್‌ನಲ್ಲಿ ಇಂಡಿಗೋನಲ್ಲಿ ಪ್ರಯಾಣಿಸಲು ತಲುಪಿದ್ದ. ಇದು ಬೆಳಗ್ಗೆ 6.30ಕ್ಕೆ ದೆಹಲಿ ತಲುಪಬೇಕಿತ್ತು. ಆದರೆ ಇಂಡಿಗೋ ಸಿಬ್ಬಂದಿ ಮಾತ್ರ ಆತನಲ್ಲಿ ಕನ್ಫರ್ಮ್ ಟಿಕೆಟ್ ಇಲ್ಲ ಎಂದು 18 ವರ್ಷದ ಯುವಕನಿಗೆ ಪ್ರಯಾಣ ನಿರಾಕರಿಸಿದ್ದರು. 

ಚೋಕ್ಸಿ ಬೆನ್ನಲ್ಲೇ ಮಲ್ಯಗೂ ಹೆಚ್ಚಿದ ಸಂಕಷ್ಟ; UB ಷೇರು ಮಾರಾಟಕ್ಕೆ ಮುಂದಾದ ಬ್ಯಾಂಕ್...

ಮಾರ್ಟಿನ್ 2019ರ ಜೆಇಇ ಕರ್ನಾಟಕ ಟಾಪರ್. ದೇಶಕ್ಕೆ ಎರಡನೇ ಸ್ಥಾನ ಪಡೆದಿದ್ದ ವಿದ್ಯಾರ್ಥಿ. ಐಐಟಿ ಗುವಾಹಟಿಯಲ್ಲಿ ನಡೆದ ಟೆಕ್ನೊತ್ಲೋನ್‌ನಲ್ಲಿ ಗೆದ್ದು ನಾಸಾಗೆ ಟ್ರಿಪ್ ಗಿಟ್ಟಿಸಿಕೊಂಡಿದ್ದ. ಆದರೆ ಇಂಡಿಗೋ ಸಿಬ್ಬಂದಿ ಬೋರ್ಡಿಂಗ್ ಪಾಸ್‌ನಲ್ಲಿ '0' ಸೀಟ್ ನಂಬರ್ ಹಾಕಿ ಕೊಟ್ಟು ಫ್ಲೈಟ್ ಓವರ್ ಬುಕ್ ಆಗಿದೆ ಎಂದಿದ್ದರು. ಉತ್ಸಾಹದಲ್ಲಿದ್ದ ಮಾರ್ಟಿನ್ ಬಹಳ ಬೇಸರದಿಂದ ಹಿಂದಿರುಗಿದ್ದರು.

ಬೆಂಗಳೂರಿಗೆ ಬಂದ ವಿದ್ಯಾರ್ಥಿ ಇಂಡಿಗೋದಲ್ಲಿ ದೂರು ದಾಖಲಿಸಿದ್ದ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮಾರ್ಟಿನ್ ನಂತರ ಬೆಂಗಳೂರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದಾರೆ. 16 ತಿಂಗಳು ಈ ಕುರಿತು ವಿಚಾರಣೆ ನಡೆದಿತ್ತು. ಏಪ್ರಿಲ್ 3, 2021ರಂದು ತೀರ್ಪು ನೀಡಲಾಗಿದ್ದು ಇಂಡಿಗೋ 1 ಲಕ್ಷ ಪರಿಹಾರ ನೀಡಬೇಕೆಂದಿದೆ ಕೋರ್ಟ್.

ಕನಸಿನ ಟ್ರಿಪ್ ಮಿಸ್ ಆಗಿದ್ದಕ್ಕೆ ಆತ ಅನುಭವಿಸಿದ ಮಾನಸಿಕ ತೊಂದರೆಗಾಗಿ 50 ಸಾವಿರ ಪರಿಹಾ ಮತ್ತು, ಕೋರ್ಟ್ ಖರ್ಚಿಗಾಗಿ 10 ಸಾವಿರ, ಮತ್ತು ಬಡ್ಡಿಯೊಂದಿಗೆ ದೆಹಲಿ ಟಿಕೆಟ್ ಬೆಲೆ 8605 ಮರಳಿಸಬೇಕೆಂದು ಕೋರ್ಟ್ ಇಂಡಿಗೋಗೆ ಆದೇಶ ನೀಡಿದೆ.

click me!