ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ

Published : Nov 21, 2025, 05:44 PM IST
Bengaluru robbery

ಸಾರಾಂಶ

ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ, ನಿವೃತ್ತಿ ಜೀವನದಲ್ಲಿ ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದ 78 ವರ್ಷದ ಹಿರಿಯ ನಾಗರೀಕನ ಪ್ರಶ್ನೆಗೆ ಸದ್ಯ ಪೊಲೀಸರ ಬಳಿಯೂ ಉತ್ತರ ಸಿಕ್ಕಿಲ್ಲ. 

ಬೆಂಗಳೂರು (ನ.21) ಬೆಂಗಳೂರಿನ 7 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಕಿಂಗ್ ಪಿನ್‌ಗಳು ಅರೆಸ್ಟ್ ಆಗಿದ್ದಾರೆ. ಈ ಪೈಕಿ ಕಾನ್ಸ್‌ಟೇಬಲ್ ಅಣ್ಣಪ್ಪ, ಸಿಎಂಎಸ್ ಮಾಜಿ ಸಿಬ್ಬಂದಿ ಝೆವಿಯರ್ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಸರಿಸುಮಾರು 5 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ. ಇದು ದಿಢೀರ್ ಆಗಿ ನಡೆದಿದ್ದಲ್ಲ, ಸಾಕಷ್ಟು ಪ್ಲಾನ್ ಮಾಡಿ, ತಯಾರಿಗಳೊಂದಿಗೆ ಈ ರಾಬರಿ ನಡೆಸಲಾಗಿದೆ. ಈ ಪೈಕಿ ನಿವೃತ್ತಿ ಜೀವನದಲ್ಲಿ 78 ವರ್ಷದ ಗಂಗಾಧರ್ ಬೆಚ್ಚಿ ಬಿದ್ದಿದ್ದಾನೆ. ಬರುವ ಪಿಂಚಣಿಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ ಗಂಗಾಧರ್‌ಗೆ ಇದೀಗ ನಿದ್ದೆ ಇಲ್ಲದಾಗಿದೆ.

ಇನ್ನೋವ ಕಾರಿನ ಜಾಡು ಹಿಡಿದು ಹೊರಟ ಪೊಲೀಸ್

ಜಯನಗರದ ಬ್ಯಾಂಕ್‌ಗೆ ತರುತ್ತಿದ್ದ 7 ಕೋಟಿ 11 ಲಕ್ಷ ರೂಪಾಯಿ ನಗದು ಹಣದ ಸಿಎಂಎಸ್ ವಾಹನ ತಡೆದು ಸಂಪೂರ್ಣ ಹಣ ದರೋಡೆ ಮಾಡಲಾಗಿತ್ತು. ಕೇಂದ್ರದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಇನ್ನೋವಾ ಕಾರಿನಲ್ಲಿ ಆಗಮಿಸಿದ ಕಳ್ಳರು ಹಣ ಎಗರಿಸಿ ಪರಾರಿಯಾಗಿದ್ದರು. ಬಳಿಕ ಇನ್ನೋವಾ ಕಾರನ್ನು ಆಂಧ್ರದ ಗುಡಿಪಾಲ ಬಳಿ ನಿಲ್ಲಿಸಿ ಹಣವನ್ನು ವಿಂಗಡಿಸಿ ಪರಾರಿಯಾಗಿದ್ದರು. ಸಿಸಿಟಿವಿ ದ್ಯಶ್ಯದಲ್ಲಿ ಇನ್ನೋವಾ ಕಾರಿನಲ್ಲಿ ಬಂದು ದರೋಡೆ ಸ್ಪಷ್ಟವಾಗಿತ್ತು. ಕಾರಿನ ನಂಬರ್ ನೋಟ್ ಮಾಡಿ ಜಾಲ ಹಿಡಿದು ಹೊರಟ ಪೊಲೀಸರು ಬಂದಿದ್ದು ಇದೇ ಹಿರಿಯ ನಾಗರೀಕ ಗಂಗಾಧರ್ ಮನೆಗೆ.

