ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಸ್ಥಗಿತ : ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

By Suvarna NewsFirst Published May 30, 2021, 11:41 AM IST
Highlights
  • ಕೆಲ ಕಂಪನಿಗಳು ರೆಮ್‌ಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ
  • ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಮಾಡದಿರುವ ವಿಚಾರಕ್ಕೆ ಸ್ಪಷ್ಟನೆ 
  • ಲಾಕ್‌ಡೌನ್ ಬಗ್ಗೆ ಶೀಘ್ರ ಮುಖ್ಯಮಂತ್ರಿಗಳಿಂದ ಅಂತಿಮ ನಿರ್ಧಾರ

ಬೆಂಗಳೂರು (ಮೇ.30): ನಮಗೆ ಕೆಲ ಕಂಪನಿಗಳು ರೆಮ್‌ಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ.  ಆ ಕಾರಣಕ್ಕೆ ಕೇಂದ್ರ ನಾವು ರಾಜ್ಯದ ನಿರ್ಧಾರಕ್ಕೆ ತಲೆ ಹಾಕುವುದಿಲ್ಲ ಎಂದು ಹೇಳಿದೆ.  ಮಾರುಕಟ್ಟೆಯಲ್ಲಿ ಈಗ ರೆಮ್‌ಡಿಸಿವಿರ್ ಸಿಗಲಿದೆ, ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.  

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್, ಮೊದಲು ಬೇಡಿಕೆ ಜಾಸ್ತಿ ಇದ್ದು, ಸರಬರಾಜು ಕಡಿಮೆ ಇದ್ದಾಗ ನಿಯಂತ್ರಣ ಮಾಡಲಾಗುತಿತ್ತು.  ಯಾವ ರಾಜ್ಯಕ್ಕೆ ಎಷ್ಟು ಬೇಕೋ, ಅಷ್ಟು ರೆಮ್‌ಡೆಸಿವಿರ್ ಪೂರೈಸಲಾಗುತಿತ್ತು ಎಂದು ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಮಾಡದಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ಈಗ ನಮಗೆ ಕೆಲ ಕಂಪನಿಗಳು ರೆಮಿಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ. ಅಲ್ಲಿ ತೆಗೆದುಕೊಳ್ಳಲು ಹೇಳಿದ್ದಾಗಿ ಸುಧಾಕರ್ ತಿಳಿಸಿದರು. 
 
ಫಂಗಸ್ ಖಾಯಿಲೆಗೆ ವ್ಯಾಕ್ಸಿನ್ ಕೊರತೆ ವಿಚಾರ :  ಸದಾನಂದಗೌಡರು ಲಸಿಕೆ ಕೊಡಿಸಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ.  ಎಂಟಕ್ಕೂ ಹೆಚ್ಚು ಕಂಪನಿಗಳ ಜೊತೆ ಮಾತನಾಡಿ ತಯಾರಿಕೆ ಮಾಡಿಕೊಂಡಿದ್ದಾರೆ.  ದೇಶಾದ್ಯಂತ 80ಸಾವಿರ ವಯಲ್ಸ್ ಮಾರುಕಟ್ಟೆಗೆ ಬಂದಿದೆ.  ನಮಗೂ 8-10 ಸಾವಿರ ವಯಲ್ಸ್ ಪೂರೈಸಿದ್ದಾರೆ.  1,250 ಕೇಸ್ ನಮ್ಮಲ್ಲಿದೆ.  ಡೆತ್ ಆಡಿಟ್ ಮಾಡಲು ಹೇಳಿದ್ದೇನೆ ಎಂದು ಸುಧಾಕರ್ ಹೇಳಿದರು. 

"

ಫಂಗಸ್‌ನಿಂದ 30-35 ಜನರ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರವಾಗಿ ಡೆತ್ ಆಡಿಟ್ ಮಾಡಿ ವರದಿ ನೀಡಲು ಹೇಳಿದ್ದೇನೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಎರಡೂ ಕಡೆ ನೀಡುತ್ತಿದ್ದೇವೆ.  ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುತ್ತೇವೆ ಎಂದರು. 

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್ ..

ಲಾಕ್ ಡೌನ್ ಅಂತ್ಯ :  ಲಾಕ್ ಡೌನ್‌ನಿಂದ ಏನೆಲ್ಲ ಒಳ್ಳೆಯದಾಗಿದೆ ಎನ್ನುವುದು ಈಗಾಗಲೇ ಗೊತ್ತಿದೆ.  47ರಷ್ಟಿದ್ದ ಪಾಸಿಟಿವ್, ಕಳೆದ ಹದಿನೈದು ದಿನದಲ್ಲಿ 14-15ಕ್ಕೆ ಇಳಿದಿದೆ.  ಬೇರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿದ್ದ ಪ್ರಕರಣದಲ್ಲಿ ಈಗ 8% ಬಂದಿದೆ.  ಇದೆಲ್ಲವನ್ನೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಾಗುವುದು. ಅಂತಿಮವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು. 

ಮೂರನೇ ಅಲೆಯ ಬಗ್ಗೆ ಸಚಿವರ ಮಾಹಿತಿ :  ನಾನು ಆರೋಗ್ಯ ಸಚಿವನಾಗಿ ಇಷ್ಟೇ ಹೇಳುತ್ತೇನೆ.  ಯಾರಿಗೆ ಬರುತ್ತದೆ,  ಯಾರಿಗೆ ಇಲ್ಲ ಅನ್ನೋದಕ್ಕಿಂತ ಲಸಿಕೆ ತೆಗೆದುಕೊಳ್ಳುವುದು ಮುಖ್ಯ.  ಎರಡು ಲಸಿಕೆ ಡೋಸ್ ತೆಗೆದುಕೊಳ್ಳೋವರೆಗೂ ಇದು ಮುಂದುವರೆಯಲಿದೆ.

ಮುಖ್ಯ ಉದ್ದೇಶ ಎಂದರೆ ಲಸಿಕೆಯನ್ನು ತಂದು ಎಲ್ಲರಿಗೂ ಪೂರೈಸಲಾಗುವುದು.  ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು. ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.  ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ. ಎಲ್ಲವನ್ನೂ ನೋಡುಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.

ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸೋ ವೃತ್ತಿಯವರಿಗೆ. ಜೊತೆ ಜೊತೆಯಲ್ಲಿ ಎಲ್ಲರಿಗೂ ಎಲ್ಲಿಯವರೆಗೂ ತಲುಪಲು ಸಾಧ್ಯವೋ ಅಲ್ಲಿವರೆಗೂ ನೀಡುತ್ತೇವೆ.   ಎಲ್ಲರಿಗೂ ಲಸಿಕೆ ಪ್ರಕ್ರಿಯೆ ಮುಗಿಯುವ ವರೆಗೂ, ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!