ತನ್ನ ಪಾಡಿಗೆ ಇದ್ದ ಗಂಗಾಧರ್ ಮನೆ ಬಾಗಿಲು ಬಡಿದ ಪೊಲೀಸ್

ಗಂಗಾಧರ್ ವಯಸ್ಸು 78, ನಿವೃತ್ತಿ ಜೀವನ. ನೆಮ್ಮದಿಯಾಗಿ ಮನೆಯಲ್ಲಿದ್ದ ಗಂಗಾಧರ್‌ಗೆ ಅಚ್ಚರಿಯಾಗಿತ್ತು. ಕಾರಣ ಪೊಲೀಸರ ತಂಡವೇ ಗಂಗಾಧರ್ ಬಾಗಿಲು ಬಡಿದಿತ್ತು. ಬಾಗಿಲು ತೆರೆದ ಗಂಗಾಧರ್ ಬಳಿ ಪೊಲೀಸರು ವಾಹನದ ಕುರಿತು ಕೇಳಿದ್ದಾರೆ. ಕಳ್ಳತನಕ್ಕೆ ಬಳಸಿದ ಇನ್ನೋವ ಕಾರಿನ ನಂಬರ್ ಪ್ಲೇಟ್ KA 03 NC **52. ಈ ನಂಬರ್ ಕುರಿತು ಹೇಳಿದಾಗ, ಹೌದು ನನ್ನ ವಾಹನ ನಂಬರ್ ಎಂದು ಗಂಗಾದರ್ ಉತ್ತರಿಸಿದ್ದಾರೆ. ಸರಿ ವಾಹನದ ಡಾಕ್ಯುಮೆಂಟ್ ತರಲು ಹೇಳಿದ್ದಾರೆ. ಗಂಗಾಧರ್ ತಮ್ಮ ವಾಹನದ ದಾಖಲೆ ನೀಡಿದ್ದಾರೆ.

ಎರಡು ಟ್ರಾಫಿಕ್ ಉಲ್ಲಂಘನೆ

ಗಂಗಾಧರ್ ಬಳಿ ಮಾರುತಿ ಸುಜುಕಿ ಸ್ವಿಫ್ಟ್ ಕಾರಿತ್ತು. ಇದರ ನಂಬರ್ KA 03 NC **52. ಈ ಕಾರು ನೋ ಪಾರ್ಕಿಂಗ್, ಸಿಗ್ನಲ್ ಜಂಪ್ ಸೇರಿ ಎರಡು ನಿಯಮ ಉಲ್ಲಂಘನೆ ದಾಖಲಾಗಿತ್ತು. ತನ್ನ ನಿಯಮ ಉಲ್ಲಂಘನೆಗೆ ಪೊಲೀಸರು ಕೇಳುತ್ತಿದ್ದಾರೆ ಎಂದು ಸುಮ್ಮನಿದ್ದರು. ಡಾಕ್ಯುಮೆಂಟ್ ನೋಡಿದ ಪೊಲೀಸರು, ಯಾರೋ ನಂಬರ್ ಪ್ಲೇಟ್ ದುರ್ಬಳಕ ಮಾಡಿದ್ದಾರೆ ಎಂದು ಹೇಳಿ ಹೊರಟು ಹೋಗಿದ್ದರು.

ಮಾಹಿತಿ ತಿಳಿದಾಗ ಬೆವತು ಹೋಗಿದ್ದೆ

ಪೊಲೀಸರು ತೆರಳಿದ ಬಳಿಕ ಎಲ್ಲವೂ ಶಾಂತವಾಗಿಯೇ ಇತ್ತು. ಕೆಲ ಹೊತ್ತಿನ ಬಳಿ ಟಿವಿ ನೋಡುತ್ತಾ ಕುಳಿತಿದ್ದ ಗಂಗಾದರ್‌ಗೆ ಸುದ್ದಿಗಳು ಬಿತ್ತರಗೊಳ್ಳುತ್ತಿರುವುದು ಗಮನಿಸಿದ್ದಾರೆ. ತನ್ನ 7 ಕೋಟಿ ರೂಪಾಯಿ ದರೋಡೆಯಲ್ಲಿ ತನ್ನ ಕಾರಿನ ನಂಬರ್ ಬಳಸಿದ್ದಾರೆ ಎಂಬ ಮಾಹಿತಿ ತಿಳಿದು ಗಂಗಾದರ್ ಬೆಚ್ಚಿ ಬಿದ್ದಿದ್ದಾರೆ. ನಾನು ನಿವೃತ್ತಿ ಜೀವನದಲ್ಲಿದ್ದೇನೆ, ಬರುವ ಪಿಂಚನೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ನನ್ನ ನಂಬರ್ ಯಾಕೆ ಬಳಸಿದರು ಎಂದು ಗಂಗಾದರ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸದ್ಯ ಪೊಲೀಸರ ಬಳಿ ಉತ್ತರವಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